ಶಿಗ್ಗಾವ್

ಸತ್ಯಾಸತ್ಯತೆಯ ಬೆಳಕು ಚೆಲ್ಲುವುದೇ ವರದಿಗಾರನ ಕರ್ತವ್ಯ: ಬಸವರಾಜ ಹಿರೇಮಠ

ಸತ್ಯಾಸತ್ಯತೆಯ ಬೆಳಕು ಚೆಲ್ಲುವುದೇ ವರದಿಗಾರನ ಕರ್ತವ್ಯ: ಬಸವರಾಜ ಹಿರೇಮಠ

ಶಿಗ್ಗಾವಿ 11: ತಾಲೂಕಿನ ವಾಸ್ತವ ಸಮಸ್ಯೆಗಳ ಬಗ್ಗೆ ವರದಿ ಮಾಡಿ ಅದರ ಮುಖಾಂತರ ತಾಲೂಕ ಮಟ್ಟದ ಅಧಿಕಾರಿಗಳ ಮುಖೇನ ಸಮಸ್ಯೆ ಪರಿಹರಿಸಲು ಸತ್ಯಾಸತ್ಯತೆಯ ಬೆಳಕು ಚೆಲ್ಲುವುದೇ ವರದಿಗಾರನ ಕರ್ತವ್ಯ ಎಂದು ಹಿರಿಯ ವರದಿಗಾರ ಬಸವರಾಜ ಹಿರೇಮಠ ಹೇಳಿದರು. 

ಪಟ್ಟಣದ ತಾಲೂಕ ಪಂಚಾಯತ ಆವರಣದ ಕರ್ನಾಟಕ ಪತ್ರಕರ್ತರ ಮತ್ತು ಕಾರ್ಯನಿರತರ ಪತ್ರಕರ್ತರ ಸಂಘದ ಆಶ್ರಯದಲ್ಲಿ ನೆಡೆದ ಪತ್ರಿಕಾ ದಿನಾಚರಣೆಯ ಸಮಾರೋಪ ಸಮಾರಂಭದ ಅದ್ಯಕ್ಷತೆವಹಿಸಿ ಮಾತನಾಡಿದ ಅವರು ನಾವು ಸಮಸ್ಯೆಗಳ ಬಗ್ಗೆ ಅಧಿಕಾರಿ ವರ್ಗದ ಗಮನಕ್ಕೆ ತರುತ್ತೇವೆ ಎಚ್ಚೆತ್ತುಕೊಳ್ಳದಿದ್ದರೆ ಅಥವಾ ಸ್ಪಂದಿಸದಿದ್ದರೆ ಸತ್ಯಾಸತ್ಯತೆ ವಾಸ್ತವವಿರುವ ವರದಿಯನ್ನು ಮಾಡುತ್ತೇವೆ ಎಂದರು. 

ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ ಸನ್ಮಾನ ಸ್ವೀಕರಿಸಿ ಮಾತನಾಡಿ ನಾವು ಮಾಡುವ ಕೆಲಸವು ಪ್ರಾಮಾಣಿಕತೆಯಿಂದ ಕೂಡಿದರೆ ಯಾವ ಸಮಸ್ಯೆಯು ಉಲ್ಬಣವಾಗುವುದಿಲ್ಲ ಅದು ಸಮಸ್ಯೆಯಾಗಿ ಉಲ್ಬಣವಾದರೆ ಆ ಸಮಸ್ಯೆಯನ್ನು ಎದುರಿಸುವ ದೈರ್ಯವನ್ನು ಹೊಂದಿರುತ್ತೇವೆ ಅಲ್ಲದೇ ಅಧಿಕಾರಿಗಳು ಮತ್ತು ವರದಿಗಾರರ ಸಂಬಂಧ ನಕಾರಾತ್ಮಕವಾಗಿರದೇ ಧನಾತ್ಮಕವಾಗಿರಬೇಕು ಅಂದಾಗ ಮಾತ್ರ ಸಾರ್ವಜನಿಕರಿಗೆ ಉತ್ತಮವಾದ ಸಂದೇಶ ಮತ್ತು ಆಡಳಿತ ನೀಡಲು ಶಕ್ಯರಾಗಿರುತ್ತೇವೆ ಎಂದರು. 

ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಸುಮಂಗಲಾ ದುರ್ಗದ ಸನ್ಮಾನ ಸ್ವೀಕರಿಸಿ ಮಾತನಾಡಿ ತಾಲೂಕಿನ ಎಲ್ಲ ವರದಿಗಾರರೂ ತಮ್ಮ ಎಷ್ಟೋ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಗಮನಹರಿಸದೇ ಸಾರ್ವಜನಿಕರ ಸಾಮಾಜಿಕ ಸಮಸ್ಯೆಗಳ ವರದಿ ಮಾಡಿ ಬೆಳಕು ಚೆಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. 

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ,  ರಾಯಣ್ಣವರ, ಪರುಶರಾಮ ಹಿರೂಲಾಲ, ವಿತರಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ನೀರಲಗಿ, ಉಪಾಧ್ಯಕ್ಷ ಶಿದ್ರಾಮಗೌಡ್ರ ಮೆಳ್ಳಾಗಟ್ಟಿ, ಹನುಮಂತ ಬಂಡಿವಡ್ಡರ, ವಿಶ್ವನಾಥ ಹೊನ್ನಣ್ಣವರ, ವಿಧ್ಯಾ ಉಡುಪಿ, ಪ್ರಕಾಶ ಕುಲಕರ್ಣಿ ಸೇರಿದಂತೆ ತಾಲೂಕಿನ ಎಲ್ಲ ವರದಿಗಾರರು ಉಪಸ್ಥಿತರಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯದರ್ಶಿ ಮಂಜುನಾಥ ಕಮ್ಮಾರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ