ಬಳ್ಳಾರಿ

ಗ್ರಾಮ ವಾಸ್ತವ್ಯ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಕಾರ್ಯಕ್ರಮ ಯಶ್ವಸಿ

ಗ್ರಾಮ ವಾಸ್ತವ್ಯ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಕಾರ್ಯಕ್ರಮ ಯಶ್ವಸಿ

ಲೋಕದರ್ಶನ ವರದಿ 

ಕಂಪ್ಲಿ 16: ತಾಲೂಕಿನ ನಂ.10ಮುದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ‘ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ತಹಸೀಲ್ದಾರ್ ಗೌಸಿಯಾಬೇಗಂ ನೇತೃತ್ವದಲ್ಲಿ  ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಗ್ರಾಮ ವಾಸ್ತವ್ಯದೊಂದಿಗೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಧ್ವನಿಯಾಗುವ ಕಾರ್ಯಕ್ರಮ ಯಶ್ವಸಿಯಾಗಿ ಜರುಗಿತು.  


ತಹಸೀಲ್ದಾರ ಗೌಸಿಯಾಬೇಗಂ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮದ ಮನೆಗಳಿಗೆ ತೆರಳಿ ವೈಯಕ್ತಿಕ ಸಮಸ್ಯೆಗಳನ್ನು ಆಲಿಸಿದರು. ನಂತರ ಆರೋಗ್ಯ ಶಿಕ್ಷಣ ಪ್ರಚಾರ ಆಂದೋಲನ, ಆರೋಗ್ಯ ತಪಾಸಣೆ, ಆಹಾರ ಧಾನ್ಯ, ಪೌಷ್ಠಿಕ ಆಹಾರ ಪ್ರದರ್ಶನ, ಬದು ನಿರ್ಮಾಣ ಭಿತ್ತಿಪತ್ರ ಪ್ರದರ್ಶನ ಮಳಿಗೆಗಳಿಗೆ ಚಾಲನೆ ನೀಡಿದರು.ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ,  ಗ್ರಾಮದ ಸ್ವಚ್ಚತೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಗ್ರಾಮಸ್ಥರು ಜಾಗೃತಿ ತೋರಬೇಕು ಗ್ರಾಮದಲ್ಲಿ ಮೂಲ ಸೌಕರ್ಯಗಳ ಅಗತ್ಯವಿದೆ. ಮೂಲಸೌಕರ್ಯಗಳಿಗಾಗಿ ಪಂಚಾಯತ್‌ರಾಜ್ ಇಲಾಖೆಗೆ ಸಂಬಂಧಿಸಿದ 9, ಶಿಕ್ಷಣ ಮತ್ತು,ಜೆಸ್ಕಾಂಗೆ ಸಂಬಂದಿಸಿದಂತೆ ಹಳೆಯ ವಿದ್ಯುತ್ ಕಂಬ,ವಿದ್ಯುತ್ ತಂತಿ ಬದಲಿಸುವಂತೆ, ಟಿಸಿಗಳನ್ನು ಸ್ಥಳಾಂತರಿಸುವಂತೆ ಸೇರಿ ಮೂಲ ಸೌಕರ್ಯಗಳನ್ನು ಕೋರಿ ಸುಮಾರು 3ಕ್ಕೂ ಅಧಿಕ ಅರ್ಜಿಗಳು ಬಂದಿವೆ ಎಂದರು.ಕಂದಾಯ ಇಲಾಖೆಗೆ ಸಂಬಂಧಿಸಿದ 106 ಸೇರಿ ಒಟ್ಟು 121ಅರ್ಜಿಗಳು ಬಂದಿವೆ. ನಾನಾ ಮಾಶಾಸನಗಳು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಮಾಶಾಸನ ಒದಗಿಸುವ ಕ್ರಮ ಕೈಗೊಳ್ಳಲಾಗುವುದು. ಗ್ರಾಮಠಾಣ ಭೂಮಿಯ ಹಂಚಿಕೆ ಮಾಡಲು ಸರ್ವೇ ಮಾಡಿ ಹಕ್ಕುಪತ್ರ ನೀಡಲು ಕೈಗೊಳ್ಳಲಾಗುವುದು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ವಿಪ್ರದ ಲಕ್ಷ್ಮಿದೇವಿ ಭೀಮೇಶ್ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮ ವಾಸ್ತವ್ಯ ಗ್ರಾಮಸ್ಥರ ಗ್ರಾಮದ ಜನತೆಗೆ ವರವಾಗಿದೆ. ನಾಗರೀಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಪದೇ ಪದೇ ಗ್ರಾಮ ವಾಸ್ತವ್ಯ ಆಯೋಜಿಸಬೇಕು ಎಂದು ಹೇಳಿದರು. ನಂ.10ಮುದ್ದಾಪುರದ ಸಹಿಪ್ರಾ ಶಾಲೆಗೆ ‘ಉತ್ತಮ ಅಭಿವೃದ್ಧಿ ಶಾಲೆ’ ಪ್ರಶಸ್ತಿಗಳಿಸಿದ್ದರಿಂದ ಬಡ್ತಿ ಮುಖ್ಯಗುರು ಕೆ.ಲಕ್ಷ್ಮಿದೇವಿಯನ್ನು ಗೌರವಿಸಲಾಯಿತು. ನಾಲ್ವರು ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು.ನದಿ ನೀರು ಯೋಜನೆ ಅನುಷ್ಠಾನಗೊಳಿಸಬೇಕು, ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸೌಕರ್ಯ ಒದಗಿಸಬೇಕು, ಚರಂಡಿ ಸ್ವಚ್ಚಗೊಳಿಸಬೇಕು. ಗ್ರಾಮಠಾಣದ ನಿವೇಶನದಲ್ಲಿ ಮನೆ ನಿರ್ಮಿಸಲು ಅನುಮತಿ ನೀಡಬೇಕು, ಮಿನಿವಿಧಾನಸೌಧ ನಂ.10ಮುದ್ದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ನಂ.10ಮುದ್ದಾಪುರದ ಹೆಸರು ಬರೆಯಿಸಬೇಕು, ವಿವಿಧೋದ್ದೇಶ ತಾಲೂಕು ಪುನರ್ವಸತಿ ಕಾರ್ಯಕರ್ತ ಹುದ್ದೆ ನೇಮಕಗೊಳಿಸಬೇಕು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಜನತೆ ಒತ್ತಾಯಿಸಿದರು. ಗ್ರಾಮ ವಾಸ್ತವ್ಯದಲ್ಲಿ ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಗ್ರೇಡ್‌-2ತಹಸೀಲ್ದಾರ್ ವೆಂಕಟೇಶ್ ಆಶ್ರಿತ್, ತಾಪಂ ಮೇನೇಜರ್ ವಾಸುಕಿ, ಪಿಡಿಒ ಬೀರಲಿಂಗ, ಎಡಿಎಲ್‌ಆರ್ ಮಂಜೇಶ್, ಎಸಿಡಿಪಿಒ ಎಳೆ ನಾಗಪ್ಪ, ವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್, ಅಬಕಾರಿ ಇಲಾಖೆ ಉಪನೀರಿಕ್ಷಕ ಎಸ್‌.ಎನ್ ರ್ಘೋಪಡೆ ಜೆಇಗಳಾದ ಷಣ್ಮುಖ, ಪ್ರಾಣೇಶ್, ಬಿ.ಐ ಸೂಡಿ, ನಾನಾ ಇಲಾಖಾಧಿಕಾರಿಗಳು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. 


ಸುದ್ದಿ ಓದಿ