ಮನುಕುಲದ ಎಲ್ಲಾ ಧರ್ಮವನ್ನು ಗೌರವಿಸುವುದು ವೀರಶೈವ ಲಿಂಗಾಯತ ಧರ್ಮದ ಕರ್ತವ್ಯ: ಅರುಣಾದೇವಿ
ಬಳ್ಳಾರಿ 30: ಒಂದು ಶಿಕ್ಷಣ ಸಂಸ್ಥೆ ತೆರೆದರೆ ಒಂದು ಜೈಲು ಮುಚ್ಚಿದಂತೆ. ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿರುವ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಸಾಧನೆ ಶ್ಲಾಘನೀಯ. ವೀಶೇಷವಾಗಿ ಮಹಿಳಾ ಪಡೆ ಕುಟುಂಬಕ್ಕೆ ಮತ್ತು ಮಕ್ಕಳಿಗೆ ವಿಶೇಷವಾದ ಗೌರವವನ್ನು ಕೊಡುತ್ತ ಹೋದರೆ ಸಮಾಜದಲ್ಲಿ ಉತ್ತಮ ಬದಲಾಣೆ ಕಾಣಲು ಸಾಧ್ಯ.ನಮ್ಮ ಸಮಾಜದ ಪೂಜ್ಯ ಪುನಸ್ಕಾರಗಳು,ಸಂಪ್ರದಾಯಿಕ ಆಚರಣೆಗಳು ಮುಂಬರುವ ಮಕ್ಕಳು ನೋಡಿ ಕಲಿಯುತ್ತಾರೆ ಇದರಿಂದ ಸಂಸ್ಕಾರ ಮಕ್ಕಳಲ್ಲಿ ಬೆಳೆಯುತ್ತದೆ. ನಮ್ಮ ಬದುಕನ್ನ ನಾವು ನಾವು ಕಟ್ಟಿಕೊಂಡು ಜೀವನ ಮಾಡಬೇಕು ಹೊರತು ಯಡಿಯೂರ್ಪ ನ ಮಗಳು ಶ್ರೀಮಂತಳು ಎಂದು ನಾನು ಸುಮ್ನೆ ಕೂರೊದಿಲ್ಲ..ನನ್ನ ಕೆಲಸ ನಾನು ಮಾಡುತ್ತೆನೆ.ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಸ್ವಸಾಹಯ ಗುಂಪುಗಳನ್ನ ಸ್ಥಾಪಿಸಿ ಸ್ವಾವಲಂಬಿಗಳಾಗಿ ಬಾಳಬೇಕಾಗುತ್ತದೆ. ಈಗಾಗಲೇ ಹಿರಿಯರಾದ ಎನ್.ತಿಪ್ಪಣ್ಣನವರು, ಅಲ್ಲಂ ವೀರಭದ್ರ್ಪ ನವರು, ಶಾಮನೂರು ಶಿವಶಂಕರ್ಪ ನವರು ವೀರಶೈವ ಲಿಂಗಾಯತ ಧರ್ಮದ ಫಿಲ್ಲರ್ ಗಳಾಗಿ ನಿಂತಿದ್ದಾರೆ ನಾವು ಮುಂದೆ ಈ ಸಮಾಜದ ಫಿಲ್ಲರ್ ಗಳಾಗಿ ನಿಲ್ಲಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭ ರಾಜ್ಯ ಮಹಿಳಾ ಘಟಕ ಅಧ್ಯಕ್ಷರಾದ ಎಸ್.ವೈ.ಅರುಣಾದೇವಿಯವರು ಮಾತನಾಡಿದರು.