ಶಿಗ್ಗಾವ್

ಕಬಡ್ಡಿ ಕ್ರೀಡೆಯು ದೇಶಕ್ಕೆ ಹೆಗ್ಗಳಿಕೆ, ಹೆಸರು ತಂದು ಕೊಟ್ಟಿದೆ: ದುಂಡಿಗೌಡ್ರ

ಕಬಡ್ಡಿ ಕ್ರೀಡೆಯು ದೇಶಕ್ಕೆ ಹೆಗ್ಗಳಿಕೆ, ಹೆಸರು ತಂದು ಕೊಟ್ಟಿದೆ: ದುಂಡಿಗೌಡ್ರ

ಶಿಗ್ಗಾವಿ 25: ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ನೂರಾರು ವರ್ಷಗಳ ಪುರಾತನ ಕ್ರೀಡೆಯಾಗಿದ್ದು, ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ  ನಡೆದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಂಸದ ಸಾಂಸ್ಕೃತಿಕ ಕಾರ್ಯಕ್ರಮದಡಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಶಿಗ್ಗಾವಿ ಕ್ಷೇತ್ರ ಯುವಕರಿಗೆ ಏರಿ​‍್ಡಸಿದ್ದ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಯುವಕರಲ್ಲಿನ ಪ್ರತಿಭೆ ಅನಾವರಣಕ್ಕೆ ಇಂತಹ ಪಂದ್ಯಾವಳಿಗಳು ಸೂಕ್ತ ವೇದಿಕೆಯಾಗಿವೆ. ಯುವಕರ ದೈಹಿಕ ಸಾಮಾರ್ಥ್ಯ ವೃದ್ಧಿಗೊಳಿಸಲು ಪೂರಕವಾದ ಗ್ರಾಮೀಣರ ಕ್ರೀಡೆಗಳಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ಆಯೋಜಿಸಿರುವುದು ನಿಮ್ಮೆಲ್ಲರ ಉತ್ತಮ ಆರೋಗ್ಯಕರ ವಾತಾವರಣ ಸೃಷ್ಟಿಸಿದೆ ಎಂದು ಹೇಳಿದರು. 

ಗಂಜೀಗಟ್ಟಿ ಚಿರಮೂರ್ತೇಶ್ವರ ಮಠದ ಡಾ. ವೈಜೀನಾಥ ಶಿವಲಿಂಗೇಶ್ವರ ಶಿವಾಚಾರ್ಯ ಶ್ರೀಗಳು, ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಬಹು ಮುಖ್ಯವಾಗಿದ್ದು ಯುವಕರು ಶುದ್ಧ ಆಹಾರ ಸೇವಿಸಿ, ಪರಿಶುದ್ಧ ನಮ್ಮ ಪ್ರಾಚೀನ ಕ್ರೀಡೆಗಳಿಗೆ ಒತ್ತು ನೀಡುವ ಮೂಲಕ ನಮ್ಮ ಪುರಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. 

ವಿರಕ್ತಮಠದ ಸಂಗನಬಸವ ಶ್ರೀಗಳು ಟ್ರೋಫಿ ಅನಾವರಣಗೊಳಿಸಿದರು. ಜಿಪಂ.ಮಾಜಿ ಸದಸ್ಯೆ ಡಾ.ಶೋಭಾ ನಿಸ್ಸೀಮಗೌಡ್ರ, ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ಪರಶುರಾಮ ಸೊನ್ನದ, ಮಾತನಾಡಿದರು. ಸವಣೂರ ಬಿಜೆಪಿ ಅಧ್ಯಕ್ಷ ಗಂಗಾಧರ ಬಾಣದ, ತಿಪ್ಪಣ್ಣ ಸಾತಣ್ಣನವರ, ನರಹರಿ ಕಟ್ಟಿ, ಹನುಮರೆಡ್ಡಿ ನಡುವಿನಮನಿ, ಮಂಜುನಾಥ ಬ್ಯಾಹಟ್ಟಿ, ರಮೇಶ ವನಹಳ್ಳಿ, ಫಕ್ಕೀರ​‍್ಪ ಕುಂದೂರು, ಡಾ.ಮಲ್ಲೇಶಪ್ಪ ಹರಿಜನ, ನಿಂಗಪ್ಪ ಹರಿಜನ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ