ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿ ಕಾಣಬಹುದು: ಜಂಭುನಾಥ
ಸಿಂದಗಿ 18: ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು ಎಂದು ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಂಭುನಾಥ ಕಂಚ್ಯಾಣಿ ಹೇಳಿದರು.
ಪಟ್ಟಣದ ಸ್ಥಳಿಯ ವಿದ್ಯಾಚೇತನ ಪ್ರಕಾಶನವು ಪಟ್ಟಣದ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಪದ್ಮರಾಜ ಬಿ.ಎಸ್.ಡಬ್ಲ್ಯೂ. ಮತ್ತು ಬಿ.ಕಾಂ. ಮಹಿಳಾ ಮಹಾವಿದ್ಯಾಲಯ ಸಯಹೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ವಿದ್ಯಾಚೇತನ ಪ್ರಕಾಶನದ ರಜತವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಎರಡು ದಿನದ ಮಕ್ಕಳ ಕಥಾರಚನಾ ಕಮ್ಮಟ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.
ಮಕ್ಕಳ ಸಾಹಿತ್ಯದಲ್ಲಿ ಹೊಸ ಪ್ರಯೋಗಗಳು ಆಗಬೇಕು. ಹಿಂದೆ ಮಕ್ಕಳ ಸಾಹಿತ್ಯ ರಚನೆಯಲ್ಲಿ ಒಂದೇ ಚೌಕಟ್ಟು ಇತ್ತು. ಆ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ರಚನೆಯಾಗಿವೆ. ಈಗ ವಿಜ್ಞಾನ ಯುಗ ಇಂದು-ನಾಳೆ ಚಂದ್ರ, ಮಂಗಳ ಲೋಕದಲ್ಲಿ ಹೊಸ ಪರಿಸರ ಸೃಷ್ಠಿಸುವ ಕಾಲವಿದೆ. ಆದ್ದರಿಂದ ಮಕ್ಕಳ ಸಾಹಿತ್ಯದಲ್ಲಿ ವೈಜ್ಞಾನಿಕ, ವೈಚಾರಿಕ, ಭಾವನಾತ್ಮಕ ಕಥೆಗಳನ್ನು ರಚನೆಯಾಗಬೇಕು ಎಂದು ಹೇಳಿದರು.
ಮಕ್ಕಳ ಸಾಹಿತ್ಯ ಮಕ್ಕಳ ವ್ಯಕ್ತಿತ್ವ ರೂಪಿಸುವಂತ ಸಾಹಿತ್ಯ. ಆದರೆ ಇಂದು ಮಕ್ಕಳ ಸಾಹಿತ್ಯ ನಿರ್ಲಕ್ಷ ್ಯಕ್ಕೆ ಒಳಗಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಕಥೆ, ಕವನ, ಕಾದಂಬರಿ ಹಾಗೂ ನಾಟಕಗಳು ರಚನೆಯಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರು ಪ್ರೌಢ ಸಾಹಿತ್ಯದಲ್ಲಿ ವಿವಿಧ ಗದ್ಯ, ಪದ್ಯ, ಕಾವ್ಯ, ಕಥೆ, ನಾಟಕ ಹೀಗೆ ವಿವಿಧ ಸಾಹಿತ್ಯಕ್ಕೆ ಪ್ರಶಸ್ತಿ ನೀಡಿದರೆ ಮಕ್ಕಳ ಸಾಹಿತ್ಯಕ್ಕೆ ಕೆವಲ ಒಂದೇ ಪ್ರಶಸ್ತಿ ನೀಡುವ ಮೂಲಕ ನಿರ್ಲಕ್ಷಕ್ಕೊಳಗಾಗಿದೆ ಎಂದು ಹೇಳಿದರು.
ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರು ಮಕ್ಕಳ ಕಥೆಗಳಲ್ಲಿ ವಸ್ತುವೈವಿಧ್ಯತೆ ಕುರಿತು ಉಪನ್ಯಾಸ ನೀಡಿ, ಮಕ್ಕಳ ಕಥೆಗಳು ಮಕ್ಕಳ ಮನೋಲ್ಲಾಸಗೊಳಿಸುವಂತಿರಬೇಕು. ಮಕ್ಕಳ ಸಾಹಿತ್ಯ ರಚನೆ ಸಂದರ್ಭದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ, ಜ್ಞಾನ ಅಭಿವೃದ್ಧಿಯಾಗುವ ಅಂಶಗಳನ್ನು ಗಮನದಲ್ಲಿಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಶಿವಮಾಂತ ಪೂಜಾರಿ ಮಾತನಾಡಿದರು. ಕಮ್ಮಟದಲ್ಲಿ ಭಾಗಿಯಾದ ವಿದ್ಯಾರ್ಥಿನಿ ಸುನಂದಾ ಸಾತಿಹಾಳ ಹಾಗೂ ಇತರರು ಅನಿಕೆಗಳನ್ನು ವ್ಯಕ್ತ ಪಡೆಸಿದರು. ಕಥಾ ಕಮ್ಮಟದಲ್ಲಿ ಕಾಲೇಜಿನ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಚಾರ್ಯ ಎಂ.ಎಸ್. ಹಯ್ಯಾಳಕರ, ಮಕ್ಕಳ ಸಾಹಿತಿ ರಾ.ಶೀ. ವಾಡೇದ, ಎಸ್.ಎಸ್. ಸಾತಿಹಾಳ, ಶಿವಕುಮಾರ ಶಿವಸಿಂಪಿಗೇರ, ಉಪನ್ಯಾಸಕರಾದ ಗದಗಯ್ಯ ನಂದಿಮಠ, ಶ್ರೀನಿವಾಸ ಪತ್ತಾರ, ಮಹಾಂತೇಶ ನೂಲಾನವರ, ಉಮೇಶ ಪೂಜಾರಿ, ಸರಸ್ವತಿ ಪಟ್ಟೆದ, ಗಿರೀಶ ಕುಲಕರ್ಣಿ, ರೇವಣಸಿದ್ದಪ್ಪ ಹಾಳಕೆರಿ, ಆಶಿಫ್ ಕೊಕಣಿ, ಸಾಯಬಣ್ಣ ಸಜ್ಜನ, ಸ್ವೇತಾ ಶೆಟ್ಟರ, ಶೃತಿ ಹೂಗಾರ, ಪ್ರಭಾವತಿ ಮಾಲಿಪಾಟೀಲ, ವಿಜಯಲಕ್ಷ್ಮಿ ಜೋಗುರ, ಮುರ್ತುಜಬಿ ಬೆಗಂ ಬಿರಾದಾರ, ಭಾಗ್ಯಶ್ರೀ ನಂದಿಮಠ, ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.
ಉಪನ್ಯಾಸಕಿ ಸರಸ್ವತಿ ಪಟ್ಟೆದ ಸ್ವಾಗತಿಸಿದರು. ಭಾಗ್ಯಶ್ರೀ ಬಿರಾದಾರ ನಿರೂಪಿಸಿದರು. ವಿದ್ಯಾಶ್ರೀ ಬಳೂಂಡಗಿ ವಂದಿಸಿದರು.