ಅಂದು ಸಮಸ್ಯೆ... ಇಂದು ಪರಿಹಾರ! ಅಭಿವೃದ್ಧಿಯ ಪಥದಲ್ಲಿ ಬೀದರ್ ದಕ್ಷಿಣ : ಜನರ ಕನಸುಗಳಿಗೆ ಶಾಶ್ವತ ಪರಿಹಾರ
ಬೀದರ ಜೂನ್ 3 : ಸಿಂಧೋಲ ಗ್ರಾಮದ ಬಳಿ ಸುಮಾರು ?7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಸೇತುವೆ ಕೇವಲ ಒಂದು ಅಭಿವೃದ್ಧಿ ಕಾಮಗಾರಿಯಲ್ಲ, ಸುತ್ತಮುತ್ತಲಿನ 40ಕ್ಕೂ ಹೆಚ್ಚು ಗ್ರಾಮಗಳ ಜನರ ಬಹುಕಾಲದ ಕನಸಿನ ಸಾಕಾರವಾಗಿದೆ. ಮಳೆಗಾಲದಲ್ಲಿ ಜನರು ಅನುಭವಿಸುತ್ತಿದ್ದ ಸಂಚಾರದ ಸಂಕಷ್ಟಕ್ಕೆ ಈ ಸೇತುವೆ ಶಾಶ್ವತ ಪರಿಹಾರ ಒದಗಿಸಿದೆ ಎಂದು ವೀರೇಶ್ವರ ಶಿವಾಚಾರ್ಯ ಧನಾಶ್ರೀ ಅವರು ಹೇಳಿದರು.ಬೀದರ್ ದಕ್ಷಿಣ ಕ್ಷೇತ್ರದ ಸಿಂಧೋಲ ಗ್ರಾಮದ ಬಳಿ ನಿರ್ಮಿಸಲಾದ ಸೇತುವೆ ಲೋಕಾರೆ್ಣ ಹಿನ್ನೆಲೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಂದ ಆಯೋಜಿಸಿದ್ದ ಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ಸೇತುವೆ ಅತ್ಯಂತ ಉಪಯುಕ್ತವಾಗಿದೆ. ಈ ಮಹತ್ವದ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರಿಗೆ ಸಮರ್ಿಸಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಅಭಿವೃದ್ಧಿ ಪರ ಕಾಳಜಿಯನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಇಂತಹ ಜನೋಪಯೋಗಿ ಯೋಜನೆಗಳು ಇನ್ನಷ್ಟು ಆಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು, “ಸಿಂಧೋಲ ಗ್ರಾಮದ ಬಳಿ ಮಳೆಗಾಲದಲ್ಲಿ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.
ಇದೀಗ ಸುಮಾರು ?7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆಯು ಸುತ್ತಮುತ್ತಲಿನ ಸುಮಾರು 40 ಗ್ರಾಮಗಳ ಜನರಿಗೆ, ರೈತರಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಮಹತ್ತರ ಅನುಕೂಲ ಕಲ್ಪಿಸಿದೆ” ಎಂದರು.“ಹಲವು ವರ್ಷಗಳ ಕಾಲ ಜನರು ಎದುರಿಸುತ್ತಿದ್ದ ಸಂಚಾರದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿರುವ ಈ ಸೇತುವೆ ಗ್ರಾಮೀಣ ಅಭಿವೃದ್ಧಿಯ ಮಹತ್ವದ ಹೆಜ್ಜೆಯಾಗಿದೆ. ಗ್ರಾಮಸ್ಥರು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿರುವುದು ಅಪಾರ ಸಂತಸ ತಂದಿದೆ. ಜನರ ವಿಶ್ವಾಸ, ಪ್ರೀತಿ ಹಾಗೂ ಆಶೀರ್ವಾದವೇ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆಯಾಗಿದೆ” ಎಂದು ಹೇಳಿದರು.