ಬಳ್ಳಾರಿ

ಮಳೆ ಬರಲಾರದೆ ರೈತರು ಕಂಗಾಲು

ಮಳೆ ಬರಲಾರದೆ ರೈತರು ಕಂಗಾಲು

ಬಳ್ಳಾರಿ 06: ಬಹದ್ದೂರ್ ಬಂಡಿ ಗ್ರಾಮದಲ್ಲಿ ದಿ. 06ರಂದು ರೈತರು ಸಭೆ ಸೇರಿ ಮಳೆ ಬರಲಾರದೆ ಬೆಳೆ ಒಣಗುತ್ತಿದ್ದು ಕಿನ್ನಾಳ  ಅರಿಕೇರಿ (ಹಿರೇಹಳ್ಳ) ಜಲಾಶಯದ ಎಡದಂಡೆ ಕಾಲುವೆಯ ನೀರು ಬಿಡಿಸುವ ಸಲುವಾಗಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್ ರವರ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ರೈತ ಹೋರಾಟದ ಮುಖಂಡ ಡಿ ಎಚ್ ಪೂಜಾರ್ ಅವರ ನೇತೃತ್ವದಲ್ಲಿ ಸಭೆ ಸೇರಿ ನೂರಾರು ಎಕರೆ ಬೆಳೆ ಒಣಗುತ್ತಿದ್ದು ಮಳೆ ಬರಲಾರದೆ ರೈತರು ಕಂಗಾಲಾಗಿದ್ದಾರೆ  ಕಿನ್ನಾಳ  ಅರಿಕೇರಿ ಡ್ಯಾಮ್‌ನಿಂದ ಬಹದ್ದೂರ್ ಬಂಡಿ ಚುಕ್ಕನಕಲ್ ಹೂವಿನಾಳ ರೈತರಿಗೆ ಭೂಮಿಗಳಿಗೆ ನೀರು  ಒದಗಿಸುವ ಸಲುವಾಗಿ ಈ ಸಭೆಯಲ್ಲಿ ನೂತನ ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು ಒಮ್ಮತದಿಂದ ಹುಸೇನ್ ಸಾಬ್ ಕಮ್ಮಾರ ಅವರನ್ನು ಅಧ್ಯಕ್ಷರನ್ನಾಗಿ ಉಪಾಧ್ಯಕ್ಷರಾಗಿ ಪೀರು ಸಾಹೇಬ್ ಹಿರೇ ಮಸೂತಿ ಕಾರ್ಯದರ್ಶಿಯಾಗಿ  ಹಜರತಲಿ ಹಿರೇ ಮಸೂತಿ ಸಹ ಕಾರ್ಯದರ್ಶಿಯಾಗಿ ಮೈನುಸಾಬ್ ಬೆಲ್ದಾರ್ ಖಜಾಂಚಿಯಾಗಿ ಗವಿಸಿದ್ದಪ್ಪಕುರಿ ಮಾಡಲಾಯಿತು ಸದಸ್ಯರುಗಳಾಗಿ ತಿಪ್ಪಣ್ಣ ಲೇಬಗೇರಿ ಇಮಾಮ್ ಸಾಬ್ ನದಾಫ್ ಗೌಸ್ ಚಿಕ್ಕ  ಮಸೂತಿ  ಬಸವರಾಜ್ ಲೇಬಗೇರಿ ಸದ್ದಾಂ ಕಿಲ್ಲೆದಾರ್ ಆಸಿಫ್ ಅಲಿ ಹಿರೇಮಸುತಿ ಪ್ರಭು ಹೊಸಮನಿ ಕಿನ್ನಾಳ ಅರಿಕೇರಿ ಡ್ಯಾಮಿನ ಎಡದಂಡೆ ಕಾಲುವೆಯ ಸಮಿತಿಯ ಸದಸ್ಯರನ್ನಾಗಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಹಿರೇಹಳ್ಳ ಡ್ಯಾಮ್ ನಿರ್ಮಾಣವಾಗಿ ಸುಮಾರು 25ವರ್ಷ ಗತಿಸಿದರೂ ಈ ಭಾಗಗಳಿಗೆ  ನೀರು ಒದಗಿಸಿ ಒದಗಿಸಿರುವುದಿಲ್ಲ ಈ ಗ್ರಾಮಗಳಿಗೆ ತುಂಗಭದ್ರಾ ನದಿಯ ಹಿನ್ನೀರು 4ಕಿಲೊಮೀಟರ್ ಹಿರೇಹಳ್ಳ 8ಕಿಲೋ ಮೀಟರ್ ಇದ್ದರೂ ಸಹ ರೈತರ ಬಾಳಿಗೆ ಯಾವುದೇ ಯಾವುದೇ ಪ್ರಯೋಜನ ಆಗುವುದಿಲ್ಲ ಈಗಾಗಲೇ ಸುಮಾರು ವರ್ಷಗಳಿಂದ ಕಿನ್ನಾಳ ಹಿರೇಹಳ್ಳ ಕಾಲುವೆಗಳು ನಿರ್ಮಾಣವಾಗಿದ್ದು ಯಾವುದೇ ಪ್ರಯೋಜನವಾಗಿರುವುದಿಲ್ಲ ಈಗಾಗಲೇ ಈ ಭಾಗದ ನೂತನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಸದಸ್ಯರು ಸೇರಿಕೊಂಡು ಮುಖ್ಯ ಕೆಲಸವಾಗಿದ್ದ ಸುಮಾರು ವರ್ಷಗಳಿಂದ ನೀರು ಬಿಡಲಾರದೆ ಶಿಥಿಲಗೊಂಡಿರುವ ಕಾಲುವೆಗಳನ್ನು ಉದ್ಯೊ?ಗ ಖಾತ್ರಿಯಲ್ಲಿ   ಕೆಲಸವನ್ನು ಹಾಕಿಕೊಂಡು ಸ್ವಚ್ಛ ಮಾಡಿರುತ್ತಾರೆ ಈ ಭಾಗದ ರೈತರು ನೂರಾರು ಎಕರೆ ಬೆಳೆಯನ್ನು ಬೆಳೆದು ಮಳೆ ಇರಲಾರದೆ ಕಂಗಾಲಾಗಿರುತ್ತಾರೆ ಆದಕಾರಣ ಕೂಡಲೇ ಹಿರೇಹಳ್ಳ ಒದಗಿಸಬೇಕು ಎಂದು ಈ ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಹಾಲಿ ಸದಸ್ಯ ಅಮ್ಜದ್ ಪಟೇಲ್ ಅವರು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ದಾದೂಸಾಬ್ ಮಂಡಲಗೇರಿ ಮಂಜುನಾಥ್ ನಡೂಲಮನಿ ಬಸವರಾಜ್ ಪೀರಸಾಬ್ ಚಿಕ್ ಮಸೂತಿ ಅಂದಪ್ಪ ಬಡಿಗೇರ್ ಯಮನೂರ್ ಸಾಬ್ ಹಿರೇಮಸೂತಿ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ