ಬಳ್ಳಾರಿ

ಸಮಗ್ರ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಗುರುಸಿದ್ಧಸ್ವಾಮಿ

ಸಮಗ್ರ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಗುರುಸಿದ್ಧಸ್ವಾಮಿ

ಬಳ್ಳಾರಿ 23: ಕಪ್ಪಗಲ್ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಾಗೂ ಗಾನ ಗಂಧರ್ವ ಸಂಗೀತ ಶಾಲೆಯ ನೂತನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಇವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಭಾಗವಹಿಸಿದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್‌.ಎಂ.ಗುರುಸಿದ್ಧಸ್ವಾಮಿ ಮೇಲ್ಕಂಡಂತೆ ಮಾತನಾಡಿದರು. ಅಧಿಕಾರ ಸ್ವೀಕರಿಸಿ ಶಾಲೆಯ ಸರ್ವಾಭಿವೃದ್ಧಿಗಾಗಿ ಆಡಳಿತಾವಧಿಯಲ್ಲಿ ಶ್ರಮಿಸುವೆ ಹಾಗೂ ಈ ನಿಟ್ಟಿನಲ್ಲಿ ಶಾಲೆಯ ಸಿಬ್ಬಂದಿ ವರ್ಗ ನನಗೆ ಸಹಕಾರ ನೀಡಬೇಕೆಂದು ಕೋರಿದರು. 

ಈ ಸರಳ ಸಮಾರಂಭದಲ್ಲಿ ವೀ.ವಿ. ಸಂಘದ ಕಾರ್ಯದರ್ಶಿ ಬಿ.ವಿ.ಬಸವರಾಜ್, ಸಹಕಾರ್ಯದರ್ಶಿ ದರೂರು ಶಾಂತನಗೌಡ ಮತ್ತು ಕಾರ್ಯಕಾರಿಸಮಿತಿಯ ಸದಸ್ಯರು ಕಾರ್ತ್ಯಾಯಿನಿ ಮರಿದೇವಯ್ಯ, ಕುಪ್ಪಗಲ್ಲು ಗಿರಿಜಾ, ಹೆಚ್‌.ಎಂ.ಕಿರಣಕುಮಾರ್ ಯಾಳ್ಪಿ ಪಂಪನಗೌಡ ಹಾಜರಿದ್ದರು. ಶಾಲೆಯ ಸಿಬ್ಬಂದಿವರ್ಗ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಶಾಲೆಗೆ ಬರಮಾಡಿಕೊಂಡರು. ಶಾಲೆಯ ಮುಖ್ಯೋಪಾಧ್ಯಾಯ ಎ.ಕುಮುದಿನಿ, ಪಿ.ಕಟ್ಟೆಮ್ಮ ಹಾಗೂ ಎಸ್‌.ತಿಪ್ಪೇರುದ್ರ ಮತ್ತು ವೀ.ವಿಸಂಘದ ಅಜೀವ ಸದಸ್ಯರಾದ ಹಲಕುಂದಿ ಸತೀಶ್, ವಿಭೂತಿ ರ್ರಿಸ್ವಾಮಿ, ಕರೂರು ವಿರುಪಾಕ್ಷಗೌಡರು, ನಂದೀಶ್ ಮಠಂ, ಕರೂರು ಮಂಜುನಾಥ ಗೌಡ, ಜೆ.ಬಿ ಗೌಡ, ಜೆ.ಮಂಜುನಾಥ ಕಮ್ಮರಚೇಡು, ಪಂಪಾಪತಿ ಟಿ.ಎಂ. ಮತ್ತು ಕುಟುಂಬದ ಅನೇಕರು ಭಾಗವಹಿಸಿದ್ದರು. 


ಸುದ್ದಿ ಓದಿ