ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಜಾಗೃತಿ ಜಾಥಾ

ಕನಕಗಿರಿ: ಲಂಚಮುಕ್ತ ಕರ್ನಾಟಕ ನಿರ್ಮಿಸೋಣ, ಕನಗಿರಿಯನ್ನು ದೌರ್ಜನ್ಯ ಮುಕ್ತವಾಗಿಸೋಣ ಎಂದು ಕೆ.ಆರ್.ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ  ಜ್ಞಾನಸಿಂದು ಸ್ವಾಮಿ ಹೇಳಿದರು.

ಪಟ್ಟಣದ ಎದುರು ಹನುಮಪ್ಪ ದೇವಸ್ಥಾನದ ಹತ್ತಿರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು,

 ಭ್ರ್ರಷ್ಟಾಚಾರ ಮುಕ್ತ ರಾಜ್ಯಕ್ಕೆ ನಮ್ಮ ಪಕ್ಷ ಪ್ರಾದೇಶಿಕವಾಗಿ ಟೊಂಕ ಕಟ್ಟಿ ನಿಂತಿದ್ದು, ಮುಂಬರುವ 2023ರ ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ನಮ್ಮ ಕೆಆರ್ಎಸ್ ಅಭ್ಯರ್ಥಿಗಳು ಸ್ಪರ್ಧೆಸಲಿದ್ದಾರೆ. ರಾಷ್ಟ್ರಿಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಭ್ರ್ರಷ್ಟಾಚಾರದಲ್ಲಿ ಮುಳುಗಿವೆ. ಇಂಥವರಿಗೆ ಬುದ್ದಿಕಲಿಸುವ ಸಮಯ ಬಂದಿದೆ. ಆದ ಕಾರಣ ಕೆ.ಆರ್.ಎಸ್ ಬೆಂಬಲಿಸುವ ಮೂಲಕ ಲಂಚಮುಕ್ತ ಕರ್ನಾಟಕ ನಿರ್ಮಿಸೋಣ, ಕನಗಿರಿಯನ್ನು ದೌರ್ಜನ್ಯ ಮುಕ್ತವಾಗಿಸೋಣ ಎಂದರು. 

ಇದೇ ವೇಳೆ ಅಂಬೇಡ್ಕರ್ ಸರ್ಕಲ್ಗೆ ತೆರಳಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂವಿಧಾನ ದಿನಾಚರಣೆಯನ್ನು ಆಚರಿಸಿದರು. ನಂತರ ಬೈಕ್ ರ್ಯಾಲಿ ಮೂಲಕ ವಾಲ್ಮೀಕಿ ವೃತ್ತಕ್ಕೆ ತಲುಪಿತು. 

ಶಂಕರ್ ಸಿ. ಅಂಗಡಿ ಜಿಲ್ಯಾದ್ಯಕ್ಷ, ಪಕ್ಷದ ಮುಖಂಡ ಶಿವಶಂಕರ್, ಲಿಂಗರಾಜ, ಸಂಗನಗೌಡ, ನಾಗಲಿಂಗ ಚಲುವಾದಿ, ರಾಜೇಶ ಚಿನ್ನೂರು, ವೀರೇಶ ಕಡ್ಡಿಪುಡಿ, ರಾಜಾಸಾಬ್ ಬೀಡಿ, ಮಹ್ಮದ್ಸಾಬ್, ಪಿ.ಎಚ್. ಕೊಡಚಳ್ಳಿ ರೇಣುಕಪ್ಪ ಕೋರಿ ಸೇರಿದಂತೆ ವಿವಿದ ಗ್ರಾಮಗಳಿಂದ ಆಗಮಿಸಿದ ಪಕ್ಷ ಪದಾಧಿಕಾರಿಗಳು ಮುಖಂಡರು ಇನ್ನಿತರರು ಇದ್ದರು