ದೃಢ ಸಂಕಲ್ಪದಿಂದ ಸಾಧನೆಯ ಹಾದಿ ಸುಗಮ : ಗೀತಾಬಾಯಿ ಭೀಮಾನಾಯ್ಕ್
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 29 : ಸಧನೆಯ ಹಾದಿ ಸುಗಮವಾಗಬೇಕಾದರೆ ಮನಸ್ಸಿನಲ್ಲಿ ದೃಢ ಸಂಕಲ್ಪ ಹೊಂದಿರಬೇಕೆ ಎಂದು ಸಮಾಜ ಸೇವಕಿ ಗೀತಾಬಾಯಿ ಭೀಮಾನಯ್ಕ್ ಹೇಳಿದರು.
ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಜನನಿ ಸೇವಾ ಟ್ರಸ್ಟ್ನ ವತಿಯಿಂದ ನೀಡಲಾದ 2021ನೇ ಸಾಲಿನ ಜನನಿ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಚಿತ್ತತೆಯಿಂದ ಎಕಾಗ್ರತೆ ಕಾಯ್ದುಕೊಂಡು ಸಾಧನೆಯ ಏಣಿ ಎರಿದಾಗ ಮಾತ್ರ ಸಫಲತೆ ಕಾಣಬಹುದಾಗಿದೆ,ಸಾಧನೆಯ ಹಾದಿ ಮುಳ್ಳುಹಾಸಿಗೆಯಿಂದ ಕೂಡಿದ್ದು ಸಂತೋಷ ಬದಿಗೊತ್ತಿ, ಅವಮಾನ ಎದುರಿಸುತ್ತಾ ಸಾಗಿ,ಜೀವನವನ್ನೆ ಪಣಕ್ಕಿಟ್ಟು ಸಾಧನೆಯ ಗುರಿ ತಲುಪಬೇಕಾದ ಸನ್ನಿವೇಶಗಳನ್ನು ಕಾಣಬಹುದಾಗಿದೆ ಇಂತಹ ಸಾಧನೆಯ ಹಾದಿಯನ್ನು ಅನೇಕ ಕಷ್ಟಗಳನ್ನು ಎದುರಿಸಿ ಸಾಧಿಸಿದ ಸಾಧನೆಯನ್ನು ಗುರುತಿಸಿ ಇಂದು ಜನನ ಸೇವಾ ಟ್ರಸ್ಟ್ನಿಂದ ಪ್ರಶಸ್ತಿಯನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ತಾಲೂಕು ಪಂಚಾಯತಿಯ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಬುಡ್ಡಿಬಸವರಾಜ್ ಮಾತನಾಡಿ ಯೋಗ್ಯತೆಯನುಸಾರ ಪ್ರಶಸ್ತಿಗಳ ಪ್ರದಾನ ಮಾಡುವ ಕಲ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಹಂಪಾಪಟ್ಟಣ ಗ್ರಾಮದ ಜನನಿ ಸೇವಾ ಟ್ರಸ್ಟ್ ಉತ್ತಮ ರೀತಿಯಲ್ಲಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ, ಇಲ್ಲಿ ಪ್ರಶಸ್ತಿ ಪಡೆಯುತ್ತಿರುವವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಸಾಧಕರಾಗಿದ್ದಾರೆ, ಇಂತಹ ಮಾಹಾನ್ ವ್ಯೆಕ್ತಿಗಳಿ ಇಂದು ಟ್ರಸ್ಟ್ ಮೂಖಾಂತರ ನೀಡುತ್ತಿರುವ ಪ್ರಶಸ್ತಿಯು ಮುಂದಿನ ಸಾಧನೆಗೆ ದಾರಿಯಾಗುವುದು ಎಂಬುದರಲ್ಲಿ ಅನುಮಾನವಿಲ್ಲವೆಂದರು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪರಮೇಶ್ವರಯ್ಯ ಸೊಪ್ಪಿಮಠ,ಸಮಾಜ ಸೇವಕಿ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿದರು.ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಮ.ನಿ.ಪ್ರ ಪ್ರಭು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂಧರ್ಭದಲ್ಲಿ ಹಂಪಾಪಟ್ಟಣದ ವಿಎಸ್ಎಸ್ಎನ್ ಅಧ್ಯಕ್ಷ ಜಿ.ತಿಮ್ಮಣ್ಣ, ಅಮ್ಮ ಸಂಸ್ಥೆಯ ಅಧ್ಯಕ್ಷೆ ಸಾಹೀರಾ ಬಾನು, ನಿವೃತ್ತ ಶಿಕ್ಷಕ ಮೃತ್ತೋಂಜಯಪ್ಪ, ಯಶೋದ ಮಂಜುನಾಥ್, ಜೆಸ್ಕಾಂನ ನಿವೃತ್ತ ಅಧಿಕಾರಿ ಡಿ.ಅಂಜಿನಪ್ಪ ಸೇರಿದಂತೆ ಪ್ರಶಸ್ತಿ ಪರಸ್ಕೃತರು ಇದ್ದರು.
_.