ಮಾಧ್ಯಮಗಳ ಸಂಖ್ಯೆ ಎಷ್ಟಾದರೂ ಆಗಲಿ ಸುದ್ದಿಯ ಗುಣಮಟ್ಟ, ಸತ್ಯ ಬಿತ್ತರಿಸಲಿ: ಶಿವರಾಜ ತಂಗಡಗಿ

ಕನಕಗಿರಿ:  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಸ್ತಾರ ನ್ಯೂಸ್ ಚಾನೆಲ್ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಇಲ್ಲಿನ ಎಪಿಎಂಸಿ ಶ್ರಮಿಕರ ಭವನದಲ್ಲಿ ತಾಲ್ಲೂಕು ಮಟ್ಟದ ಕವಿಗೋಷ್ಠಿ ಹಾಗೂ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಶನಿವಾರ ನಡೆಯಿತು.

ಮಾಜಿ ಸಚಿವ ಶಿವರಾಜ ತಂಗಡಗಿ ಅವರು ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಚಾನೆಲ್ ಗಳ   ಸಂಖ್ಯೆ ಎಷ್ಟಾದರೂ ಆಗಲಿ  ಸುದ್ದಿಯ ಗುಣಮಟ್ಟ ಹಾಗೂ ಸತ್ಯಾಂಶವನ್ನು ಹೊರ ತರುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕೆಂದು ತಿಳಿಸಿದರು.

ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವರದಿಗಾರರು ತಲ್ಲೀನರಾಗಬೇಕೆಂದು ಹೇಳಿದರು.

ಪತ್ರಿಕೆಗಳು ಹಾಗೂ ಸಾಹಿತ್ಯದಿಂದ ಸಮಾಜದ ಬದಲಾವಣೆ ಸಾಧ್ಯವಿದೆ, ಈ ನಿಟ್ಟಿನಲ್ಲಿ ಕವಿಗಳು ಸಮಾಜದ ಅಭಿವೃದ್ದಿಗೆ ಪೂರಕವಾದ ಸಾಹಿತ್ಯವನ್ನು ರಚಿಸುವ ಕಡೆಗೆ ಒತ್ತು ನೀಡಬೇಕೆಂದು ತಿಳಿಸಿದರು. 

ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಅರವಟಗಿಮಠ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್,  ಪತ್ರಕರ್ತ ಮೌನೇಶ ಬಡಿಗೇರ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿದರು. 

ಕವಿಗಳಾದ ಕನಕಪ್ಪ ದಂಡೀನ್,  ಪಂಪಾಪತಿ ಬನ್ನಿಮರದ, ಮಂಜುಳಾ ಶಾವಿ, ಎನ್. ಬಿ. ಲಕ್ಷ್ಮೀ, ಸಂಜೀವಕುಮಾರ,  ಮಮತಾಜ್ ಬೇಗ್ಂ,  ವಡಕೆಪ್ಪಗೌಡ, ಸಿದ್ಧಲಿಂಗ ಗದ್ದಿ, ಬಾಷಸಾಬ ಲಾಯದುಣಿಸಿ, ಯಮನೂರ ಕಲ್ಯಾಣಿ, ಶೇಖರ ನಾಯ್ಕ್,  ದೇವಪ್ಪ ಸೇರಿದಂತೆ ಇತರರು ಕವನ ವಾಚಿಸಿದರು.   ಕಸಾಪ ಗೌರವ ಕಾರ್ಯದಶರ್ಿ ಕನಕರೆಡ್ಡಿ ಕೆರಿ , ಬಿಜೆಪಿ ಎಸ್ ಸಿ ಮೋಚರ್ಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಉಪನ್ಯಾಸಕ ರಾಘವೇಂದ್ರ ಮಾಗಿ, ಮುಖ್ಯಶಿಕ್ಷಕ ಪರಸಪ್ಪ ಹೊರಪೇಟೆ ಸೇರಿದಂತೆ ಇತರರು ಇದ್ದರು.