ದೇಶದ ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದಾಗಿದೆ: ಶಂಕರಾನಂದ ಶ್ರೀ
ಇಂಡಿ16: ರಾಜ್ಯದ ಸಹಕಾರಿ ವ್ಯವಸ್ಥೆ ಕುರಿತು ಜನರಲ್ಲಿ ಅಪನಂಬಿಕೆ ಮೂಡಿಸಿದ್ದ ಕಾಲಘಟ್ಟದಲ್ಲಿ ಸಹಕಾರಿ ವ್ಯವಸ್ಥೆ ಬಲವರ್ಧನೆ ಮಾಡಿದವರಲ್ಲಿ ಲಚ್ಯಾಣ ಗ್ರಾಮದ ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಶಿವಪುತ್ರ ವಾಡಿ ಕೂಡ ಒಬ್ಬರು ಎಂದು ಆಳೂರ ಸಿಧ್ಧಾರೂಡ ಮಠದ ಶಂಕರಾನಂದ ಶ್ರೀಗಳು ಹೇಳಿದರು.
ಅವರು ಬುಧವಾರ ತಾಲೂಕಿನ ಲಚ್ಯಾಣ ಗ್ರಾಮದ ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ 5ನೇ ವಾರ್ಷಿಕ ಸರ್ವಸಾಧರಣ ಮಹಾಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ದೇಶದ ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದಾಗಿದೆ. ಎಲ್ಲರಿಗೂ ತಾನು, ತನಗಾಗಿ ಎಲ್ಲರೂ ಎಂಬುದೇ ಸಹಕಾರಿ ಸಂಘದ ತತ್ವ. ರೈತರ ಮತ್ತು ವ್ಯಾಪಾರಸ್ಥರ ಹಿತ ಕಾಪಾಡುವುದೇ ಸಹಕಾರಿ ಸಂಘದ ಉದ್ದೇಶ. ಆರ್ಥಿಕ, ಸಾಮಾಜಿಕ ರಾಜಕೀಯ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸಹಕಾರ ಅತ್ಯಗತ್ಯ ಸಹಕಾರಿ ಸಂಘಗಳಲ್ಲಿ ಮಹಿಳೆಯರು ಸ್ತ್ರೀ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ವ್ಯವಹಾರ, ಹೈನುಗಾರಿಕೆ, ವ್ಯಾಪಾರ, ಗೃಹ ಉದ್ಯೋಗ ಮುಂತಾದ ಕೌಶಲ್ಯ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ ಅರ್ಥಿಕ ಜೀವನ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಎಲ್ಲರೂ ಸಹಕಾರ ಮನೋಭಾವ ಹೊಂದಿ ಜೀವನವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.
ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಶಿವಪುತ್ರ ವಾಡಿ ಮಾತನಾಡಿ 2020-21ನೇ ಸಾಲಿನಲ್ಲಿ 10ಲಕ್ಷ ನಿವ್ವಳ ಲಾಭ ಗಳಿಸಿದೆ. ಸಹಕಾರಿ ಸಂಘದ ಸದಸ್ಯರುಗಳಿಗೆ ಪ್ರತಿ ವರ್ಷ ಶೇ6 ರಷ್ಟು ಲಾಭಾಂಶ ವಿತರಿಸಲಾಗಿದೆ. ಸಹಕಾರಿ ಸಂಘಗಳು ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಪೂರಕವಾಗಿವೆ. ಜನರು ವಿಶ್ವಾಸವಿಟ್ಟು ಸಂಘಗಳಲ್ಲಿ ಠೇವಣಿ ಇಡುತ್ತಾರೆ ಮತ್ತು ವ್ಯಾಪಾರಸ್ಥರು ಸಾಲ ಪಡೆಯುತ್ತಾರೆ. ಸಹಕಾರಿ ಸಂಘದ ಆಡಳಿತ ಮಂಡಳಿ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಿದಾಗ ಬೆಳವಣಿಗೆ ಹೊಂದಲು ಸಾಧ್ಯವಿದೆ ಎಂದು ಹೇಳಿದರು.
ಸಂಘದ ನಿರ್ದೇಶಕ ಸಿದ್ದು ಹತ್ತಳ್ಳಿ ಮಾತನಾಡಿ ಶ್ರೀ ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ 2016ರಲ್ಲಿ 5ಲಕ್ಷ ಬಂಡವಾಳದಿಂದ ಆರಂಭಗೊಂಡಿತು. ಇಂದು ಅದು ವಾರ್ಷಿಕ 20ಕೋಟಿ ವ್ಯಾವಹಾರ ನಡೆಸುವ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಲಚ್ಯಾಣ, ತಾಂಬಾ, ತಾಳಿಕೋಟಿ, ಚಡಚಣ ವ್ಯಾಪ್ತಿಯಲ್ಲಿ ಒಟ್ಟು 4 ಶಾಖೆಗಳನ್ನು ಅರಂಬಿಸಲಾಗಿದೆ. ಎಲ್ಲ ಶಾಖೆಗಳನ್ನು ಗಣಕೀಕರಣ ಗೊಳಿಸಲಾಗಿದೆ. ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಾದೇವ ಮುಜಗೊಂಡ, ಬೀಮರಾಯಗೌಡ ಪಾಟೀಲ, ವಿಠ್ಠಲ ಕರಾಳೆ, ನಾನಾಗೌಡ ಪಾಟೀಲ, ಈರಣ್ಣ ಐರಸಂಗ, ಕಮಲಾಕರ ಕದಮ, ಶಿವಪುತ್ರ ವಾಡಿ, ಎಮ್.ಎನ್. ಕಾಳೆ, ಎಮ್.ಆರ್. ವಸ್ತ್ರದ, ಅಪ್ಪಣ್ಣ ಕಲ್ಲುರ, ರಾಜಶೇಖರ ಗಂಗನಳ್ಳಿ, ದುಂಡಪ್ಪಗೌಡ ಪಾಟೀಲ,ಕಾಶಿನಾಥ ಪರಂಪುರ, ನಿರ್ದೇಶಕರಾದ ಮಂಜುಳಾ ಹತ್ತಿ, ಸಿದ್ದು ಹತ್ತಳ್ಳಿ, ಮಹಾದೇವ ವಾಡಿ, ನಾಗನಾಥ ಬಿರಾದಾರ, ಭೀಮರಾಯ ನಿಂಬರಗಿ, ರಾಜಶೇಖರ ಪೂಜಾರಿ, ಗೋವಿಂದ ಹಿಬಾರೆ, ಶಾಂತಪ್ಪ ಚೌಗಲೆ, ಸವಿತಾ ಪಾಟೀಲ, ಮಾದೇವ ವಾಲೀಕಾರ, ಶಂಕರ ಪವಾರ ಮುಂತಾದವರು ಉಪಸ್ತಿತರಿದ್ದರು.