ಕನಕಗಿರಿ

ಎಸ್ಸಿ ಸಮುದಾಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ: ಮಾಯಕೊಂಡ

ಎಸ್ಸಿ ಸಮುದಾಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ: ಮಾಯಕೊಂಡ

ಕನಕಗಿರಿ05: ಎಸ್ಸಿ ಕಾಲೋನಿಗಳಲ್ಲಿ ಸಿಸಿ ರಸ್ತ ಉಜ್ವಲ ಯೋಜನೆ ಜಮ್ಮು-ಕಾಶ್ಮೀರದಲ್ಲಿ ದಲಿತರಿಗೆ ಮೀಸಲಾತಿ ದೊರಕಿರುವುದು ಸೇರಿದಂತೆ ವಿವಿಧ ಸೌಲಭ್ಯಗಳು ದೊರಕಿವೆ ಎಂದರೆ ಬಿಜೆಪಿಯಿಂದ ಮಾತ್ರ ಸಾದ್ಯ ಎಂದು ರಾಜ್ಯ ಬಿಜೆಪಿ ಎಸ್ ಸಿ ಮೋಚರ್ಾ ಉಪಾಧ್ಯಕ್ಷ ಮಾಜಿ ಶಾಸಕ ಬಸವರಾಜ ಮಾಯಕೊಂಡ ಮಾತನಾಡಿದರು. 

ಪಟ್ಟಣದ ಎಪಿಎಂಸಿ ಶ್ರಮಿಕರ ಭವನದಲ್ಲಿ ಆಯೋಜಿಸಿದ್ದ  ಎಸಿ ಮೋಚರ್ಾ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವವೇ ಕರೊನಾ ದಿಂದ ಆಥರ್ಿಕತೆ ತತ್ತರಿಸಿತ್ತು. ಭಾರತ ದೇಶದ ಆಥರ್ಿಕತೆ ಧೃತಿಗೆಡಲಿಲ್ಲ ಇದಕ್ಕೆ ಪ್ರಮುಖ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಂದಾಲೋಚನೆ ಕಾರಣ. ರಾಮ ಮಂದಿರ, ಜಮ್ಮು-ಕಾಶ್ಮೀರ 370 ಕಲಂ ತಿದ್ದುಪಡಿ ರೈತರಿಗೆ ಪ್ರತಿವರ್ಷ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತನಿಗೂ ಹತ್ತು ಸಾವಿರ ರೂಪಾಯಿ ನೀಡುವುದರ ಮೂಲಕ ವಿವಿಧ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. 60 ವರ್ಷ ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ಯಾವುದೇ ತರಹದ ಅನುಕೂಲಗಳು ಆಗಿಲ್ಲ. ಕೇವಲ ಮತಬ್ಯಾಂಕಿಗೆ ಮಾತ್ರ ಸೀಮಿತವಾಗಿದೆವು. ಇಂದು ನರೇಂದ್ರ ಮೋದಿಯವರು ಮತ್ತು ಬೊಮ್ಮಾಯಿ ಅವರ ಸಕರ್ಾರ ವಿವಿಧ ಯೋಜನೆಗಳು ದಲಿತರಿಗೆ ಮುಟ್ಟಿಸುವ ಮೂಲಕ ದಲಿತರ ಪರವಾದ ಸಕರ್ಾರವಾಗಿದೆ.

 ನಂತರ ಜಿಲ್ಲಾ ಎಸ್ಸಿ ಮೋಚರ್ಾ ಅಧ್ಯಕ್ಷ ಸಣ್ಣ ಕನಕಪ್ಪ ಚೆಲುವಾದಿ ಮಾತನಾಡಿ ಪ್ರತಿಯೊಬ್ಬ ಕಾರ್ಯಕರ್ತರನ್ನು ಪಕ್ಷ ಗುರುತಿಸುತ್ತಿದೆ ನಮ್ಮ ಜಿಲ್ಲೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಹೇಮಲತಾ ನಾಯಕ್ ಅವರೆ ಸಾಕ್ಷಿ ಎಂದರು. ಬೂತ್ ಮಟ್ಟದಿಂದ ಸರಕಾರದ ಯೋಜನೆಗಳು ಪ್ರತಿ ಮನೆಗೆ ತಲುಪುವಂತೆ ಆಗಬೇಕು. ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಘಟನೆ ಮಾಡುವುದರ ಮೂಲಕ ಪಕ್ಷವನ್ನು ಬಲವರ್ಧನೆ ಗೊಳಿಸಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಾಂತೇಶ್ ಸಜ್ಜನ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ರಮೇಶ್ ನಾಡಿಗೇರ್ ಜಿಲ್ಲಾ ಉಪಾಧ್ಯಕ್ಷ ಅಶ್ವಿನಿ ದೇಸಾಯಿ ರಾಜ್ಯ ಎಸ್ಸಿ ಕಾರ್ಯಕಾರಣಿ ಸದಸ್ಯ ಕನಕ ಮೂತರ್ಿ ಚಲವಾದಿ ಎಸ್ ಟಿ ಮೋಛರ್ಾ ಜಿಲ್ಲಾಧ್ಯಕ್ಷ ಚಂದ್ರನಾಯಕ್ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು ಇದೇ ವೇಳೆ ಸಸಿ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು

5ಕೆಎನ್ಕೆ-1ಪೋಟೋ

ಪಟ್ಟಣದ ಎಪಿಎಂಸಿ ಶ್ರಮಿಕರ ಭವನದಲ್ಲಿ ಆಯೋಜಿಸಿದ್ದ  ಎಸಿ ಮೋಚರ್ಾ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಬಿಜೆಪಿ ಎಸ್ ಸಿ ಮೋಚರ್ಾ ಉಪಾಧ್ಯಕ್ಷ ಹಾಗು ಮಾಜಿ ಶಾಸಕ ಬಸವರಾಜ ಮಾಯಕೊಂಡ ಮಾತನಾಡುತ್ತಿರುವದು 

ಸುದ್ದಿ ಓದಿ