ವಿಜಯಪುರ

ತ್ಯಾಗ ಮತ್ತು ಸಾತ್ವಿಕ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮನ ಬದುಕು ಎಲ್ಲರಿಗೂ ಮಾದರಿ

ತ್ಯಾಗ ಮತ್ತು ಸಾತ್ವಿಕ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮನ ಬದುಕು ಎಲ್ಲರಿಗೂ ಮಾದರಿ

ಲೋಕದರ್ಶನ ವರದಿ 

ವಿಜಯಪುರ 10 : ಮಲ್ಲಮ್ಮ ಹಲವಾರು ಕಷ್ಟಗಳನ್ನು ಸಹಿಸಿಕೊಂಡು ಅವಳು ಕೇವಲ ಹೆಸರಾಗಿ ಉಳಿಯದೆ ಅವಳು ಜಗನ್ಮಾತೆ ಪಾರ್ವತಿಯ ಸ್ವರೂಪಳಾಗಿದ್ದಳು. ಮಲ್ಲಿಕಾರ್ಜುನ ಅವಳ ಕಷ್ಟಗಳನ್ನು ಒಂದೊಂದಾಗಿ ಪರಿಹರಿಸಿದರು ಎಂದು ಶಿರೋಳದ ಬಸವನ ಬೃಂದಾವನ ಪರಮಪೂಜ್ಯ ಮಹಾಂತ ಸ್ವಾಮಿಗಳು ಅತಿಥಿ ಮತ್ತು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಪ್ರಾಧ್ಯಾಪಕ ಎ. ಎಸ. ಹಿಪ್ಪರಗಿ ಪ್ರತಿಷ್ಠಾನ ಮತ್ತು ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ವಿಜಾಪುರ ಇವುಗಳ ಸಹಯೋಗದಲ್ಲಿ ಸೋಮನಗೌಡ ಪಾಟೀಲ್ ಮತ್ತು ಚೆನ್ನಪ್ಪ ದೇಸಾಯಿ ಇವರ ಸ್ಮರಣಾರ್ಥ ದಿ. ಬಿ ಎಸ್ ಪಾಟೀಲ್ ಸಾಸನೂರ್ ಮತ್ತು ಸುರೇಶ್ ದೇಸಾಯಿ ದತ್ತಿ ನೀಡಿದ ಪ್ರಯುಕ್ತ ಮಲ್ಲಮ್ಮನ ಗುಣಗಳನ್ನು ಗುಣಗಾನ ಮಾಡಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.

ನಿಮ್ಮ ಓದು ಪೂಜೆ.ಸತತ ಪ್ರಯತ್ನವೇ ತಪಸ್ಸು. ಗುರುಗಳ ಮಾರ್ಗದರ್ಶನವೇ ನಿಮ್ಮ ತೊಂದರೆಗಳನ್ನು ಹೋಗಲಾಡಿಸುವುದು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅವರ ಚರಿತ್ರೆ ತಮಗೆ ಮಾದರಿಯಾಗಬೇಕೆಂದರು. ಮುಖ್ಯ ಅಧ್ಯಾಪಕ ಜಿಎಂ ಬಿರಾದಾರ್ ವಂದಿಸಿದರು. ಪಾಟೀಲ ಮೆಡಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿಗಳಾದ ಆರ್ ಎಚ್ ಬಿರಾದಾರ್ ಬಿ ಬಿ ಪಾಟೀಲ್ ಚಬನೂರ ಪ್ರತಿಷ್ಠಾನದ ಸದಸ್ಯರಾದ  ಬಿ ಕೆ ಗೋಟ್ಯಾಳ ಎಸ್ ಬಿ ದೊಡ್ಡಮನಿ ದಂಪತಿಗಳು ಪ್ರಶಸ್ತಿ ವಿಜೇತೆ ವಿದ್ಯಾವತಿ ಅಂಕಲಗಿ, ಅಶೋಕ್ ಹಿಪ್ಪರಗಿ, ಎಸ್‌.ಜಿ ನಾಡಗೌಡರ್,  ಬಿ ಎಸ್ ಬಿರಾದಾರ್, ಬಿ. ಟಿ ಈಶ್ವರಗೊಂಡ ಮತ್ತು ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ