ಮುಂದಗೋಡ

ಗಾಯಗೊಂಡಿದ್ದ ಬೈಕ್ ಸವಾರ ಸಾವು

ಗಾಯಗೊಂಡಿದ್ದ ಬೈಕ್ ಸವಾರ ಸಾವು

ಮುಂಡಗೋಡ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತಾಲೂಕಿನ ಜೇನಮುರಿ ಗ್ರಾಮದ ಬೈಕ್ ಸವಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾನೆ. 

ಬಸವರಾಜ ಶ್ಯಾಡಂಬಿ(36) ಮೃತಪಟ್ಟವ. ಸೋಮವಾರ ಈತನು ಬೈಕ್ ಮೇಲೆ ಪಟ್ಟಣದಿಂದ ಜೇನಮುರಿ ಗ್ರಾಮಕ್ಕೆ ಹೋಗುತ್ತಿದ್ದಾಗ ಮಜ್ಜಿಗೇರಿ ಕ್ರಾಸ್ ಬಳಿ ಹುಬ್ಬಳ್ಳಿ ಕಡೆಯಿಂದ ಪಟ್ಟಣದ ಕಡೆ ಬರುತ್ತಿದ್ದ ಕಾರು ಮತ್ತು ಈತನ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದನು. 108 ಆಂಬುಲೆನ್ಸ್‌ನ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ.ಬಳೂರು ಮತ್ತು ಚಾಲಕ ಕೆಂಚೇಶ ಇ.ಎನ್‌. ಗಾಯಾಳುವಿಗೆ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ಆತನ ಬಳಿ ಇದ್ದ 1450ರೂ., ಮೊಬೈಲ್ ಮತ್ತು ಪರ್ಸ್‌ ಅನ್ನು ಅವರ ಸಂಬಂಧಿಕರಿಗೆ 108 ಸಿಬ್ಬಂದಿ ಒಪ್ಪಿಸಿದರು. 


ಸುದ್ದಿ ಓದಿ