ಸಾರಿಗೆ ನೌಕರರ ಕುಟುಂಬಗಳಿಂದ ತಟ್ಟೆ ಬಾರಿಸಿ ಆಕ್ರೋಶ ವ್ಯಕ್ತ
ಬಳ್ಳಾರಿ 12: ರಾಜ್ಯಾದ್ಯಂತ ಸಾರಿಗೆ ನೌಕರರು 6ನೇ ವೇತನವನ್ನು ಜಾರಿ ಮಾಡಲು ಮುμÀ್ಕರ ಮಾಡುತ್ತಾ ಇರುವುದು ತಿಳಿದಿರುವ ವಿಚಾರ, ಸೋಮವಾರ ಸಾರಿಗೆಯ ನೌಕರರ ಕುಟುಂಬಗಳು ದಾರಿಯಲ್ಲಿ ನಿಂತು ಮಕ್ಕಳು ಸೆರಿಕೊಂಡು ತಟ್ಟೆ ಬಾರಿಸುವ ಮೂಲಕÀ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇಂದಿನಿಂದ 144ಸೆಕ್ಷನ್ ಜಾರಿಗೆ ತಂದಿದೆ ಸರ್ಕಾರ. ರಸ್ತೆನಲ್ಲಿ ನಿಂತು ಮಹಿಳೆಯರು ಮಕ್ಕಳು ತಟ್ಟೆ ಬಾರಿಸುವ ದೃಶ್ಯಗಳನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ಮುಖ್ಯಮಂತ್ರಿಗಳಿಗೆ ಸಾರಿಗೆ ಸಚಿವರುಗೆ ಹಿಡಿ ಶಾಪ ಹಾಕಿದರು. ಭಾರತೀಯರ ಹೊಸವμರ್Àದ ಹಬ್ಬ ಯುಗಾದಿ ಆಗಿರುತ್ತದೆ. ಸಾರ್ವಜನಿಕರು ಬಟ್ಟೆ ಖರೀದಿ, ಸಂತೆ, ಸಂಭ್ರಮದಲ್ಲಿ ಇರುತ್ತಾರೆ. ಅದ್ರೆ ಸಾರಿಗೆ ನೌಕರರು ಇಂತಹ ಸಂದರ್ಭಗಳಲ್ಲಿ ಬೀದಿಗೆ ಬಿದ್ದು, ಹೋರಾಟ ಮಾಡುತ್ತಿರುವುದು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಪ್ರಶ್ನೆ ಮಾಡುವಂತೆ ಅಗಿದೆ.ಸಾರಿಗೆ ನೌಕರರು ಹೋರಾಟ, ದೇಶದ ರೈತರ ಹೋರಾಟದಂತೆ ತಿರುವು ಪಡೆದು ಕೊಳ್ಳುವ ಸಾಧ್ಯತೆ ಇದೆ.