ಅವ್ಯವಸ್ಥೆ ಆಗರ ಮುಸ್ಲಿಂ ಜನಾಂಗದ ಸ್ಮಶಾನ
ಶಿಗ್ಗಾವಿ 28: ನಗರದ ಮುಸ್ಲಿಂ ಜನಾಂಗದ ಸ್ಮಶಾನ (ಖಬರಸ್ಥಾನ) ಮೂಲಭೂತ ಸೌಕರ್ಯವಿಲ್ಲದೆ ಅವ್ಯವಸ್ಥೆಗಳ ಆಗರವಾಗಿದೆ. ಇದಕ್ಕೆ ಹಿಂದಿನ ಅಂಜುಮನ್ ಸಮಿತಿಯೇ ನೇರ ಹೊಣೆ ಎಂದು ಮುಸ್ಲಿಂ ಮುಖಂಡ ಮಹ್ಮದಹನೀಫ ದುಖಾನದಾರ ಆರೋಪಿಸಿದ್ದಾರೆ.
ಅಂಜುಮನ್ ಚುನಾವಣೆ ಕಾಲಕ್ಕೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಮಾಡುವದಾಗಿ ಸುಳ್ಳು ಹೇಳಿ ಚುನಾಯಿತರಾದ ಮೇಲೆ ಸಮಾಜದ ಏಳಿಗೆಗೆ ಶ್ರಮಿಸದೆ ಕಾಲಹರಣ ಮಾಡಿದ್ದಾರೆ. ಸಮಾಜದ ಸ್ಮಶಾನ (ಖಬರಸ್ಥಾನ) ಯಾವುದೇ ಮೂಲಭೂತ ಅಭಿವೃದ್ಧಿ ಕಾಣದಿರುವದನ್ನು ಗಮನಿಸಿದರೆ ಸಮಿತಿಯ ಬೇಜವ್ದಾರಿ ಎಷ್ಟಿದೆ ಎಂಬುದು ಕಂಡುಬರುತ್ತದೆ ಎಂದರು. ಅಂಜುಮನ್ ಸಮಿತಿಯಲ್ಲಿ ಆಯ್ಕೆಯಾದವರಲ್ಲಿ ಹಲವರು ಪುರಸಭೆ ಸದಸ್ಯರಿದ್ದರು, ಇದರಿಂದ ಸಮಾಜ ಹಲವಾರು ಅಭಿವೃದ್ಧಿ ಕಾರ್ಯಗಳ ಕನಸು ಕಂಡಿತ್ತು ಆದರೆ ಇವರ ತದ್ವಿರುದ್ದ ವರ್ತನೆಯಿಂದ ಸಮಾಜಕ್ಕೆ ನಿರಾಸೆ ಉಂಟಾಗಿದೆ. ಖಬರಸ್ಥಾನ ಹೋಗುವ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ, ಕೊಳವೇಭಾವಿ ಇದ್ದರೂ ಸುಸಜ್ಜಿತ ಕುಡಿಯುವ ನೀರಿನ ವ್ಯವಸ್ತೆ ಇಲ್ಲ, ಪಾರ್ಥನೆ ಮಾಡುವ ಚಾವಣಿ ಸೂಕ್ತ ನೆರಳಿಲ್ಲ , ಸ್ವಚ್ಚತೆಯಿಲ್ಲಾ, ಎಲ್ಲೆಂದರಲ್ಲಿ ಗಿಡಘಂಟೆ ಬೆಳೆದು ಕಾಡಿನಂತಾಗಿದೆ. ಇದರಿಂದ ಅಂಜುಮನ್ ಸಮಿತಿ ಪದಾಧಿಕಾರಿಗಳ ಬೇಜವಾಬ್ದಾರಿಗೆ ಕೈಗನ್ನಡಿಯಾಗಿದೆ. ನಿನ್ನೆ ನೆಡೆದ ಅಂಜುಮನ್ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಸಮಾಜದ ಬಗ್ಗೆ ನಿರ್ಲಕ್ಷ ್ಯತೆವಹಿಸದೇ ಇನ್ನಾದರೂ ಸಮಾಜದ ಏಳಿಗೆಗೆ ಶ್ರಮಿಸುವವರಾಗಲಿ ಎಂದರು.