ಮುಂಡರಗಿ

ಕೃಷಿಕ ಸಮಾಜದ ಚುನಾವಣೆ ನಡೆಯಲಿದೆ

ಕೃಷಿಕ ಸಮಾಜದ ಚುನಾವಣೆ ನಡೆಯಲಿದೆ

ಕೃಷಿಕ ಸಮಾಜದ ಚುನಾವಣೆ ನಡೆಯಲಿದೆ 

ಮುಂಡರಗಿ 30 : 2024-25ನೇ ಸಾಲಿನ ತಾಲೂಕಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ 5ವರ್ಷಗಳ ಅವಧಿಗೆ ಕಾರ್ಯಕಾರಿ ಸಮಿತಿ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಡಿ.15 ರಂದು ತಾಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯನ್ನು ಹಮ್ಮಿಕೊಳ್ಳಲಾಗಿದೆ. 

ಈ ಕುರಿತು ತಾಲೂಕು ಕೃಷಿಕ ಸಮಾಜದ ಅಜೀವ ಸದಸ್ಯರ ಪಟ್ಟಿಯನ್ನು ಮುಂಡರಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಿದೆ. ಸದರಿ ಪಟ್ಟಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ನ.12 ರೊಳಗೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ನಂ.18, ಕೃಷಿ ಭವನ ನೃಪತುಂಗ ರಸ್ತೆ, ಬೆಂಗಳೂರು-560001 ಈ ವಿಳಾಸಕ್ಕೆ ತಲುಪುವಂತೆ ಅರ್ಜಿ ಸಲ್ಲಿಸುವುದು. ನಂತರ ಡಿ.15 ರಂದು ಭಾನುವಾರ ಬೆಳಿಗ್ಗೆ 8.00 ರಿಂದ 3.00 ಗಂಟೆಯವರೆಗೆ ಚುನಾವಣಾ ಪ್ರಕ್ರೀಯೆ ಜರುಗುವುದು. ಹೆಚ್ಚಿನ ಮಾಹಿತಿಗಾಗಿ ಮುಂಡರಗಿಯ ಸಹಾಯಕ ಕೃಷಿ ನಿರ್ದೇಶಕರ ಕಛೇರೆಗೆ ಬಂದು ಸಂಪರ್ಕಿಸಿ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ