ನೂತನ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 28: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಪ್ರಮುಖ 05 ಸ್ಥಳಗಳಲ್ಲಿ 05 ಅಗಸಿ ಗುಡ್ಡೆ ಕಲ್ಲುಗಳನ್ನು ಸ್ಥಾಪನೆ ಮಾಡಿ, ಹೋಮ, ಹವನಗಳೊಂದಿಗೆ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಪುರೋಹಿತರಾದ ಜೆ.ಸತ್ಯನಾರಾಯಣ ಆಚಾರ್, ಜೆ.ವೆಂಕೋಬಾ ಆಚಾರ್, ಪೌರೋತ್ಯದಲ್ಲಿ ದುರ್ಗಾದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
ಗ್ರಾಮದ ಪ್ರಮುಖ ಬೀದಿಗಳ 05 ದಿಕ್ಕಿನಲ್ಲಿ ಗುಡ್ಡೆ ಕಲ್ಲುಗಳನ್ನು ಸ್ಥಾಪನೆ ಮಾಡಿ ಗ್ರಾಮಕ್ಕೆ ಯಾವುದೇ ದುಷ್ಟ ಶಕ್ತಿಗಳ ಆಗಮನವಾಗಬಾರದು ಎನ್ನುವ ನಂಬಿಕೆಯೊಂದಿಗೆ ಗುಡ್ಡೆಕಲ್ಲುಗಳನ್ನು ಸ್ಥಾಪನೆ ಮಾಡಲಾಯಿತು. ಎಲ್ಲಾ ಜನಾಂಗದವರು ಸೇರಿ ಡೊಳ್ಳು, ಹಲಗೆ, ಭಜನೆ, ತುಂಬಿದ ಕಳಸದೊಂದಿಗೆ ಗ್ರಾಮದ ಸುತ್ತ ಚರಗ ಚೆಲ್ಲಿ ಗುಡ್ಡೆ ಕಲ್ಲುಗಳನ್ನು ಮೆರವಣಿಗೆ ಮಾಡಿ ಸ್ಥಾಪನೆ ಮಾಡಿ, ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹೆಚ್.ಭೀಮಪ್ಪ, ಜಿ.ತಿಮ್ಮಣ್ಣ, ಗುಕ್ಕ ಹನುಮಂತಪ್ಪ, ಮುಳ್ಳಾಗಡ್ಡಿ ಭರಮಪ್ಪ, ಬುಡ್ಡಿ ಬಸವರಾಜ, ಉಪ್ಪಾರ ಕಾಳಪ್ಪ, ತಳವಾರ ಹೊಟ್ಟೆ ಹುಲುಗಪ್ಪ, ಟಿ.ಮಹೇಂದ್ರ, ಬಿ.ನಾಗರಾಜ, ಬಂಟರ ಕುಬೇರ, ಉಪ್ಪಾರ ಶಿವಪ್ಪ, ಮಾಲವಿ ಕೃಷ್ಣಪ್ಪ, ನಜೀರ್ಸಾಬ್, ಅಬ್ದುಲ್ ಸಾಬ್, ಅಂಬಳಿ ಕೇಶವ, ಹರಿಜನ ಪಕ್ಕೀರ್ಪ, ಸಿದ್ರ ಗಾಳೆಪ್ಪ, ಯಲ್ಲಪ್ಪ, ಉಪ್ಪಾರ ನಾಗಪ್ಪ, ಜಿ.ಬುಳ್ಳನಗೌಡ, ಮೀಸೆ ಹುಲುಗಪ್ಪ, ತಳವಾರ ಬಿದ್ದಪ್ಪ, ಸಿ.ಎಲ್.ಕುಮಾರ್, ಎನ್.ನಾಗರಾಜ, ಪಾಪಜ್ಜ, ಕಲಾಲ್ ಪರಶುರಾಮ್, ತೊಗರಿ ಹನುಮಂತಪ್ಪ, ಒ.ರಾಘವೇಂದ್ರ, ಯು.ಕನಕಪ್ಪ, ಸೆರೆಗಾರ ಚಂದ್ರ್ಪ, ಯು.ಬಿದ್ದಪ್ಪ, ಇತರರು ಇದ್ದರು.