ತಾಳಿಕೋಟಿ

ಆದರ್ಶ ಮಹಿಳೆ ಹೇಮರೆಡ್ಡಿ ಮಲ್ಲಮ್ಮ

ಆದರ್ಶ ಮಹಿಳೆ ಹೇಮರೆಡ್ಡಿ ಮಲ್ಲಮ್ಮ

ತಾಳಿಕೋಟೆ: ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  

ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಿವಶರಣ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಹೇಮರೆಡ್ಡಿ ಮಲ್ಲಮ್ಮ ತಾಯಿಯ ದ್ಯಾನಮಂದಿರದ ಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡಿದರು. 

ಹೇಮರಡ್ಡಿ ಮಲ್ಲಮ್ಮ ಇಂದಿಗೂ ಕೂಡಾ ಬಹಳ ಪ್ರಸ್ತುತ.  ಪ್ರತಿಯೊಂದು ಕುಟುಂಬದಲ್ಲಿ ಒಬ್ಬೊಬ್ಬ ಹೇಮರಡ್ಡಿ ಮಲ್ಲ ಇದ್ದುಬಿಟ್ರೆ, ಆ ಕುಟುಂಬವೇ ನಂದನವಾಗುತ್ತದೆ. ಸಮಯಕ್ಕೆ, ಸಂದರ್ಭಕ್ಕೆ ಯಾವ ರೀತಿ ಹೊಂದಿಕೊಳ್ಳಬೇಕು ಎಂಬುದನ್ನು ಹೇಮರೆಡ್ಡಿ ಮಲ್ಲಮ್ಮ ಚರಿತ್ರೆಯನ್ನು ನೋಡಿದರೆ ಗೊತ್ತಾಗುತ್ತದೆ. ಅವಳ ಬದುಕು ನಮಗೆ ಅದರ್ಶವಾಗುತ್ತದೆ. ಓರ್ವ ಸಜ್ಜನ ಶಿವಶರಣೆ ಓರ್ವ ಗೃಹಿಣಿಯಾಗಿ ಹೇಗೆ ಬೆಳೆಯಬಹುದು, ಇತರರಿಗೆ ಹೇಗೆ ಅದರ್ಶವಾಗಬಹುದು ಎಂಬುದು ಗೊತ್ತಾಗುತ್ತದೆ. ನನಗೆ ರೆಡ್ಡಿ ಸಮುದಾಯದ ಅನೇಕ ಜನ ಸ್ನೇಹಿತರಿದ್ದಾರೆ. ಇವ್ರು ಅತ್ಯಂತ ಕಠಿಣ ಪರಿಶ್ರಮ, ಸ್ವಚ್ಛ ಕೆಲಸ ಮಾಡುವ ಸಮುದಾಯ. ಅತ್ಯಂತ ಶ್ರೀಮಂತರೂ ಕೂಡಾ ಹೊಲದಲ್ಲಿ ಕೆಲಸ ಮಾಡುತ್ತಾರೆ. ನಿಜವಾಗಿಯೂ ಲಕ್ಷಿ-್ಮ ರೆಡ್ಡಿ ಸಮುದಾಯಕ್ಕೆ ಒಲದಿದ್ದಾಳೆ. ರೆಡ್ಡಿ ಸಮುದಾಯದವರ ಮನೆ, ದನದ ಕೊಟ್ಟಿಗೆಯೂ ಅತ್ಯಂತ ಶುಭ್ರವಾಗಿರುತ್ತದೆ.  ಇದು ರೆಡ್ಡಿ ಸಮುದಾಯದವರ ಮನೆ ಹಾಗೂ ಮನ ಎರಡೂ ಶುಭ್ರವಾಗಿರುತ್ತದೆ ಎಂಬುದಕ್ಕೆ ಸಾಕ್ಷಿ. ದುಡ್ಡೇ ದೊಡ್ಡಪ್ಪ ಎನ್ನುವ ಗಾದೆ ಮಾತಿದೆ,  ಅದು ದುಡಿಮೆಯೇ ದೊಡ್ಡಪ್ಪ ಎಂದು ಬದಲಾಯಿಸಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ನಡಹಳ್ಳಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಸಮುದಾಯ ಭವನ ನಿರ್ಮಾಣಕ್ಕೆ ಏನು ಸಹಾಯಧನ ಬೇಕೋ ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.  

ಶಾಸಕ ಎ. ಎಸ್‌.ಪಾಟೀಲ್ ನಡಹಳ್ಳಿ ಸಮುದಾಯ ಭವನಕ್ಕೆ ನನ್ನಿಂದ ಆಗುವ ಎಲ್ಲ ಸಹಾಯವನ್ನು ಮಾಡಿದ್ದೇನೆ, ಮುಂದೆಯೂ ಎಲ್ಲ ಸಮುದಾಯದವರ ಏಳಿಗೆಗಾಗಿ ನಿರಂತರವಾಗಿ ಸಹಾಯ ಮಾಡುತ್ತೇನೆ ಎಂದರು. 

ರಡ್ಡಿ ಸಮಾಜ ಬಾಂಧವರ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರು, ಅರುಣ ಶಹಾಪೂರ,  ಹನುಮಂತ ನಿರಾಣಿ, ಪಿ.ಹೆಚ್‌.ಪೂಜಾರ, ಮಾಜಿ ಶಾಸಕ ಶೀವಪುತ್ರ​‍್ಪ ದೇಸಾಯಿ, ರಡ್ಡಿ ಸಮಾಜದ ಮುಖಂಡರಾದ ಬಿ.ಎಸ್‌.ಪಾಟೀಲ(ಯಾಳಗಿ), ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅಸೋಶೇಷನ್‌ದ ಶರಣಗೌಡ ಇಬ್ರಾಹಿಂಪೂರ, ಕಾರ್ಯದರ್ಶಿ ಪ್ರಭುಗೌಡ ಮದರಕಲ್ಲ, ಸದಸ್ಯರಾದ ಬಿ.ಎಸ್‌.ಇಸಾಂಪೂರ, ಆನಂದ ದೊಡಮನಿ, ಚಿನ್ನಪ್ಪಗೌಡ ಮಾಳಿ, ಸೋಮನಗೌಡ ಪಾಟೀಲ, ಚಿಂತಪ್ಪಗೌಡ ಪಾಟೀಲ, ಶಿವನಗೌಡ ಕೊಳೂರ, ಪ್ರಶಾಂತ ಹಾವರಗಿ, ಸಾಹೇಬಗೌಡ ಚೌದ್ರಿ, ಶಂಕರಗೌಡ ಮಾಡಗಿ, ಬಸನಗೌಡ ಗಬಸಾವಳಗಿ, ಶರಣಭೋಪಾಲ ದೇಶಮುಖ, ಸಂಗಮೇಶ ದೇಸಾಯಿ, ಸಿದ್ದನಗೌಡ ಮಂಗಳೂರ, ಶ್ರೀಮತಿ ನೀಲಮ್ಮ ಬಿ. ಪಾಟೀಲ, ಗಂಗೂಬಾಯಿ ಪಾಟೀಲ, ದ್ರಾಕ್ಷಾಯಿಣಿ ಹಿಪ್ಪರಗಿ, ಹಾಗೂ ಸಮಾಜದ ಮುಖಂಡರುಗಳು, ಗಣ್ಯರು, ಉಪಸ್ಥಿತರಿದ್ದರು. 

ಎಚ್‌.ಎಸ್‌.ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಸುಮಂಗಲಾ ಕೊಳೂರ ನಿರೂಪಿಸಿದರು. ಕಾರ್ಯದರ್ಶಿ ಪ್ರಭುಗೌಡ ಮದರಕಲ್ಲ ವಂದಿಸಿದರು. 


ಸುದ್ದಿ ಓದಿ