ಮುಂಡರಗಿ

ಪರಿಸರ ಜೀವರಾಶಿಗೆ ಲಭಿಸಿರುವ ಅತ್ಯಂತ ಅಮೂಲ್ಯ ಕೊಡುಗೆ

ಪರಿಸರ ಜೀವರಾಶಿಗೆ ಲಭಿಸಿರುವ ಅತ್ಯಂತ ಅಮೂಲ್ಯ ಕೊಡುಗೆ

ಲೋಕದರ್ಶನ ವರದಿ

ಮುಂಡರಗಿ 17: ಪಾರ್ವತೆವ್ವ ಕೋಂ ಹಿರೇಬಸಪ್ಪ ಹಳೆಮನೆ ಸರ್ಕಾರಿ ಪ್ರೌಢಶಾಲೆ ಎಕ್ಲಾಸಪೂರದಲ್ಲಿ ಪ್ರೊ ಸಿಎನ್ರಾ ರಾವ್ ಇಕೋ ಕ್ಲಬ್ ಹಾಗೂ ಕ ರಾ ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮುಂಡರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಎನ್.ಎಸ್.ಎಸ್. ವಿದ್ಯಾರ್ಥಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸಚಿನ್ ಉಪ್ಪಾರ ಅವರು ಮುಖ್ಯ ಅತಿಥಿ ಸ್ಥಾನದಿಂದ ಪ್ರತಿ ವರ್ಷ ಜೂನ್ 5ರಂದು ಜಗತ್ತಿನಾದ್ಯಂತ ವಿಶ್ವ ಪರಿಸರದಿನವನ್ನು ಆಚರಿಸಲಾಗುತ್ತದೆ. ವೃಕ್ಷೊ ರಕ್ಷತಿ ರಕ್ಷಿತಃ ಎಂಬಂತೆ ಪರಿಸರವಿದ್ದರೆ ಮಾತ್ರ ಮಾನವನಿದ್ದಾನೆ. ಹಸಿರಿಲ್ಲದೆ ಉಸಿರಿಲ್ಲ. ಪರಿಸರವು ಜೀವರಾಶಿಗೆ ಲಭಿಸಿರುವ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪ್ರಕೃತಿಯಲ್ಲಿನ ಗಾಳಿ, ನೀರು, ಮಣ್ಣು, ಮರಗಳಿಲ್ಲದೆ ಮನುಷ್ಯ ಸಂಕುಲವಿಲ್ಲ. ಮಾನವನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ದಿನವನ್ನು ಆಚರಿಸಲು ಆರಂಭಿಸಲಾಯಿತು. ಪರಿಸರ ದಿನಾಚರಣೆಯ ಅಂಗವಾಗಿ ಪ್ರಪಂಚದಾದ್ಯಂತ ಜನರು ಗಿಡಗಳನ್ನು ನೆಡುತ್ತಾರೆ. ಗಿಡಗಳನ್ನು ನೆಡುವುದು, ನೆಟ್ಟ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಮಾಡುತ್ತಾರೆ, ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ನಿಧರ್ಿಷ್ಟ ಥೀಮ್ನೊಂದಿಗೆ ಆಚರಿಸುತ್ತಾ ಬರಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಎಂಬ ಹಲವು ಕಾರಣಗಳಿಂದ ಪರಿಸರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ ಎಂದು ತಿಳಿಸಿದರು.

ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಮನೋಜ್ ಕೋಪಡರ್ೆಯವರು ಗಣಿಗಾರಿಕೆ, ಕೈಗಾರಿಕೀಕರಣ, ಅರಣ್ಯನಾಶ ಮೊದಲಾದ ಚಟುವಟಿಕೆಗಳಿಂದ ಪರಿಸರ ನಾಶವಾಗುತ್ತಲೇ ಇದೆ. ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ. ಇವುಗಳ ಪ್ರಮಾಣ ಹಿಂದೆಂದಿಗಿಂತಲೂ ವ್ಯಾಪಕವಾಗಿದೆ.ಆದರೆ, ಅದೆಷ್ಟೋ ವರುಷಗಳು ಕಳೆದರೂ ಮನುಷ್ಯ ಪ್ರಕೃತಿಯ ಬೆಲೆಯೇನೆಂದು ತಿಳಿದುಕೊಂಡಿಲ್ಲ ಎಂದು ತಿಳಿಸಿದ್ರು ಡಾ. ವನಜಾಕ್ಷಿ ಭರಮಗೌಡರವರು ಹಸಿರೇ ಉಸಿರು ಪ್ರತಿಯೊಬ್ಬ ನಾಗರಿಕರು ಗಿಡಗಳನ್ನುತಮ್ಮ ಮಕ್ಕಳಂತೆ ಪೋಷಿಸಬೇಕು ಕೋವಿಡ್ 19 ಸಂದರ್ಭದಲ್ಲಿ ಸಾವಿರಾರು ಜನ ಆಮ್ಲಜನಕ ಸಿಗಲಾರದೇ  ಮರಣ ಹೊಂದಿದ್ದು ನಮ್ಮ ಕಣ್ಣು ಮುಂದೆ ಇದೆ ಹೀಗಾಗಿ ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು ಶಾಲಾ ಮುಖ್ಯೋಪಾಧ್ಯಾಯರಾದ ಎಂ ಡಿ ಮಾದರ ಪರಿಸರ ಜಾಗೃತಿ ನಮ್ಮೆಲ್ಲರ ಜಾಗೃತಿಯ ಜೊತೆಗೆ ಪೋಷಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು. 

ಶಾಲೆಯ ಶಿಕ್ಷಕರಾದ ದುಗರ್ಾಪ್ರಸಾದ್ ರವರು ವರ್ಷ ಕಳೆದಂತೆ ಪ್ರಕೃತಿ ಮೇಲಿನ ಮಾನವ ನಡೆಸುತ್ತಿರುವ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಮಾತ್ರ ದುರಂತ. ಇನ್ನಾದರೂ ಮನುಷ್ಯ ಜಾಗೃತನಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿತ್ಯ ನಿರಂತರವಾಗಿರಬೇಕು. ಆಗ ಮಾತ್ರ ಪರಿಸರ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಂಜು ಎಚ್ ಎಚ್, ಶರಣಪ್ಪ ಮಲಬಾದಿ, ದುಂಡಪ್ಪ ಕಾಗವಾಡ ಹಾಗೂ ಎನ್.ಎಸ್.ಎಸ್.ದ 50ವಿದ್ಯಾರ್ಥಿಗಳು ಹಾಗೂ ಶಾಲೆಯ 115 ವಿದ್ಯಾಥರ್ಿಗಳು ಭಾಗವಹಿಸಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಪ್ರಾರಂಭದಲ್ಲಿ ಇಕೋಕ್ಲಬ್ ನೋಡಲ್ ಅಧಿಕಾರಿಗಳಾದ ಎಂ ಎಚ್ ಸವದತ್ತಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರೆ ಅನ್ನದಾನೇಶ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು 

ಸುದ್ದಿ ಓದಿ