ಪಂಚಭೂತಗಳಲ್ಲಿ ಲೀನರಾದ ಪ್ರಸಿದ್ಧ ಗಾಯಕ ಬಪ್ಪಿ ಲಹಿರಿ
ಮುಂಬೈ: ಫೆಬ್ರವರಿ 17: ಪ್ರಸಿದ್ಧ ಗಾಯಕ, ಡಿಸ್ಕೋ ಕಿಂಗ್ ಎಂದೇ ಕರೆಯಲ್ಪಡುತ್ತಿದ್ದ ಬಪ್ಪಿ ಲಾಹಿರಿ ಅಂತ್ಯಸಂಸ್ಕಾರ ಅಂತ್ಯಕ್ರಿಯೆಯನ್ನು ಮುಂಬೈನಲ್ಲಿರುವ ವೈಲ್ ಪಾರ್ಲೆ ಸ್ಮಶಾನದಲ್ಲಿ ಇಂದು ನಡೆಯಿತು.
ಬಪ್ಪಿ ಲಾಹಿರಿ ಅವರ ಮಗ, ಬಪ್ಪಾ ಲಾಹಿರಿ ಅವರು ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಅಂತ್ಯಸಂಸ್ಕಾರದಲ್ಲಿ ಸೋಫಿ ಚೌದ್ರಿ, ಶಕ್ತಿ ಕಪೂರ್, ವಿದ್ಯಾ ಬಾಲನ್, ಅಲ್ಕಾ ಯಾಗ್ನಿಕ್ ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು, ಹಿತೈಷಿಗಳು ಮತ್ತು ಸ್ನೇಹಿತರು ಭಾಗವಹಿಸಿದ್ದರು.
ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಫೆಬ್ರವರಿ 15 ರಂದು ರಾತ್ರಿ 11.45 ಕ್ಕೆ ಕೊನೆಯುಸಿರೆಳೆದರು ಬಪ್ಪಿ ಡಾ ನಿಧನರಾದರು. ಸುಮಾರು ಒಂದು ತಿಂಗಳ ಕಾಲ ಮುಂಬೈನ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಆಯುಷ್ಮಾನ್ ಖುರಾನಾ, ಅನುಷ್ಕಾ ಶರ್ಮಾ, ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕ ಗಣ್ಯರು ನಿನ್ನೆ ಗಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಬಪ್ಪಿ ಲಾಹಿರಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಒಬ್ಬ ಮಗ, ಬಪ್ಪಾ ಲಾಹಿರಿ, ಮತ್ತು ಮಗಳು, ರೆಮಾ ಲಾಹಿರಿ. ಮಗ ಬಪ್ಪಾ ಸಾಹಸ ನಿರ್ದೇಶಕ ಮಹೇಂದ್ರ ವರ್ಮಾ ಅವರ ಪುತ್ರಿ ತನೀಶಾ ಲಾಹಿರಿ ಅವರನ್ನು ವಿವಾಹವಾಗಿದ್ದಾರೆ.