ವಿದ್ಯಾಥರ್ಿ ಪರಿಷತ್ತಿನ ಧ್ಯೇಯ, ಬಲಿಷ್ಠ ಭಾರತ ನಿಮರ್ಾಣದ ಸಂಕಲ್ಪ
ವಿದ್ಯಾಥರ್ಿ ಕೇವಲ ನಾಳಿನ ಪ್ರಜೆಯಲ್ಲ ಬದಲಾಗಿ ಇಂದಿನ ಪ್ರಜೆಯೇ ಆಗಿದ್ದಾನೆ ಎಂಬುದನ್ನು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಭಾವಿಸುತ್ತದೆ. ಆತ ಈ ವಿಶಾಲ ಸಮಾಜದ ಒಂದು ಅವಿಭಾಜ್ಯ ಘಟಕವಾಗಿದ್ದಾನೆ. ಮತ್ತು ಭಾರತದ ಕಲ್ಯಾಣವೇ ಆತನ ಆದ್ಯ ಕರ್ತವ್ಯವಾಗಬೇಕೆಂಬುದನ್ನು ಎಬಿವಿಪಿ ಒತ್ತಿ ಹೇಳುತ್ತದೆ. ಹಾಗಾಗಿ ವಿದ್ಯಾಥರ್ಿ ಪರಿಷತ್ ವಿದ್ಯಾಥರ್ಿ ಶಕ್ತಿಯನ್ನು ಸಂಘಟಿಸಿ, ಸಾಮಾಜಿಕ, ಆಥರ್ಿಕ, ರಾಷ್ಟ್ರೀಯ ರಂಗಗಳಲ್ಲಿ ಸಮುಚಿತ ಪರಿವರ್ತನೆಯನ್ನು ತರಲು ಶ್ರಮಿಸುತ್ತಿದೆ. ಆದ್ದರಿಂದ ಇಂದು ವಿದ್ಯಾಥರ್ಿ ಪರಿಷತ್ತಿನ ಜನಪ್ರಿಯತೆ ಎಲ್ಲೆಡೆ ವೇಗವಾಗಿ ಬೆಳೆಯುತ್ತಿದೆ. ಕಾಲಕಾಲಕ್ಕೆ ಕಾರ್ಯಕರ್ತರು ಮಹತ್ವಪೂರ್ಣ ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗಿನ ಸಮಸ್ಯೆಗಳನ್ನು ಎತ್ತಿಕೊಂಡು ವಿದ್ಯಾಥರ್ಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತ ದೇಶಾದ್ಯಂತ ಅಭಿಯಾನಗಳನ್ನು ನಡೆಸಿದ್ದಾರೆ. ಮಾನವ ನಿಮರ್ಿತ ಮತ್ತು ಪ್ರಾಕೃತಿಕ ವಿಪತ್ತುಗಳ ಪ್ರತಿಯೊಂದು ಸಂದರ್ಭದಲ್ಲೂ ಸಮಾಜದ ತುತರ್ು ಕರೆಗೆ ಸ್ಪಂದಿಸಿದ್ದಾರೆ. ರಾಷ್ಟ್ರದ ಶರೀರಕ್ಕೆ ಅಂಟಿದ ಜಾಡ್ಯಗಳನ್ನು ಹಾಗೂ ಅವುಗಳ ಮುಕ್ತಿಗಾಗಿ ಹಲವು ಪ್ರಯತ್ನಗಳು ನಡೆಯುತ್ತಲಿವೆ. ಅಂದು ಪುಟ್ಟ ಸಸಿಯಂತಿದ್ದ ವಿದ್ಯಾಥರ್ಿಪರಿಷತ್ತಿಂದು ತನ್ನ ಸಮಸ್ತ ಕಾರ್ಯ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟದವರೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಎಬಿವಿಪಿ ಅಂದಾಕ್ಷಣ ಅನೇಕರು ಒಂದೊಂದು ರೀತಿಯಲ್ಲಿ ಗುರುತಿಸುತ್ತಾರೆ. ಕೆಲ ಜನರು ಅಂದೊಂದು ನಾಯಕರನ್ನು ತಯಾರು ಮಾಡುವ ಒಂದು ಬೃಹತ್ ಖಾಕರ್ಾನೆಯಾಗಿದೆ ಎಂದರೆ ಮತ್ತೋಬ್ಬರು ಎಲ್ಲಿ ಅನ್ಯಾಯವಾಗುತ್ತದೆಯೋ ಕೂಡಲೆ ಅದರ ವಿರುದ್ದು ಪ್ರತಿಭಟಿಸುವವರು ಎಬಿವಿಪಿ ಕಾರ್ಯಕರ್ತರು. ಇನ್ನೊಬ್ಬರು ಎಬಿವಿಪಿಯ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಎಲ್ಲಿ ನಡೆಯುತ್ತವೆಯೋ ಅಲ್ಲಿ ದೇಶ ಭಕ್ತಿಯ ತಾಂಡವಾಡುತ್ತಿರುತ್ತದೆ ಎನ್ನುತ್ತಾರೆ, ಮಗದೊಬ್ಬರು ಪ್ರಕೃತಿ ವಿಕೋಪಗಳು, ಅತಿವೃಷ್ಠಿಯಂತಹ ಅವಘಡ ಅನಾಹುತಗಳು ಸಂಭವಿಸಿದರೆ ಕೊಡಲೆ ಸ್ಪಂದಿಸುವವನು ಎಬಿವಿಪಿ ಕಾರ್ಯಕರ್ತ. ದೇಶ ವಿರೋಧಿ ಚಟುವಟಿಕೆಗಳು ದೇಶದ ಯಾವ ಮೂಲೆಯಲ್ಲಿ ನಡೆದರೂ ಅದರ ವಿರುದ್ದ ಮೊಟ್ಟ ಮೊದಲು ಧ್ವನಿ ಎತ್ತುವವರು ಎಬಿವಿಪಿ ಕಾರ್ಯಕರ್ತರು ಎಂದು ಅನೇಕರು ಭಾವಿಸಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾಥರ್ಿ ಪರಿಷತ್ ವಿದ್ಯಾಥರ್ಿಗಳಲ್ಲಿ ಸೇವಾ ಮನೋಭಾವನೆ, ನಾಯಕತ್ವ, ಹೋರಾಟ ಹಾಗೂ ಸಾಮರಸ್ಯದ ಮನೋಭಾವನೆಗಳನ್ನು ಬೆಳೆಸುತ್ತದೆ. ಪ್ರತಿಯೋಬ್ಬ ಕಾರ್ಯಕರ್ತರು ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ವ್ಯವಹರಿಸುತ್ತಾರೆ, ಇಲ್ಲಿ ಜಾತೀಯತೆಗೆ ಅವಕಾಶವಿಲ್ಲ, ಎಲ್ಲರೂ ಒಂದೆ ಎಂಬ ಮನೋಭಾವನೆ ಪ್ರತಿಯೊಬ್ಬ ಕಾರ್ಯಕರ್ತನಲ್ಲಿರುತ್ತದೆ. ಜಾತಿ ಮುಕ್ತ ವಾತಾವರಣ ನಿಮರ್ಾಣ ಮಾಡುವುದು ಸಂಘಟನೆಯ ಮೂಲ ಆಶಯವೂ ಆಗಿದೆ. ಅದು ಸಂಘಟನೆಯ ಸಮಸ್ತ ಕಾರ್ಯಚಟುವಟಿಕೆಗಳಿಂದ ಕಾರ್ಯಕರ್ತರಲ್ಲಿ ಸಾಮರಸ್ಯದ ಮನೋಭಾವನೆ ನಿಮರ್ಾಣವಾಗಲು ಸಾಧ್ಯವಾಗುತ್ತದೆ. ವಿದ್ಯಾಥರ್ಿ ಪರಿಷತ್ತಿ ಸಂಸ್ಥಾಪಕರಾದ ಯಶವಂತರಾವ್ ಕೇಳ್ಕರ ರವರು ತಮ್ಮ ಮಕ್ಕಳಿಗೆ ತಮ್ಮ ಜಾತೀಯ ಬಗ್ಗೆ ಹೇಳಿರಲಿಲ್ಲ, ಒಂದು ದಿನ ಶಾಲೆಯಲ್ಲಿ ಅಜರ್ಿಯಲ್ಲಿ ಜಾತಿ ಯೆಂಬ ಪ್ರಶ್ನೆಗೆ ಉತ್ತರ ಬರೆಯುವಾಗ ಮಕ್ಕಳಿಗೆ ಮೊದಲ ಬಾರಿ ಜಾತಿ ಎಂಬ ಬಗ್ಗೆ ಗೊತ್ತಾಗಿತ್ತು! ಆಗ ಕೇಳ್ಕರ್ ದಂಪತಿ ಮಕ್ಕಳಿಗೂ ಗೊತ್ತಿಲ್ಲದಂತೆ ಶಾಲೆಗೆ ತೆರಳಿ ಶಿಕ್ಷಕರಿಗೆ ತಮ್ಮ ಕುಟುಂಬ ಜಾತಿಯಿಂದ ಆಚೆ ಇರುವ ಬಗ್ಗೆ ಮನದಟ್ಟು ಮಾಡುದ್ದರು.
ವಿದ್ಯಾಥರ್ಿ ಪರಿಷತ್ತಿನ ಮೂಲ ಧ್ಯೇಯ ರಾಷ್ಟ್ರ ಪುನರ್ ನಿಮರ್ಾಣವಾಗಿದೆ, ಹಾಗಂತ ಇದು ಹೊಸ ರಾಷ್ಟ್ರವನ್ನು ನಿಮರ್ಿಸುವ ಪ್ರಕ್ರಿಯೆಯಲ್ಲ. ಬದಲಿಗೆ ಯಾವ ಸಮಾಜಕ್ಕೆ ಶತಶತಮಾನಗಳ ತಮ್ಮ ಪೂರ್ವಪರಂಪರೆಯ ನೆನಪು, ಸ್ವಭಾವ, ರೂಢಿಗಳು ದಟ್ಟವಾಗಿವೆಯೋ ಹಾಗೂ ಯಾವ ರಾಷ್ಟ್ರದ ವ್ಯಕ್ತಿತ್ವದಲ್ಲಿ ಅಪಾರವಾದಂತಹ ಶಕ್ತಿಸಾಮಥ್ರ್ಯಗಳು ಸಮ್ಮಿಳಿತವಾಗಿವೆಯೋ ಅಂತಹ ರಾಷ್ಟ್ರಕ್ಕೊಂದು ಯೋಗ್ಯ ದಿಸೆ, ರೂಪ, ಸ್ಥಿತಿಗತಿಗಳನ್ನು ನಿಮರ್ಿಸುವುದು. ಆದ್ದರಿಂದ ಇದು ಪುನರ್ ನಿಮರ್ಾಣ ಮನುಷ್ಯನು ಸಾಮಾನ್ಯವಾಗಿ ಮನುಷ್ಯನಾಗಿ ಇದ್ದೇ ಇರುತ್ತಾನೆ. ಆತ ಭೌತಿಕ ರೂಪದಲ್ಲಿ ಮನುಷ್ಯನಾಗಿದ್ದರೂ ಮನುಷ್ಯ ಎಂದ ಮೇಲೆ ಕೆಲವು ಗುಣ, ಸ್ವಭಾವ ಪ್ರವೃತ್ತಿಗಳನ್ನು ನಿರೀಕ್ಷಿಸುತ್ತೇವೆ. ಅವುಗಳು ಇರುವಿಕೆ ಇದ್ದಾಗ ಮಾತ್ರ ಆತ ಮನುಷ್ಯ ಎನಿಸಿಕೊಳ್ಳುತ್ತಾನೆ. ಆ ಮನುಷ್ಯತ್ವದ ನಿಮರ್ಾಣಕ್ಕಾಗಿಯೇ ಸ್ವಾಮಿ ವಿವೇಕಾನಂದರು 'ಒಚಿಟಿ ಒಚಿಞಟಿರ ಇಜಣಛಿಚಿಣಠಟಿ' ಮಾನವನನ್ನು ರೂಪಿಸುವ ಶಿಕ್ಷಣದ ಆದ್ಯತೆಯನ್ನು ಒತ್ತಿ ಹೇಳಿದರು. ಆ ಮೂಲಕ ರಾಷ್ಟ್ರ ಪುನರ್ ನಿಮರ್ಾಣ ಮಾಡುವ ಮಹಾದಾಶೆಯಿಂದ 1949 ಜುಲೈ-9 ರಂದು ವಿದ್ಯಾಥರ್ಿ ಪರಿಷತ್ ಸ್ಥಾಪನೆಯಾಯಿತು.
ರಾಷ್ಟ್ರ ಜಾಗೃತಿ ಆದೋಲನಗಳು: ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮಿರದವರೆಗೆ ಯಾವುದೇ ಭಾಗದಲ್ಲಿಯೂ 'ಎಬಿವಿಪಿ' ಇಲ್ಲದಿರುವ ಪ್ರದೇಶವೇ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಥರ್ಿಗಳಿಗೆ, ರಾಷ್ಟ್ರಪ್ರೇಮದ ವಿಚಾರವನ್ನು ಹೃದಯಕ್ಕಿಳಿಸಬಲ್ಲ ಸಾಮಥ್ರ್ಯವಿರುವುದು ಅದು ಎಬಿವಿಪಿಗೆ ಮಾತ್ರ ಎಂಬುದು ಈ ದೇಶ ಕಂಡ ಸತ್ಯ. ತುತರ್ು ಪರಿಸ್ಥಿತಿಯ ಕರಾಳ ದಿನಗಳಲ್ಲಿ ವಿದ್ಯಾಥರ್ಿ ಪರಿಷತ್ತಿನ ಹೋರಾಟವೇ ಕ್ರಾಂತಿಯ ಕಹಳೆ ಊದಿತ್ತು. ಲಕ್ಷಾಂತರ ಸದಸ್ಯರನ್ನು ಹೊಂದಿರುವ ಎಬಿವಿಪಿ ಸಂಘಟನೆ ಪರಿವಾರದ ಒಂದು ಅಗ್ರಗಣ್ಯಭಾಗ. ಭಾರತೀಯರು ಕಟ್ಟಿದ ತೆರಿಗೆ ಹಣದಲ್ಲಿ ವಿದ್ಯಾಥರ್ಿವೇತನ ಪಡೆದು, ಈ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಪುಂಡ ಪೋಕರಿಯೊಬ್ಬ 'ಭಾರತ ಕೀ ಬರವಾದಿ, ಭಾರತ ತೇರಿ ತುಕಡೆ ಹೊಂಗೆ ಇನ್ಶಾ ಅಲ್ಲಾ-ಇನಶಾ ಅಲಾ'್ಲ ಎಂಬ ಘೋಷಣೆ ಕೂಗಿದಾಗ ಇಡೀ ದೇಶಾಧ್ಯಂತ ಸಮಾಜ ಜಾಗೃತಿಗೊಳಿಸಲಿಕ್ಕಾಗಿ ಬೃಹತ್ ಆಂದೋಲನಗಳನ್ನು ಮಾಡಿದ್ದು ಇದೆ ವಿದ್ಯಾಥರ್ಿ ಸಂಘಟನೆ.
ಅದು 1949ರ ವಿದ್ಯಾಥರ್ಿ ಪರಿಷತ್ತಿನ ಪ್ರಾರಂಭದ ವರ್ಷದಲ್ಲಿ ಜಮ್ಮುಕಾಶ್ಮೀರದಲ್ಲಿನ ಶೇಖ್ ಅಬ್ದುಲ್ಲಾ ಸರಕಾರದ ನಿರಂಕುಶ ಆಡಳಿತದ ಕುತಂತ್ರದಿಂದಾಗಿ ಅಲ್ಲಿನ ಸರಕಾರಿ ಕಾಲೇಜ್ ಒಂದರ ಮೇಲೆ ಅಂದು ಅಗಷ್ಟ 15ರಂದು ತಿರಂಗಾ ಬಾವುಟದ ಬದಲು ನ್ಯಾಷನಲ್ ಕಾನ್ಫರನ್ಸ್ ಬಾವುಟ ಹಾರಿಸಲು ಸರಕಾರದ ಆದೇಶದಂತೆ ಅಧಿಕಾರಿಗಳು ಮುಂದಾದಾಗ ವಿದ್ಯಾಥರ್ಿ ಪರಿಷತ್ತಿನ ಕಾರ್ಯಕರ್ತರು ತ್ರಿವರ್ಣಧ್ವಜ ಹಾರಿಸುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿ ಕಾಲೇಜಿನೆದುರು ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದರು. ಈ ಚಳುವಳಿ ಬರೊಬ್ಬರಿ ಮೂರು ತಿಂಗಳು ನಡೆದು ಕೊನೆಗೆ ಕೇಂದ್ರ ಸರಕಾರ ಗೋಪಾಲಸ್ವಾಮಿ ಅಯ್ಯಂಗಾರ್ನ್ನು ಜಮ್ಮುವಿಗೆ ಕಳಿಸಿತ್ತು. ಪರಿಣಾಮವಾಗಿ ಶಾಲೆಯ ಮೇಲೆ ತಿರಂಗಾ ಹಾರಾಡುವ ಮೂಲಕ ಕಾಲೇಜು ಗೌರವಸ್ಥಾನ ಪಡೆದಿತ್ತು.
ಹಲವಾರು ಬಾರಿ ಕೆಂಪು ಬೆದರಿಕೆಯ ಸವಾಲನ್ನು ಸ್ವೀಕರಿಸುವ ಮೂಲಕ ಹಿಂದೂಗಳ ಹತ್ಯೆಯನ್ನು ಖಂಡಿಸಿ ಇಡೀ ದೇಶಾದ್ಯಂತ ಚಲೊ ಕೇರಳ ಕರೆಕೊಟ್ಟು ಸುಮಾರು 70 ಸಾವಿರಕ್ಕೂ ಅಧಿಕ ವಿದ್ಯಾಥರ್ಿ ಸಮೂಹದ ಮೂಲಕ ದೇವರ ನಾಡಿನ ರಾಕ್ಷಸರ ಅಟ್ಟಹಾಸದ ವಿರುದ್ಧ ರಣಕಹಳೆಯನ್ನು ಮೊಳಗಿಸುವ ಮೂಲಕ ಕೆಂಪು ಭಯೋತ್ಪಾದಕರಿಗೆ ನಡುಕ ಹುಟ್ಟಿಸಿ ಸಮಾಜವನ್ನು ಜಾಗೃತಗೊಳಿಸಿದ್ದು ಇದೆ ಎಬಿವಿಪಿ ಸಂಘಟನೆ. 1986ರಲ್ಲಿ ಆಂಧ್ರಪ್ರದೇಶದ ವಾರಂಗಲ್ಲಿನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ಕಮ್ಯೂನಿಷ್ಟರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದ ಸಂದರ್ಭದಲ್ಲಿ ವಿದ್ಯಾಥರ್ಿ ಪರಿಷತ್ತಿನ ಕಾರ್ಯಕರ್ತ ಜಗನ್ಮೋಹನ ರಡ್ಡಿ ತಿರಂಗಾ ಹಾರಿಸಿ ಸಾಹಸ ಮೆರೆದಿದ್ದ.
1992ರಲ್ಲಿ ಭಾರತಮಾತೆಯ ಮುಕುಟಮಣಿ ಜಮ್ಮುಕಾಶ್ಮೀರದ ಶ್ರೀನಗರದ ಲಾಲ್ಚೌಕ್ನಲ್ಲಿ ಉಲ್ಪಾ, ಆಲ್ಖೈದಾ ಭಯೋತ್ಪಾದಕರು ತಾಯಿಯ ಎದೆ ಹಾಲು ಕುಡಿದವರು ಲಾಲ್ಚೌಕ್ ಮೇಲೆ ತಿರಂಗಾ ಹಾರಿಸಿ ಎಂದು ಸವಾಲೆಸೆದಿದ್ದಾಗ, ಆ ಸವಾಲನ್ನು ಮೊಟ್ಟಮೊದಲಿಗೆ ಸ್ವೀಕರಿಸಿದ ಎಬಿವಿಪಿ ಕಾರ್ಯಕರ್ತರು ಜೀವಮಾನದ ಹಂಗು ತೊರೆದು ಸುಮಾರು 12 ಸಾವಿರಕ್ಕೂ ಅಧಿಕ ವಿದ್ಯಾಥರ್ಿಗಳ ಸಮ್ಮುಖದಲ್ಲಿ ಅಲ್ಲಿಗೆ ತೆರಳಿ ತಿರಂಗಾ ಹಾರಿಸುವ ಮೂಲಕ ಶತ್ರುಗಳಲ್ಲಿ ನಡುಕ ಹುಟ್ಟಿಸಿದ್ದು ಇದೇ ಶಸ್ತ್ರಾಸ್ತ್ರ ಸಮವಸ್ತ್ರವಿಲ್ಲದ ವಿದ್ಯಾಥರ್ಿ ಪರಿಷತ್ತಿನ ಸೈನಿಕರು.
2008ರ ಸಂದರ್ಭದಲ್ಲಿ ವಿದ್ಯಾಥರ್ಿ ಪರಿಷತ್ತಿನ ಕಾರ್ಯಕರ್ತರು ಮಾಡಿದ್ದ ಜನಜಾಗೃತಿ ಆಂದೋಲನ ಇಡೀ ದೇಶವಾಸಿಗಳಲ್ಲಿನ ದೇಶ ಭಕ್ತಿಯನ್ನು ಬಡಿದೆಬ್ಬಿಸುವಂತಹದ್ದು. ಅವತ್ತಿನ ಕೇಂದ್ರ ಸರಕಾರದ ಮತಬ್ಯಾಂಕ ಹುನ್ನಾರದಿಂದಾಗಿ ಆಕ್ರಮವಾಗಿ ಈ ದೇಶದೊಳಗಡೆ ನುಸುಳಿದ್ದ ಕೋಟ್ಯಂತರ ಬಾಂಗ್ಲಾ ನುಸುಳುಕೊರರಿಗೆ ವೋಟರ್ ಕಾಡರ್್, ರೇಷನ್ ಕಾಡರ್್ ಎಲ್ಲವನ್ನು ಪೂರೈಸಿತ್ತು. ಭಾರತದಿಂದ ಇಡೀ ಈಶಾನ್ಯ ರಾಜ್ಯವನ್ನು ಬೇರ್ಪಡಿಸಿ ದಿ-ಗ್ರೇಟರ್ ಬಾಂಗ್ಲಾ ನಿಮರ್ಾಣ ಯೋಜನೆಯ ನುಸುಳುಕೊರರ ಮಾಹಿತಿ ತಿಳಿಯುತ್ತಿದ್ದಂತೆ ಎಬಿವಿಪಿಯ ಸುಮಾರು ನೂರಾರು ಕಾರ್ಯಕರ್ತರು ಮೂರು ತಿಂಗಳ ಕಾಲ ಈಶಾನ್ಯ ರಾಜ್ಯಗಳ ಗಡಿಯನ್ನು ಸಮೀಕ್ಷೆ ಮಾಡಿ ನುಸುಳುಕೋರರ ದುಷ್ಕೃತ್ಯಗಳನ್ನು ಬಯಲಿಗೆ ಎಳೆಯುವ ಮೂಲಕ 'ಚಿಕನೆಕ್' ಚಲೊ ಎಂಬ ಕರೆಯೊಂದಿಗೆ ಇಡೀ ದೇಶಾದ್ಯಂತ ಸುಮಾರು 40 ಸಾವಿರಕ್ಕೂ ಹೆಚ್ಚು ವಿದ್ಯಾಥರ್ಿಗಳು ಆಸ್ಸಾಂ ರಾಜ್ಯದ ಗಲ್ಲಿಗಲ್ಲಿಗಳಲ್ಲಿ ನುಸುಳುಕೊರರ ವಿರುದ್ಧ ಜನಜಾಗೃತಿಯನ್ನು ಮೂಡಿಸಿದ್ದರು.
ಶೈಕ್ಷಣಿಕ ಆಂದೋಲನಗಳು: 1985ರ ಸಂದರ್ಭದಲ್ಲಿ ಖಾಸಗಿ ವಿಶ್ವವಿದಾಲಯಗಳ ಆರಂಭದ ಕುರಿತು ಸಲಹೆಯನ್ನು ಸರಕಾರ ಯೋಚಿಸುತ್ತಿದ್ದಾಗ, ಎಬಿವಿಪಿಯು ಸಕಾಲದಲ್ಲಿ ಗಣ್ಯಮಾನ್ಯ ಶಿಕ್ಷಣತಜ್ಞರ ಮತ್ತು ಶಿಕ್ಷಣ ನಿವರ್ಾಹಕರ ಒಂದು ಸಭೆಯನ್ನು ಏರ್ಪಡಿಸಿ, ಈ ಸಮಿತಿಯಲ್ಲಿ ಮೂಡಿಬಂದಂಹ ಹಲವಾರು ಸಲಹೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಮಸೂದೆಯಲ್ಲಿ ಸೇರಿಸಲಾಗಿತ್ತು.
ಓಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಸೇರಿದ್ದ 2000 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಜಮೀನು ಅಲ್ಲಿನ ನೆಲತಿಮಿಂಗಲುಗಳ ವಶವಾಗುವದರಲ್ಲಿತ್ತು. ಈ ಸುದ್ದಿ ತಿಳಿದ ತಕ್ಷಣ ಅದರ ರಕ್ಷಣೆಗಾಗಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಸುಮಾರು ಒಂದು ದಶಕಗಳ ಕಾಲ ದೀಘರ್ಾವಧಿಯ ಕಾಲ ನಡೆಸಿದ ಚಳುವಳಿಯ ಪರಿಣಾಮವಾಗಿ ಅದು ಉಳಿಯುವಂತಾಗಿತ್ತು. ಈ ಆಯೋಗದ ಮುಖ್ಯಸ್ಥ ನ್ಯಾಯಮೂತರ್ಿ ಓ.ಚೆನ್ನಪ್ಪ ರೆಡ್ಡಿಯವರು, ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಪ್ರಯತ್ನವಿಲ್ಲದೆ ಹೋಗಿದ್ದರೆ ವಿಶ್ವವಿದ್ಯಾಲಯವು ತನ್ನ ಬಹುಕೋಟಿ ಬೆಲೆಬಾಳುವ ಆಸ್ತಿಯನ್ನು ಕಳೆದುಕೊಳ್ಳುವ ಸಂಭವವಿತ್ತು ಎಂಬುದಾಗಿ ಹೆಳಿದ್ದರು. ಇನ್ನು ವಿಶ್ವವಿದ್ಯಾಲಯ ಸೆನೆಟ್ ಮತ್ತು ಇನ್ನಿತರ ಸಮಿತಿಗಳಲ್ಲಿ ವಿದ್ಯಾಥರ್ಿಗಳ ಪ್ರಾತಿನಿತ್ಯ ಇರಬೇಕೆಂಬ ಆದರ ಬೇಡಿಕೆಯನ್ನು ದೇಶದ ಹಲವಾರು ವಿಶ್ವವಿದ್ಯಾಲಯಗಳು ಈಗಾಗಲೇ ಅಂಗಿಕರಿಸಿ ಕಾರ್ಯರೂಪಕ್ಕೆ ತಂದಿವೆ. ಕಾಲೇಜು ವಿದ್ಯಾಥರ್ಿ ಸಂಘದ ಚುನಾವಣೆಗಳಲ್ಲಿ ಸ್ಪಧರ್ಿಸತೊಡಗಿದ ಮೇಲೆ ಈ ಸಂಘಟನೆಯ ಇತಿಹಾಸವೇ ಬದಲಾಗಿದೆ. ಅದುವರೆಗೆ ಸಾಮಾನ್ಯವಾಗಿ ಚಿಕ್ಕಪುಟ್ಟ ಚಳುವಳಿಗಳಲ್ಲೇ ವ್ಯಯವಾಗುತ್ತಿದ್ದು ವಿಶ್ವವಿದ್ಯಾಲಯ ಚಟುವಟಿಕೆಗಳ ಕಾರ್ಯಶಕ್ತಿಗೆ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಹೊಸ ದಿಕ್ಕು ನೀಡಿದ್ದರ ಪರಿಣಾಮವಾಗಿ ಅನೇಕ ರಾಷ್ಟ್ರೀಯ ಸಮಸ್ಯೆಗಳ ಬಗೆಗೆ ಹೆಚ್ಚು ಗಮನ ಹರಿಸಲು ಪ್ರೇರಣೆ ಸಿಕ್ಕಂತಾಗಿದೆ. ಇನ್ನೂ ಹಲವಾರು ಶೈಕ್ಷಣಿಕ ಹೋರಾಟದ ಮುಂಚೂಣಿಯಲ್ಲಿ ಸಾಗುತ್ತಿದ್ದೆ. ಸಿಇಟಿ ಶುಲ್ಕ ಹೆಚ್ಚಳ, ಬಸ್ಪಾಸ್ ಶುಲ್ಕ ಕಡಿತ, ಮತದಾನ ಜಾಗೃತಿ ಅಭಿಯಾನಗಳು, ಪ್ರಶ್ನೆ ಪತ್ರಿಕೆಗಳ ಮಾರಾಟದ ವಿರುದ್ಧ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಹೀಗೆ ಎಬಿವಿಪಿ ಹತ್ತು ಹಲವಾರು ಹೋರಾಟಗಳ ಮುಂಚೂಣಿಲ್ಲಿದೆ.
ಕಾರ್ಯಕರ್ತರ ಉದಾರತೆ ಮತ್ತು ಶಿಸ್ತು: 1971ರ ಸುಮಾರಿಲ್ಲಿ ದೆಹಲಿಯಲ್ಲಿ ನಡೆದಿದ್ದ ಎಬಿವಿಪಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಎಂ.ಸಿ. ಛಾಗ್ಲಾರವರು, ದೇಶದ ಮೂಲೆ ಮೂಲೆಗಳಿಂದ 4 ಸಾವಿರಕ್ಕೂ ಅಧಿಕ ವಿದ್ಯಾಥರ್ಿಗಳು ಆಗಮಿಸಿದ್ದನ್ನು ಹಾಗೂ ಆ ಸಭೆಯು ಅತ್ಯಂತ ಶಾಂತವಾಗಿದ್ದು ಸಾಸಿವೆಕಾಳು ಬಿದ್ದರೂ ಕೇಳಿಸುವಷ್ಟು ನಿಶ್ಯಬ್ಧ! ಈ ಅನುಶಾಸನಬದ್ಧ ವಿದ್ಯಾಥರ್ಿ ಸಮೂಹವನ್ನು ಕಂಡು ಆಶ್ಚರ್ಯಚಕಿತರಾಗಿ ಇಂಥ ಅನುಶಾಸನಬದ್ಧ ದೇಶಭಕ್ತ ವಿದ್ಯಾಥರ್ಿ ವೃಂದವು ನಮ್ಮ ನಾಡಿನ ಹೆಮ್ಮೆಯ ಆಸ್ತಿ ಮತ್ತು ಇಂತಹ ಪ್ರಚಂಡ ವಿದ್ಯಾಥರ್ಿ ಸಮೂಹದ ಶಿಸ್ತು ಶಾಂತಿಗಳ ಬಗ್ಗೆ ನಾನೇನಾದರೂ ಮಿಕ್ಕಜನರಿಗೆ ಹೇಳಿದ್ದಲ್ಲಿ ಅವರು ಖಂಡಿತವಾಗಿಯೂ ನಂಬಲಾರರು ಎಂಬುದಾಗಿ ಉದ್ಘರಿಸಿದ್ದರು.
1988ರ ಜನೇವರಿ ತಿಂಗಳಲ್ಲಿ ಮಹಾರಾಷ್ಟ್ರ ಪ್ರಾಂತ ಸಮ್ಮೇಳನವೊಂದು ನಾಂದೇಡದಲ್ಲಿ ಜರುಗಿತ್ತು. ಆ ಸಂದರ್ಭದಲ್ಲಿ ಕ್ಷಾಮ ಪರಿಹಾರ ನಿಧಿಗೆ ದೇಣಿಗೆ ನೀಡಲು ಒಂದು ಹೊತ್ತು ಊಟವನ್ನು ಬಿಟ್ಟು ಹಣ ಉಳಿತಾಯ ಮಾಡಲು ಪ್ರತಿನಿಧಿಗಳಿಗೆ ಸಂಚಾಲನ ಸಮಿತಿಯಿಂದ ಮುಂಜಾನೆ ಕರೆ ಕೊಡಲಾಗಿತ್ತು. ಆ ಮಧ್ಯಾಹ್ನ ಯಾರೊಬ್ಬ ಕಾರ್ಯಕರ್ತರೂ ಊಟ ಮಾಡಲಿಲ್ಲ. 1200 ಪ್ರತಿನಿಧಿಗಳ ಪೈಕಿ ಒಬ್ಬನಾದರೂ ಚಹಾ, ಕಾಫಿ, ಅಥವಾ ಉಪಹಾರಕ್ಕಾಗಿ ಸಹ ಶಿಬಿರದ ಆವರಣ ಬಿಟ್ಟು ಹೊರಕ್ಕೆ ಹೋಗಲಿಲ್ಲ. ಇದರಿದ ಉಳಿತಾಯವಾದ ಸುಮಾರು 6 ಸಾವಿರ ರೂಪಾಯಿಗಳನ್ನು ಅಂದು ಸಂಜೆಯೇ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡುವ ಘೋಷಣೆ ಮಾಡಿದಾಗ ಇಡೀ ವಿದ್ಯಾಥರ್ಿ ಸಮೂಹ ಪ್ರಚಂಡ ಹಷರ್ೋದ್ಧಾರ ಮಾಡಿತ್ತು. ಇಂತಹ ನೂರಾರು ಉದಾಹರಣೆಗಳನ್ನು ಇಲ್ಲಿ ಕಾಣಬಹುದು. 'ಸಮಾಜದರ್ಶನ' ಕ್ಯಾಂಪಗಳ ಮೂಲಕ ಪ್ರತಿವರ್ಷ ಶೈಕ್ಷಣಿಕ, ಆಥರ್ಿಕವಾಗಿ ಹಿಂದುಳಿದ ಬಡಪ್ರತಿಭಾವಂತ ವಿದ್ಯಾಥರ್ಿಗಳಿಗೆ ಆಥರ್ಿಕ ಸಹಕಾರ ಕೊಡುವ ಮೂಲಕ ಶೈಕ್ಷಣಿಕ ಸಹಾಯವನ್ನು ಮಾಡುತ್ತಾ ಶೈಕ್ಷಣಿಕ ಕ್ಷೇತ್ರದ ಹಸಿವನ್ನು ನೀಗಿಸುವ ಮುಂಚೂಣಿಯಲ್ಲಿ ಎಬಿವಿಪಿ ಬಹಳ ದೊಡ್ಡ ಹೆಜ್ಜೆಯನ್ನಿಡುವ ನಿಟ್ಟಿನಲ್ಲಿ ಭವ್ಯ ಭಾರತ ನಿಮರ್ಾಣದ ಈ ಸುಂದರ ಕನಸನ್ನು ಸಾಕಾರಗೊಳಿಸಲು ಹಲವು ದಶಕಗಳಿಂದ ಮುನ್ನಡೆದಿದೆ. ವಿದ್ಯಾಥರ್ಿ ಪರಿಷತ್ತಿನ ಸಂಸ್ಥಾಪನಾ ದಿನದ ಈ ಸುಸಂದರ್ಭದದಲ್ಲಿ ನಾವೆಲ್ಲ ರಾಷ್ಟ್ರಕಟ್ಟುವ ಕಾರ್ಯದಲ್ಲಿ ಒಂದು ಹೆಜ್ಜೆ ಮುಂದೆ ಇಡೋಣ ಎಂದು ಹೇಳತ್ತ ಎಲ್ಲರಿಗೂ ರಾಷ್ಟ್ರೀಯ ವಿದ್ಯಾಥರ್ಿದಿನದ ಶುಭಾಶಯಗಳೊಂದಿಗೆ...
ಡಾ. ಜಗದೀಶ ಮಾನೆ, ಧಾರವಾಡ
9060656555