ಅಮೂರ್ತ ಕಲ್ಪನೆಯ ಮೂರ್ತ ರೂಪವೇ ಚಿತ್ರ: ಆನಂದ್
ಬಳ್ಳಾರಿ 21: ಜಗತ್ತು ಮೂರು ಶಕ್ತಿಗಳ ಮೂಲದಿಂದ ವ್ಯಕ್ತವಾಗಿದೆ. ಜಗತ್ತಿನ ಎಲ್ಲಾ ಕಾರ್ಯಚಟುವಟಿಕೆಗಳು ಅಣುವಿನಿಂದ ಮೊದಲುಗೊಂಡು ಮಹತ್ತಿನವರೆಗೆ ಮೂರರ ಸ್ವರೂಪವನ್ನು ಕಾಣಬಹುದು. ಎಲೆಕ್ಟ್ರಾನ್, ಪ್ರೊಟಾನ್, ನ್ಯೂಟ್ರಾನ್ ಮೂರಾದರೆ ಸ್ಥೂಲ, ಸೂಕ್ಷ್ಮ, ಕಾರಣ ಮತ್ತು ಸೃಷ್ಟಿ, ಸ್ಥಿತಿ, ಲಯ ಮುಂತಾಗಿ ಕಾಣಬಹುದೆಂದು ಸೋನಿಯಾಗಾಂಧಿ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆನಂದ್ ರವರು ನುಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ತಿಲಕ್ ನಗರದಲ್ಲಿಯ ಭವಾನಿ ಚಿತ್ರಕಲಾ ಮಂದಿರದಲ್ಲಿ ಏರ್ಪಡಿಸಿದ್ದ 258ನೇ ಮಹಾಮನೆ ಲಿಂ. ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಮತ್ತು ಚಿಲುಗೋಡು ತೆಗ್ಗಿನಮಠದ ಲಿಂ. ಚನ್ನಬಸಯ್ಯ ದಂಪತಿಗಳ ದತ್ತಿ ಕಾರ್ಯಕ್ರಮದಲ್ಲಿ ಅಲ್ಲಮನ ಭಿತ್ತಿ ಮೂರರ ಮೇಲೆ ಚಿತ್ರ ಬರೆಯಿತ್ತು ಎಂಬ ವಚನದ ಮೇಲೆ ಉಪನ್ಯಾಸ ನೀಡುತ್ತಾ, ಜಗದ ಪರದೆಯ ಮೇಲೆ ಜಗನ್ನಾಟಕ ಸೂತ್ರದಾರನು ಚಿತ್ರ ಬರೆಯುವಂತೆ, ಅಮೂರ್ತ ಕಲ್ಪನೆಯು ಮೂರ್ತ ರೂಪಗೊಂಡಾಗ ಚಿತ್ರವಾಗುವುದು. ಈ ಮೂರ್ತೀಕರಿಸುವ ನೈಪುಣ್ಯತೆ ಹೊಂದಿದವನೇ ಚಿತ್ರಕಲಾವಿದ, ಚಿತ್ರಕಲಾವಿದನ ಮೊದಲ ಭಿತ್ತಿ ಸಂಕಲ್ಪ, ಎರಡನೇ ಭಿತ್ತಿ ಚಿಂತನೆ, ಮೂರನೇ ಭಿತ್ತಿ ಮೂರ್ತ ರೂಪದ ಚಿತ್ರ ಎಂದು ನುಡಿದರು. ಭವಾನಿ ಚಿತ್ರಕಲಾಮಂದಿರದ ಸಂಸ್ಥಾಪಕರು, ದತ್ತಿ ದಾಸೋಹಿಗಳೂ ಆದ ಆರ್.ಎಲ್.ಜಾಧವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ವಿದ್ಯಾರ್ಥಿ ಮಾಲತೇಶ ಪ್ರಾರ್ಥನೆ ಮಾಡಿದರೆ, ಈಶ್ವರಿ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ಧಾತೃಗಳನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಸುಲ್ತಾನ್ ಬೀ ವಂದನಾರೆ್ಣ ಮಾಡಿದರು. ದಾಸೋಹದೊಂದಿಎ ಕಾರ್ಯಕ್ರಮ ಮಂಗಲವಾಯಿತು.