ಕನಕಗಿರಿಯಲ್ಲಿ ಸಂವಿಧಾನ ದಿನಾಚರಣೆ

ಕನಕಗಿರಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ದಿನಾಚರಣೆಯನ್ನು ಸಲ್ಲಿಸಲಾಯಿತು

ಕನಕಗಿರಿ: ಪಟ್ಟಣದ ಭಾರತ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಸಂವಿಧಾನ ದಿನವನ್ನು ಆಚರಸಲಾಯಿತು.

ಈ ವೇಳೆ ಮುಖಂಡ ವಾಗೇಶ ಹಿರೇಮಠ ಮಾತನಾಡಿ ಬಡವರ, ದೀನ-ದಲಿತರ ಉದ್ಧಾರಕ್ಕಾಗಿ ಡಾ. ಬಿಆರ್ ಅಂಬೇಡ್ಕರ್ ರವರು ಸಂವಿಧಾನ ರಚಿಸಿದ ಮಹಾನ್ ಗ್ರಂಥವಾಗಿದ್ದು ಸಂವಿಧಾನ ದಿನಾಚರಣೆಯು ನಮಗೆ ಹೆಮ್ಮೆಯ ದಿನವಾಗಿದೆ ಎಂದರು. 

ಅಮರಗುಂಡಪ್ಪ ತೆಗ್ಗಿನಮನಿ,  ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ, , ಪಾಮಣ್ಣ ಅರಳಿಗನೂರು, ಸುಭಾಷ್ ಕೆ. ನಿಂಗಪ್ಪ ಪೂಜಾರಿ. ಕಂಠಿರಂಗ ನಾಯಕ, ವೇಂಕಟೇಶ ನಿರಲೂಟಿ, ಹನುಮೇಶ ಯಲಬುರ್ಗಾ ,ಸಿಪಿಐ ವಿ.ನಾರಾಯಣ ಸೇರಿದಂತೆ ಇನ್ನಿತರರು ಇದ್ದರು.