ಬಳ್ಳಾರಿ

ಮೊಹರಂ ಕಡೆದಿನ ಪೀರಲು ದೇವರ ಮೆರವಣಿಗೆ

ಮೊಹರಂ ಕಡೆದಿನ ಪೀರಲು ದೇವರ ಮೆರವಣಿಗೆ

ಲೋಕದರ್ಶನ ವರದಿ 

ಕಂಪ್ಲಿ 21: ಕಂಪ್ಲಿಯಲ್ಲಿ ಮೊಹರಂ ನಿಮಿತ್ತ ಪೀರಲು ದೇವರುಗಳ ಸವಾರಿ ಮೆರವಣಿಗೆ ಶುಕ್ರವಾರ ಜರುಗಿತು.  ಪಟ್ಟಣ ಹಾಗೂ ತಾಲೂಕಿನ ಕೆಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಆಲಾಯಿ ಕುಣಿಯಲ್ಲಿ ಕೆಂಡ ಹಾದು ತಮ್ಮ ಭಕ್ತಿಯನ್ನು ಸಮರ​‍್ಿಸಿದರು. ಕರೊನಾ ಛಾಯೆಯ ಮಧ್ಯೆಯೂ ಮೊಹರಂ ಹಬ್ಬಕ್ಕೆ ಸಡಗರ ಸಂಭ್ರಮಗಳಿಂದ ತೆರೆ ಕಂಡಿತು. 

ಪಟ್ಟಣದಲ್ಲಿ ಮೊಹರಂ ಕೊನೆ ದಿನ ಶುಕ್ರವಾರ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಕಂಪ್ಲಿಯ ನಡುವಲ ಮಸೀದಿ, ತಳವಾರ್ ಓಣಿ, ಮುದ್ದಾಪುರ ಅಗಸಿ, ಸಂತೆ ಮಾರುಕಟ್ಟೆ, 2ನೇ ವಾರ್ಡ್‌ ಸೇರಿದಂತೆ  ನಾನಾ ಕಡೆಯ ಮಸೀದಿ ಬಳಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಶರಬತ್ ವಿತರಿಸಿದರು. ರಿಯಾಜ್, ಫಾರುಕ್, ಯು.ಖಾಜಾ, ಎಲ್‌.ವೀರೇಶ್, ಪ್ರದೀಪ್, ಶ್ರೀಕಾಂತ್, ನವೀನ್, ಸಂತೋಷ್, ಸುಭಾಸ್, ಮಿಥುನ್ ಸೇರಿದಂತೆ ಯುವ ಮುಖಂಡರು ಇದ್ದರು. 


ಸುದ್ದಿ ಓದಿ