ಪಿಎಸ್‌ಐ ಹಗರಣ ತನಿಖೆಗೆ ಒತ್ತಾಯಿಸಿ ಬೃಹತ್ ಪಾದಯಾತ್ರೆ: ತಂಗಡಗಿ

ಕನಕಗಿರಿ: ರಾಜ್ಯದಲ್ಲಿ ನಡೆದಿರುವ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸ್ಥಳೀಯ ಶಾಸಕ ಬಸವರಾಜ್ ದಡೆಸುಗೂರು ಹಣ ಪಡೆದು ಅದು ನನ್ನ ಧ್ವನಿ ಆ ಹಣವನ್ನು ಸರಕಾರಕ್ಕೆ ನೀಡಿದ್ದೇನೆ ಎಂದು ಹೇಳಿದ್ದಾರೆ ಆದರೆ ಸರ್ಕಾರ ಇಲ್ಲಿವರೆಗೂ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಿಲ್ಲ ಆದ್ದರಿಂದ ನವಂಬರ್ 17ರಂದು ಸಿದ್ದಾಪುರದಿಂದ ಕಾರಟಗಿವರೆಗೂ ಪ್ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಅಧ್ಯಕ್ಷ ಶಿವರಾಜ್ ತಂಗಡಿಗಿ ಶನಿವಾರ ಹೇಳಿದರು. 

 ಅವರು ಪಟ್ಟಣದ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದವರು ಪಿಎಸ್‌ಐ ಹಗರಣದಲ್ಲಿ ಅಧಿಕಾರಿಗಳನ್ನು ಮಾತ್ರ ತನಿಖೆಗೆ ಒಳಪಡಿಸಿದ್ದಾರೆ ಆದರೆ ಶಾಸಕರು ನೇರವಾಗಿ ಹಾಗೂ ಬಹಿರಂಗವಾಗಿ ನಾನು ಹಣ ಪಡೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಸುಮಾರು ಹತ್ತರಿಂದ ಹದಿನೈದು ಸಾವಿರ ಅಷ್ಟು ಜನರು ಭಾಗವಹಿಸಿ ಈ ಬೃಹತ್ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಚುನಾವಣೆ ಕೆಲವೇ ದಿನಗಳು ಬಾಕಿ ಇದ್ದು ಬೂತ್ ಮಟ್ಟದಿಂದ ಕಾರ್ಯಕರ್ತರು ಸಂಘಟನೆಗೆ ಒತ್ತು ಕೊಡಬೇಕು ಬಿಜೆಪಿ ಪಕ್ಷದಲ್ಲಿ ಈಗಿರುವ ಶಾಸಕರಿಗೆ ಟಿಕೆಟ್ ಇಲ್ಲ ಅಂಥ ಕೆಲವು ಬಿಜೆಪಿ ಮುಖಂಡರು ನೇರವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಅಲ್ಲದೆ ಸುಮಾರು 12 ಜನ ಆಕಾಂಕ್ಷಿ ಗಳು ಕ್ಷೇತ್ರಾದ್ಯಂತ ಬ್ಯಾನರ್ ಹಾಕಿಕೊಂಡು ಈ ಬಾರಿ ನನಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಹೇಳುತ್ತಿದ್ದಾರೆ ನಮ್ಮ ವಿರುದ್ಧ ಯಾರೇ ಸ್ಪರ್ಧಿಸಿದ್ದರು ಎದೆಗೊಂದುವ ಅವಶ್ಯಕತೆ ನನಗಿಲ್ಲ ಈ ಹಿಂದೆ ಮಾಡಿದ 10 ವರ್ಷದ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ.:ಬೂತ ಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವ ಸಲುವಾಗಿ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಸನ್ನದ್ಧರಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಹೆಚ್ಚು ಒತ್ತು ನೀಡಬೇಕು. ವಿವಿಧ ಘಟಕಗಳಿಗೆ ನೇಮಕ ಮಾಡಿದ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಹಿಸಬೇಕು. ಪಕ್ಷ ಹೇಳುವ ಕೆಲಸವನ್ನು ಪ್ರಮಾಣಿಕವಾಗಿ ಮಾಡಬೇಕು.ಜಿ.ಪಂ.ಮತ್ತು ತಾ.ಪಂ. ಮಾಜಿ. ಸದಸ್ಯರು ಹಾಗು ಪಕ್ಷದ ಮುಖಂಡರು ಯುವಕರಿಗೆ ಮಾರ್ಗದರ್ಶನವನ್ನು ನೀಡಿ ಪಕ್ಷವನ್ನು ಸಂಘಟಿಸುವಲ್ಲಿ ಎಲ್ಲರೂ ಶ್ರಮಿಸಬೇಕು ಮುಂದಿನ ದಿನಮಾನಗಳಲ್ಲಿ ಜನರೇ ಶಾಸಕರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ. ನನ್ನ ಅವಧಿಯಲ್ಲಿ ನಾನು ಮಾಡಿದ ಅಭಿವೃಧ್ಧಿ ಕಾರ್ಯಗಳೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಗ್ರಾಮೀಣ ಭಾಗದ ಜನರು ನೂರಕ್ಕೆ 75ರಷ್ಟು ಕಾಂಗ್ರೆಸ್ ಪರ ಇದ್ದಾರೆ ಮತ್ತು 2023 ಚುನಾವಣೆ ಕೇವಲ 142 ದಿನಗಳು ಮಾತ್ರ ಬಾಕಿ ಉಳಿದಿದೆ ನಾನು ಇದೇ ನ. 14 ರಂದು ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವಿಧಾನಸಭಾ ಟಿಕೆಟ್ಗೆ ಅರ್ಜಿ ಸಲ್ಲಿಸಲಿದ್ದೇನೆ ಎಂದರು. 

ಬಳಿಕ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗಂಗಾಧರ್ ಸ್ವಾಮಿ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ನಾಯಕ್ ಮಾತನಾಡಿ ಹತ್ತು ವರ್ಷಗಳ ಕಾಲ ಶಿವರಾಜ ತಂಗಡಗಿ ಅವರ ಆಡಳಿತ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರು ಪಕ್ಷದ ಪದಾಧಿಕಾರಿಗಳು ಮನೆ ಮನೆಗೆ ತೆರಳಿ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಬೇಕು ಮತ್ತು ಕಾಂಗ್ರೆಸ್ ಪಕ್ಷದ ಗೆಲುವಿಗೆ ಎಲ್ಲರೂ ಕೂಡ ಶ್ರಮವಹಿಸಬೇಕು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಿವರಾಜ ತಂಗಡಗಿಯನ್ನು ಗೆಲ್ಲಿಸುವುದಾಗಿ ಪಣತೊಡಬೇಕು ಎಂದರು 

ಈ ಸಂದರ್ಭದಲ್ಲಿ ಪ್ರಮುಖರಾದ ವೀರೇಶ ಸಮಗಂಡಿ, ಶರಣಪ್ಪ ಭತ್ತದ್,ಅಮರೇಶ ಗೋನಾಳ, ಬಸವಂತಗೌಡ ಪಾಟೀಲ,ರವಿ ಶಂಕರ ಪಾಟೀಲ್,ಮಲ್ಲಿಕಾರ್ಜನಗೌಡ,ರಮೇಶ ಶೆಟ್ಟಿ, ಅನಂತಪ್ಪ ದಾಯಪುಲ್ಲೆ,ಹೊನ್ನುರಸಾಬ ಉಪ್ಪು, ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರು ವಿವಿದ ಗ್ರಾಮಗಳಿಂದ ಆಗಮಿಸಿದ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಮತ್ತಿತರರು ಇದ್ದರು.