‘ಜಾನಪದ ಕಾರ್ಯಕ್ರಮ ಹೆಚ್ಚಿನ ಮಟ್ಟದಲ್ಲಿ ಆಯೋಜಿಸಿ ಬೆಳಸಬೇಕಿದೆ’
ಶಿಗ್ಗಾವಿ 20: ನಮ್ಮ ದೇಶದ ಇಂದಿನ ಕಾಲದಲ್ಲಿ ಜಾನಪದ ನಶಿಸಿ ಹೊಗುವ ಸಮಯದಲ್ಲಿ ಜಾನಪದ ಕಾರ್ಯಕ್ರಮ ಹೆಚ್ಚಿನ ಮಟ್ಟದಲ್ಲಿ ಆಯೋಜಿಸಿ ಬೆಳಸಬೇಕಿದೆ ಎಂದು ವೇ.ಮೂ ಶಿವಯೋಗಿ ಚರಂತಿಮಠ ಹೇಳಿದರು.
ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ, ವೀರಭದ್ರೇಶ್ವರ ಯುವಕ ಸಂಘ ಹಿರೇಮಣಕಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಜಾನಪದ ಉತ್ಸವ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಅವರು ಮಾತನಾಡಿ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳಸಿಕೊಂಡು ಹೊಗಬೇಕು ಎಂದರು.
ಗ್ರಾಮ ಪಂಚಾಯತ ಅದ್ಯಕ್ಷರು ಸರ್ವ ಸದಸ್ಯರು ಹಾಗೂ ಎಸ್ ಡಿ ಎಂ ಸಿ ಅದ್ಯಕ್ಷರು ಸರ್ವ ಸದಸ್ಯರು ಜೋತಿ ಬೆಳಗಿಸಿದರು. ಜೋಡಿ ಬಸವೇಶ್ವರ ಜಾನಪದ ಕಲಾತಂಡ ಚಿಕ್ಕಮಣಕಟ್ಟಿ ಇವರಿಂದ ಜಾನಪದ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷೆ ನಿಂಗಮ್ಮ ಹುಲಸೋಗಿ, ಶಿವನಗೌಡ ನಿಂಗನಗೌಡ್ರ, ಮುದಿಗೌಡ್ರ ಗೊಟಗೋಡಿ, ಕಲ್ಲನಗೌಡ ಕುಲಕರ್ಣಿ, ಶಿವಪ್ಪ ಥಡಿ, ವಿರುಪಾಕ್ಷಪ್ಪ ಪಟ್ಟೇದ, ಶಿವಪ್ಪ ಬಿಷ್ಟಣ್ಣನವರ, ಶಿವಪ್ಪ ಸೊರಟೂರ, ಈರ್ಪ ಕಮ್ಮಾರ, ಕಲ್ಲಪ್ಪ ಕುಂದಗೋಳ, ಸುರೇಶ ಕಾಮನಹಳ್ಳಿ, ಮೃತ್ಯುಂಜಯ ಬಾಗಲಕೊಟಿಮಠ, ಬಾಷಾಸಾಬ ಇಂಗಳಗಿ ಸೇರಿದಂತೆ ಇತರರು ಇದ್ದರು. ಭಿಮಪ್ಲ ತೋಟದ ಕಾರ್ಯಕ್ರಮ ನಿರ್ವಹಿಸಿದರು.