ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು
ಶಿಗ್ಗಾವಿ : ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡದೇ ಹಾಗೂ ಮಾಸ್ಕ ಧÀರಿಸದೇ ಹಾಗೇ ಎಲ್ಲಿಬೇಕು ಅಲ್ಲಿ ಸುತ್ತಾಡುತ್ತಿದ್ದರೆ 100 ರೂ. ದಂಡವನ್ನು ಭರಿಸುತ್ತೇವೆ ಅಲ್ಲದೇ ಸೆಕ್ಷನ್ 144 ಕಠಿಣ ಕಾನೂನನ್ನು ಜಾರಿಗೆ ತರಬೇಕಾಗುತ್ತದೆ ಎಂದು ಸವಣೂರ ಉಪವಿಬಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹೇಳಿದರು.ಪಟ್ಟಣದ ತಾಲೂಕಾಡಳಿತ, ಪುರಸಭೆ, ಆರೋಗ್ಯ ಇಲಾಖೆ, ಪೋಲಿಸ ಇಲಾಖೆ ಹಾಗೂ ಉಳಿದ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾಸ್ಕ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಕೊರೋನಾ ಎರಡನೇಯ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮತ್ತು ಕೊರೋನಾ ಸೋಂಕಿತರ ಸಂಖೈ ಹೆಚ್ಚಾಗುತ್ತಿದ್ದು ಕಾರಣ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸುವುದರಿಂದ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವುದರಿಂದ ಕೊರೋನಾ ಸೋಂಕಿನಿಂದ ದೂರವಿರಬಹುದು ಅಲ್ಲದೇ ಸೋಂಕಿನಿಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು ಹಾಗೂ ಮರಣ ಪ್ರಮಾಣ ಕಡಿಮೆ ಮಾಡಬಹುದು ಎಂದರು.
ಪೋಲಿಸ ಠಾಣೆಯಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾಸ್ಕ ದಿನದ ಮಹತ್ವ ಹಾಗೂ ಮಾಸ್ಕ ಉಪಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು ಹಾಗೂ ಮಾಸ್ಕ ದರಿಸದೇ ಇರುವ ಪಟ್ಟಣದ ಅಂಗಡಿಗಳ ಮಾಲಿಕರಿಗೆ ಹಾಗೂ ಸಾರ್ವಜನಿಕರಿಗೆ ದಂಡವನ್ನು ವಿಧಿಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ ಮಂಜುನಾಥ ಮುನ್ನೋಳಿ, ಸಿಪಿ.ಐ ಬಸವರಾಜ ಹಳಬಣ್ಣವರ, ತಾಲೂಕ ಆರೋಗ್ಯಾಧಿಕಾರಿ ಡಾ. ಹನುಮಂತಪ್ಪ ಕುಡಚಿ, ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಸಿ.ಡಿ.ಪಿಓ ನೀತಾ ವಾಡಕರ, ಪಿಎಸ್.ಐ ಕೆ.ಎನ್.ಹಳ್ಳಿ, ಡಾ.ಗೈಬು ನಾಯಕರ, ಡಾ. ಸುರೇಶ ಪೂಜಾರ, ಶ್ರೀಕಾಂತ ಸರ್ಜಾಪೂರ, ಜಗನಾಥ ಕಮತರ, ಶೈಲಜಾ ಪಾಟೀಲ, ವಿ.ಎಸ್.ಪಾಟೀಲ, ಶೃತಿ ಓಲೇಕಾರ, ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.