12ರಂದು ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಕಳಸಾರೋಹಣ
ಮುಂಡರಗಿ 09: ಆ.12 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಹೆಸರೂರು ರಸ್ತೆಯಲ್ಲಿನ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಕಳಸಾರೋಹಣ ಹಾಗೂ ದಿ.ಶಿವಪ್ಪ ಮಲ್ಲಪ್ಪ ಮೇಟಿ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭ ಜರುಗುವುದು ಎಂದು ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ ಕಮೀಟಿ ಅಧ್ಯಕ್ಷ ಡಾ.ಬಸವರಾಜ ಮೇಟಿ ತಿಳಿಸಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಸಾಧ್ಯವಾಗದೇ ಸಾಂಕೇತಿಕವಾಗಿ ದೇವಸ್ಥಾನದ ಉದ್ಘಾಟನೆಯನ್ನು ಮಾಡಲಾಯಿತು.
ಈ ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದ ಅನುದಾನ ಹಾಗೂ ಭಕ್ತರ ಸಹಕಾರದಿಂದ ಇಷ್ಟು ಸುಂದರವಾಗಿ ನಿರ್ಮಾಣ ಮಾಡಲು ಸಾಧ್ಯವಾಯಿತು. ಹೀಗಾಗಿ ಈ ವರ್ಷ ದೇವಸ್ಥಾನದ ಕಳಸಾರೋಹಣ ಹಾಗೂ ಸುಮಾರು 3 ಕೋಟಿ ಅಂದಾಜು ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸುವ ಶಿಲನ್ಯಾಸ ಸಮಾರಂಭವನ್ನು ವಿಜ್ರಂಭಣೆಯಿಂದ ಮಾಡಲಾಗುವುದು.
ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಮುಂಡರಗಿಯ ಜಗದ್ಗುರು ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು, ಹರಿಹರದ ತಾಲೂಕಿನ ಶ್ರೀ ವೇಮನಾನಂದ ಮಹಾಸ್ವಾಮಿಗಳು, ಗದಗ ಶ್ರೀ ಕಲ್ಲಯ್ಯಜ್ಜನವರು ಹಾಗೂ ಹಿರೆವಡ್ಡಟ್ಟಿಯ ಶ್ರೀ ವೀರೇಶ್ವರ ಶಿವಾಚಾರ್ಯ ಇವರು ವಹಿಸುವರು. ಹೀಗಾಗಿ ಈ ಕಾರ್ಯಕ್ರಮದಕ್ಕೆ ಸಮಸ್ತ ರಡ್ಡಿ ಸಮಾಜದ ಮುಖಂಡರು ಹಾಗೂ ಸರ್ವ ಭಕ್ತ ಸಮುದಾಯದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಈ ವೇಳೆ ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್ ಕಮೀಟಿ ಸಹಕಾರ್ಯದರ್ಶಿ ಎಸ್.ಆರ್.ಬಸಾಪೂರ ಮಾತನಾಡಿ, ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ನೂತನ ಕಳಸವನ್ನು ಆ.11 ರಂದು ಸಾಯಂಕಾಲ 4 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ದೇವಸ್ಥಾನವನ್ನು ತಲುಪಿಸಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಸವರಾಜ ಮೇಟಿ, ಉದ್ಘಾಟಕರಾಗಿ ಎಚ್.ಕೆ.ಪಾಟೀಲ್, ಸಮುದಾಯ ಭವನದ ಶಿಲನ್ಯಾಸವನ್ನು ಸಚಿವ ಹಾಲಪ್ಪ ಆಚಾರ್ ಉದ್ಘಾಟನೆ ಮಾಡುವರು. ಟ್ರಸ್ಟ್ ನಾಮಫಲಕ ಅನಾವರಣವನ್ನು ಮಾಜಿ ಶಾಸಕ ಜಿ.ಎಸ್.ಪಾಟೀಲ್ ಮಾಡುವುದರು.
ಹಾಗೂ ಮುಖ್ಯ ಅಥಿತಿಗಳಾಗಿ ಸಂಸದ ಶಿವಕುಮಾರ ಉದಾಸಿ, ಶಾಸಕ ರಾಮಣ್ಣ ಲಮಾಣಿ, ವಿ.ಪ.ಸದಸ್ಯರುಗಳಾದ ಬಸವರಾಜ ಹೊರಟ್ಟಿ, ಎಸ್.ವಿ.ಸಂಕನೂರ. ಸಲೀಂ ಅಹ್ಮದ, ಮಾಜಿ ಶಾಸಕರುಗಳಾದ ಡಿ.ಆರ್.ಪಾಟೀಲ್, ಬಿ.ಆರ್.ಯವಗಲ್ಲ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್.ಗಡ್ಡದೇವರಮಠ ಹಾಗೂ ಇತರೆ ಅತಿಥಿಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಈ ವೇಳೆ ವಿಜಯಕುಮಾರ ಬಣಕಾರ, ವೀರಣ್ಣ ಮೇಟಿ, ಎ.ಬಿ.ಚನ್ನಳ್ಳಿ, ಸುರೇಶ ಅಬ್ಬಿಗೇರಿ, ಉಮೇಶ ಚನ್ನಳ್ಳಿ, ಅಂದಪ್ಪ ಗಡ್ಡದ, ವಿಶ್ವನಾಥಗೌಡ ಪಾಟೀಲ್ ಇತರರು ಇದ್ದರು.