ಚುನಾವಣೆ ಕಾರ್ಯತಂತ್ರಕ್ಕೆ ಅಧಿಕೃತವಾಗಿ ಚಾಲನೆ
ಬಳ್ಳಾರಿ 01: ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಏ. 01ರಂದು ನಗರದ ಬಿಜೆಪಿ ಕಚೇರಿಯಲ್ಲಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಹಾಗೂ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಅವರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ, ಚುನಾವಣೆ ಕಾರ್ಯತಂತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜೆ. ಶಾಂತ, ಮಾಜಿ ಶಾಸಕ ನೇಮಿರಾಜ್ ನಾಯ್ಕ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಭಾರಿಯಾದ ಸಚ್ಚಿದಾನಂದ ಮೂರ್ತಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಮೋದ್, ವಿಭಾಗ ಪ್ರಭಾರಿಯಾದ ಸಿದ್ದೇಶ್ ಯಾದವ್, ಸಹ ಪ್ರಭಾರಿಯಾದ ವಿರುಪಾಕ್ಷಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮೋತ್ಕರ್, ಅನಿಲ್ ನಾಯ್ಡು, ರಾಜ್ಯ ಬಿಜೆಪಿ ಕಲಾ ಮತ್ತು ಸಾಂಸ್ಕೃತಿಕ ಪ್ರಕೋದ್ಯದ ಸಂಚಾಲಕ ಪ್ರಭು ಕಪ್ಗಲ್ ಮತ್ತು ನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಬಿ. ವೆಂಕಟೇಶ್, ಕೌಲ್ ಬಜಾರ್ ಮಂಡಲ ಅಧ್ಯಕ್ಷ ಶಂಕರಪ್ಪ, ಮಾಜಿ ಮಹಾಪೌರ ಬಸವರಾಜ್ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರುಣ, ತಿಮ್ಮಾರೆಡ್ಡಿ, ಪ್ರಮುಖ ಮುಖಂಡರುಗಳಾದ ಶಶಿಕಲಾ, ಮುರಾರಿ ಗೌಡ, ರಾಮಲಿಂಗಪ್ಪ, ಓಬಳೇಶ್, ನೂರ್ ಪಾಶಾ ಸಂಜಯ್ ಬಡಿಗೇರ್, ಭಾರತೀಯ ಜನತಾ ಪಾರ್ಟಿ ಬಳ್ಳಾರಿ ನಗರ ಮಾಧ್ಯಮ ಸಂಚಾಲಕರಾದ ರಾಜೀವ್ ಸಿಂಧಿಗಿ ಹಾಗೂ ಎಲ್ಲಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.