ವಿಮಾ ನೌಕರರ ಒಂದು ದಿನದ ಮುಷ್ಕರ ಯಶಸ್ವಿ
ಬಳ್ಳಾರಿ 18: ಈ ದಿನ ಎಲ್ಐಸಿಯಲ್ಲಿ ದೇಶಾದ್ಯಂತ ಐಪಿಒವನ್ನು ವಿರೋಧಿಸಿ ವಿಮಾ ನೌಕರರು ಆಡಳಿತ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ವಿಮಾ ಪ್ರತಿನಿಧಿಗಳು ಒಂದು ದಿನದ ಮುಷ್ಕರವನ್ನು ಯಶಸ್ವಿಯಾಗಿ ಮಾಡಿದರು.
ಸಂಚಾಲಕ ಸೂರ್ಯನಾರಾಯಣ ಮಾತನಾಡುತ್ತ ಎಲ್ಐಸಿಯು ದೇಶದ ಬೆನ್ನಲಬು ಮತ್ತು ದೇಶದ ಆರ್ಥಿಕ ಸ್ವಾವಲಂಬನೆ ಆದ್ದರಿಂದ ಇದನ್ನು ಮತ್ತಷ್ಟು ಬಲಪಡಿಸುವದನ್ನು ಬಿಟ್ಟು ಕೇಂದ್ರ ಸರ್ಕಾರವು ಖಾಸಗೀಕರಣ ಮಾಡಲು ಹೊರಟಿರುವ ನಿರ್ಧಾರವು ತುಂಬಾ ವಿಷಾದಕರ ಎಂದು ತಿಳಿಸಿದರು.
ಎಲ್ಐಸಿ. ಯು ಜನರಿಂದ ಮತ್ತು ಜನರಿಗಾಗಿಯೇ ಹುಟ್ಟಿದಂಥ ಸಂಸ್ಥೆ ಇದನ್ನು ಸಾರ್ವಜನಿಕ ರಂಗದಲ್ಲಿಯೇ ಮುಂದುವರಿಸುಕೊಂಡು ಹೋಗಬೇಕು ಮತ್ತು ಐಪಿಓ ಪ್ರಕ್ರಿಯೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು. ದತ್ತಾತ್ರೇಯ, ಅಬ್ದುಲ್ ಖಾದಿರ್, ಪ್ರತಾಪ್ ಕುಮಾರ್ ಮತ್ತು ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.