ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಬಳ್ಳಾರಿ 22: 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಬಳ್ಳಾರಿಯ ಆದಾಯ ತೆರಿಗೆ ಇಲಾಖೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಎಸ್.ಲಿಂಗರಾಜ ಅವರು ಮಾತನಾಡಿ ಪ್ರಕೃತಿಯನ್ನು ನಾವು ಮಾಡಿದ್ದಲ್ಲಿ ಇದು ದೇವರು ಕೊಟ್ಟ ಆಸ್ತಿ, ಇದನ್ನು ನಾವು ಉಳಿಸಿ ಬೆಳೆಸಿಕೊಂಡು ಹೋದರೆ ಮಾತ್ರ ಪ್ರಕೃತಿ ಸಮತೋಲನ ಕಾಪಾಡಲು ಸಾಧ್ಯ ಎಂದು ಹೇಳಿದರು. ಜೊತೆಗೆ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಕಾಡುಗಳನ್ನು ಹೊಂದಿರುವ ರಾಜ್ಯ, ಹಾಗಾಗಿ ನಾವು ಅರಣ್ಯವನ್ನು ಜೊತೆಗೆ ಪ್ರಾಣಿ, ಪಕ್ಷಿಗಳನ್ನು ಉಳಿಸಿ ಬೆಳೆಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಸಿದ್ದರಾಮಪ್ಪ ಅವರು ಮಾತನಾಡುತ್ತಾ, ಆದಾಯ ತೆರಿಗೆ ಇಲಾಖೆಯವರು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿದೆ. ಏಕೆಂದರೆ ಈ ದಿನ ನೆಟ್ಟ ಸಸಿ, ಗಿಡ ಮತ್ತು ಮರವಾಗಿ ಬೆಳೆದು, ನೆರಳು ಕೊಡುವುದರ ಜೊತೆಗೆ ಮನುಷ್ಯನಿಗೆ ಉಸಿರಾಡಲು ಮುಖ್ಯವಾಗಿ ಆಮ್ಲಜನಕವನ್ನು ನೀಡುತ್ತದೆ ಎಂದು ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಯನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೆಕ್ಕ ಪರಿಶೋಧಕರಾದ ಟಿ.ಸಿ.ಗೌಡ ಹಾಗೂ ಪನ್ನಾರಾಜ್, ಬಳ್ಳಾರಿ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷರಾದ ಹೆಚ್.ಎಸ್.ಪ್ರಸನ್ನಕುಮಾರ, ಟ್ಯಾಕ್ಸ್ ಪ್ರಾಕ್ಟಿಷನರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್, ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ರತ್ನಾಕರ, ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕರಾದ ಜಗದೀಶ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಡಿ.ಪಾಂಡುರಂಗ ಮಾತನಾಡುತ್ತಾ, ಅರಣ್ಯ ಇಲಾಖೆಯು ಬಹಳ ಮುತುವರ್ಜಿಯಿಂದ ಅರಣ್ಯವನ್ನು ಕಾಪಾಡುತ್ತಿದೆ. ಅದಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಅತ್ಯವಶ್ಯ ಎಂದು ಹೇಳಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತ ದೇಶದ ಬೆನ್ನೆಲುಬಾಗಿರುವ ರೈತ ಗೀತೆಯನ್ನು ಜಡೇಶ ಮತ್ತು ತಂಡದವರು ಆಲಿಸಿದರು. ಶಿಕ್ಷಕ ರ್ರಿಸ್ವಾಮಿ ಅವರು ನಿರೂಪಿಸಿದರು. ಡಿ.ಪಾಂಡುರಂಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಅವರು ಕಾರ್ಯಕ್ರಮ ನಿರ್ವಹಿಸಿದರು.