ಚನ್ನಮ್ಮನ ಕಿತ್ತೂರು ಅಭಿವೃದ್ಧಿಗೆ ಸರಕಾರ ಮುಂದಾಗಬೇಕು: ದೇಸಾಯಿ
ಇಂಡಿ31: ಚನ್ನಮ್ಮನ ಕಿತ್ತೂರು ಅಭಿವೃದ್ಧಿಗೆ ಸರಕಾರ ಮುಂದಾಗಬೇಕು. ದೇಶದ ಸ್ವಾತಂತ್ರ್ಯೆಕ್ಕಾಗಿ ಹೋಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ ಸ್ವತಂತ್ರ್ಯೆ ಹೋರಾಟಗಾರ್ತಿಗೆ ಗೌರವ ಸಲ್ಲಿಸುವ ಕಾರ್ಯ ಸರಕಾರದಿಂದ ನಡೆಯಬೇಕು ಎಂದು ಕಿತ್ತೂರು ಚನ್ನಮ್ಮನ 7ನೇ ತಲೆಮಾರಿನ ವಂಶಸ್ಥರಾದ ಸೋಮಶೇಖರ ದೇಸಾಯಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿಯಲ್ಲಿ ಹಮ್ಮಿಕೊಂಡ ವೀರರಾಣಿ ಕಿತ್ತೂರ ಚನ್ನಮ್ಮನವರ 198ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ವೀರರಾಣಿ ಕತ್ತೂರ ಚನ್ನಮ್ಮ ಹಾಗೂ ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ವೀರಮಾತೆ ಚನ್ನಮ್ಮನವರ ಜನ್ಮಸ್ಥಾನ ಕೊಟ್ನಾಳ ಹಾಗೂ ಕಾಕತಿ ಮತ್ತು ಕಿತ್ತೂರು ಸಂಸ್ಥಾನವನ್ನು ಸರಕಾರ ಅಭಿವೃದ್ಧಿಪಡಿಸಬೇಕು.
ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ಅರಮನೆ ನಿರ್ಮಾಣ ಸೇರಿದಂತೆ ಕಿತ್ತೂರಿನಲ್ಲಿ ಚನ್ನಮ್ಮನವರ ಗತವೈಭವ ಮರುಕಳಿಸಲು 50 ಕೋಟಿ ರೂಪಾಯಿ ಮೀಸಲಿರಿಸಿದ್ದು ಈಗಾಗಲೆ 10 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ, ಚನ್ನಮ್ಮನವರು ಜನ್ಮಿಸಿದ ಕೊಟ್ನಾಳ ಗ್ರಾಮವನ್ನು ಮತ್ತು ಕೊಟ್ನಾಳದ ದೇಶಮುಖ ಮನೆತನದಲ್ಲಿ ಬ್ರಿಟಿಷ್ಯರಿಂದ ಗಲ್ಲಿಗೇರಿದ ವೀರಸಂಗಪ್ಪ ಮತ್ತು ಅವರ ಮಗ ಬಸಲಿಂಗಪ್ಪ ದೇಸಾಯಿ ಅವರು ಹುತಾತ್ಮರಾಗಿದ್ದು ಅವರನ್ನು ಅಂತ್ಯಕ್ರೀಯೆ ಮಾಡಿದ ಸ್ಥಳ ಗುರುತಿಸಿ ಅದನ್ನು ಅಭಿವೃಧ್ಧಿಪಡಿಸಬೇಕು. ವಿಜಯಪುರದ ಹುತಾತ್ಮ ವೃತ್ತವನ್ನು ಸಹ ಕಿತ್ತೂರು ಪ್ರಾಧಿಕಾರದಲ್ಲಿ ಸೇರೆ್ಡ ಮಾಡಿಕೊಂಡು ಚನ್ನಮ್ಮನಿಗೆ ಸಂಬಂಧಿಸಿದ ಎಲ್ಲವುಗಳನ್ನು ಅಭಿವೃದ್ಧಿಪಡಿಸಿ, ಲಂಡನ್ ಮ್ಯೂಜಯಮ್ನಲ್ಲಿರುವ ಕಿತ್ತೂರು ಚನ್ನಮ್ಮನವರ ಖಡ್ಗವನ್ನು ಮರಳಿ ತರುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದರು.
ಚನ್ನಮ್ಮನ ಬಲಗೈ ಭಂಟ ರಾಯಣ್ಣನ ಪ್ರಾಧಿಕಾರ ರಚನೆಯಾಗಿದೆ. ಅವನ ಗತ ವೈಭವ ಮರುಕಳಿಸಲು ರಾಯಣ್ಣನ ಅನುಯಾಯಿಗಳು ಯಾವ ರೀತಿಯ ಹೋರಾಟವನ್ನು ಮಾಡಿದ್ದಾರೆಯೋ ಅದೇ ಹೋರಾಟ ರಾಯಣ್ಣನ ತಾಯಿಯಾದ ಕಿತ್ತೂರಿನ ರಾಣಿ ಚನ್ನಮ್ಮನ ಗತ ವೈಭವ ಮರುಕಳಿಸಲು ಅಂತಹದ್ದೇ ಹೋರಾಟದ ಅವಶ್ಯಕತೆ ಇದೆ. ಹೀಗಾಗಿ ಸಮಾಜ ಬಾಂದವರು ಸಂಘಟನಾತ್ಮಕವಾಗಿ ಹೋರಾಟ ನಡೆಸಿದರೆ ಮಾತ್ರ ಏನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಉತ್ತರ ಕರ್ನಾಟಕ ಬಾಗವು ಚನ್ನಮ್ಮನ ಹೆಸರಿನೊಂದಿಗೆ ಗುರುತಿಸುವಂತಾಗಲು ಹಲವಾರು ಜನ ತಮ್ಮದೇಯಾದ ಪ್ರಯತ್ನ ಮಾಡುತ್ತಿದ್ದು ಸರಕಾರಗಳು ಜನರ ಮನಸ್ಸು ಅರಿತು ಉತ್ತರ ಕರ್ನಾಟಕ ಭಾಗಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಬೇಕು ಹಾಗೂ ಸಮಾಜ ಬಾಂದವರು ಸಂಘಟಿತರಾಗಿ ಸಮಾಜದ ಏಳ್ಗೆಗೆ ಶ್ರಮಿಸಿ ಯುವಕರು ಸಮಾಜ ಸಂಘಟನೆ ಮುಂದಾಗಿ ಎಂದು ಕರೆ ನೀಡಿದರು.
ಪಂಚಮಸಲಿ ಸಮಾಜದ ಅಧ್ಯಕ್ಷ ವಿ.ಹೆಚ್.ಬಿರಾದಾರ, ಅಕ್ಕಮಹಾದೇವಿ ಸೌಹಾರ್ದದ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ ಯಲಗೊಂಡ ಬೇವನೂರ, ಶಿವಾನಂದ ಮಠಪತಿ, ವಿಠ್ಠಲ ಪಟ್ಟಣ, ಶಿವಾನಂದ ಚಾಳೀಕಾರ, ಚಂದ್ರಾಮ ಮೇಡೇದಾರ, ರಮೇಶ ಹತ್ತಿ, ವಿದ್ಯಾಶ್ರೀ ಪಾಟೀಲ, ಸಿದ್ದಾರ್ಥ ಅರಳಿ, ಬಸವರಾಜ ದಶವಂತ, ಮಹಾಂತೇಶ ಮುಡಕೆ, ಅನೀಲಗೌಡ ಬಿರಾದಾರ, ಸಿ.ಎಂ. ಬಂಡಗರ, ಶ್ರೀಶೈಲ ಮುಳಜಿ, ಭೀಮಾಶಂಕರ ಆಳೂರ, ರಾಜಕುಮಾರ ನಾಯ್ಕೋಡಿ, ಬಸು ಒಡೆಯರ್, ಅಶೋಕ ಬಳಬಟ್ಟಿ, ಮಹೇಶ ಬಳಬಟ್ಟಿ, ಸಚಿನ್ ಮೇಡೇದಾರ, ಗುರುಸಿದ್ದಪ್ಪ ಅರ್ಜುಣಗಿ ಮತ್ತಿತರರು ಇದ್ದರು.