ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಕೋವಿಡ್ ನಿಯಮಾವಳಿಯಂತೆ ಮಾಡಬೇಕು
ಶಿಗ್ಗಾವಿ 18: ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾಗಳಲ್ಲಿ ಮಾಡದೇ ಸರಕಾರದ ಆದೇಶದಂತೆ ಶೇ.50 ರಷ್ಟು ಜನ ಮಸೀದಿಗಳಲ್ಲಿ ಸರದಿ ಪ್ರಕಾರ ಕೋವಿಡ್ ನಿಯಮಾವಳಿಯಂತೆ ಮಾಡಬೇಕು ಎಂದು ಪಟ್ಟಣದ ಸಬ್ಇನ್ಸ್ ಪೆಕ್ಟರ್ ಕೆ.ಎನ್.ಹಳ್ಳಿ ಹೇಳಿದರು.
ಪಟ್ಟಣದ ಪೋಲಿಸ ಠಾಣೆಯ ಆವರಣದಲ್ಲಿ ಬಕ್ರೀದ್ ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಸೀದಿಗಳಲ್ಲಿ ಪ್ರಾರ್ಥನೆಗೆ ಹೋಗುವಾಗ ತಾಪಮಾನ ತಪಾಸಣೆ, ಕಡ್ಡಾಯವಾಗಿ ಮಾಸ್ಕ ಧರಿಸುವುದು, ಪ್ರಾರ್ಥನೆಯಲ್ಲಿ 6 ಅಡಿ ಅಂತರ ಕಾಪಾಡುವುದು, ಕೈಗಳನ್ನು ಸೋಪ ಅಥವಾ ಸ್ಯಾನಿಟೈಜರನಿಂದ ತೊಳೆಯುವುದು, ತಮ್ಮ ತಮ್ಮ ಮನೆಗಳಿಂದ ಕಡ್ಡಾಯವಾಗಿ ಮುಸಲ್ಲಾವನ್ನು ತರುವುದು, ಪ್ರಾರ್ಥನೆ ನಂತರ ಹಸ್ತಲಾಘವ ಮತ್ತು ಆಲಿಂಗನ ಮಾಡದೇ ಇರುವುದು, ಅಲ್ಲದೇ ಸರಕಾರಿ ಸ್ಥಳಗಳಲ್ಲಿ ಪ್ರಾಣಿವಧೆ ಮತ್ತು ಬಲಿದಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.
ಅಂಜುಮನ ಸಂಸ್ಥೆ ಅಧ್ಯಕ್ಷ ಸುಲೇಮಾನ ಖಾಜೇಖಾನವರ ಮಾತನಾಡಿ ನಮಗೆ ಈದ್ಗಾ ಮೈದಾನಗಳಲ್ಲಿ ಆದರೆ ಹೆಚ್ಚಿನ ಸ್ಥಳಾವಕಾಶ ಸಿಗುತ್ತಿತ್ತು ಆದರೆ ಮಸೀದಿಗಳಲ್ಲಿ ಪ್ರಾರ್ಥನೆಗೆ ಕಷ್ಟ ಆದರೂ ಸಹಿತ ಸರಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ ಎಂದರು.
ಅಂಜುಮನ ಸಂಸ್ಥೆ ಉಪಾಧ್ಯಕ್ಷ ಮಜೀದ ಮಾಳಗಿಮನಿ ಮಾತನಾಡಿ ಕೋವಿಡ್ ನಿಯಮಾವಳಿಯಂತೆ ನಾವು ಸರಳವಾಗಿ ಮುಂಜಾಗ್ರತೆವಹಿಸಿ ಬಕ್ರೀದ ಹಬ್ಬವನ್ನು ಆಚರಿಸುತ್ತೇವೆ ಎಂದರು.
ಕುರುಬ ಸಮಾಜ ತಾಲೂಕ ಅಧ್ಯಕ್ಷ ಪಕ್ಕೀರ್ಪ ಕುಂದೂರ, ಸಮಾಜಸೇವಕ ಅತ್ತಾವುಲ್ಲಾಖಾನ ಖಾಜೇಖಾನವರ ಮಾತನಾಡಿದರು. ಈ ಸಂದರ್ಭದಲ್ಲಿ ಎ.ಎಸ್.ಐ ಎಂ.ಜಿ.ತಗಡಿನಮನಿ, ಪುರಸಭೆ ಸದಸ್ಯರಾದ ಗೌಸಖಾನ ಮುನಶಿ, ಮುಸ್ತಾಕ ತಹಶೀಲ್ದಾರ, ಜಾಫರಖಾನ ಪಠಾಣ, ದಲಿತ ಮುಖಂಡ ಅಶೋಕ ಕಾಳೆ, ಅಂಜುಮನ ಸಂಸ್ಥೆಯ ಹನೀಫ ಅಂಬೂರ, ಗುಲ್ಲಾಮುದ್ದೀನ, ಆಹ್ಮದ ಭಾಷಾ, ಸರತಾಜ ಹಾನಗಲ್ಲ, ಸಾಧೀಕ, ಜಾಕೀರ, ಮಾಜಿ ಪುರಸಭೆ ಅಧ್ಯಕ್ಷ ಅಬ್ದುಲಕರೀಂ ಮೊಗಲಲ್ಲಿ, ನ್ಯಾಯವಾದಿ ಸಲೀಂ ಆಹ್ಮದ ಪರೋಖಿ, ಪೋಲಿಸ ಅಧಿಕಾರಿಗಳಾದ ಭಜಂತ್ರಿ, ರವಿ ತಳವಾರ, ಸಂತೋಷ ಕುಸನೂರ ಸೇರಿದಂತೆ ಇತರರು ಇದ್ದರು, ಕಾರ್ಯಕ್ರಮವನ್ನು ಪೋಲಿಸ ಅಧಿಕಾರಿ ಮಾರುತಿ ಹಿತ್ತಲ್ಲರ ನಿರ್ವಹಿಸಿದರು.