ಸರಳ ಸಡಗರ ಸಂಭ್ರಮಗಳಿಂದ ರಾಜ್ಯೋತ್ಸವ ಆಚರಿಸಲು ನಿರ್ಧಾರ
ಲೋಕದರ್ಶನ ವರದಿ
ಕಂಪ್ಲಿ 11: ಕರ್ನಾಟಕ ರಾಜ್ಯೋತ್ಸವವನ್ನು ನ. 1ರಂದು ಸರಳ ಸಡಗರ ಸಂಭ್ರಮಗಳಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ ಎಂದು ಕರವೇ(ಪ್ರವೀಣಕುಮಾರ್ಶೆಟ್ಟಿ ಬಣ)ತಾಲೂಕು ಅಧ್ಯಕ್ಷ ಬಿ.ರಮೇಶ್ ಹೇಳಿದರು.
ಇಲ್ಲಿನ ಅತಿಥಿಗೃಹ ಆವರಣದಲ್ಲಿ ಭಾನುವಾರ ಕರವೇ ಸದಸ್ಯರ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಅಂಬೇಡ್ಕರ್ ವೃತ್ತದಿಂದ ಉದ್ಭವಮಹಾಗಣಪತಿ ದೇವಸ್ಥಾನತನಕ ಭುವನೇಶ್ವರಿ ಮೆರವಣಿಗೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಕರವೇ ನಾನಾ ಘಟಕಗಳ ಪದಾಧಿಕಾರಿಗಳ ಆಯ್ಕೆ ಜರುಗಿತು. ಕರವೇ ತಾಲೂಕು ಘಟಕಕ್ಕೆ ಕೆ.ಮನೋಹರ(ಗೌರವಾಧ್ಯಕ್ಷ), ಬಿ.ರಮೇಶ್(ಅಧ್ಯಕ್ಷ), ವೆಂಕಟೇಶ್ ಚಿತ್ರಗಾರ್(ಪ್ರ.ಕಾರ್ಯದರ್ಶಿ), ಬೋವೇರ ನಾರಾಯಣಪ್ಪ,(ಕಾರ್ಯದರ್ಶಿ), ಕೋರಿ ಚನ್ನಬಸವ, ಸಿ.ಡಿ.ಅರವಿಂದಕುಮಾರ್, ಮೌಲಾಸಾಬ್(ಉಪಾಧ್ಯಕ್ಷರು), ದಮ್ಮೂರು ವೀರೇಶ್, ಎಸ್.ರಾಜೇಶ್(ಸಂ.ಕಾರ್ಯದರ್ಶಿ), ರಘುನಾಯ್ಕ, ಜಿ.ಶಶಿಧರಗೌಡ್ರು(ಖಜಾಂಚಿ), ಎಚ್.ಹೊನ್ನೂರ್ಪ(ಪತ್ರಿಕಾ ಕಾರ್ಯದರ್ಶಿ), ನಗರ ಘಟಕಕ್ಕೆ ಬಿ.ಹರ್ಷವರ್ಧನರೆಡ್ಡಿ(ಗೌರವಾಧ್ಯಕ್ಷ), ಎಂ.ಇಸ್ಮಾಯಿಲ್(ಅಧ್ಯಕ್ಷ), ಬಿ.ಪರಶುರಾಮ್(ಪ್ರ.ಕಾರ್ಯದರ್ಶಿ), ಕಟ್ಟೆ ಮಲ್ಲಿಕಾರ್ಜುನ(ಕಾರ್ಯದರ್ಶಿ), ಬಿ.ನಾಗೇಂದ್ರ, ಎಂ.ಉಸ್ಮಾನ್, ಉಡೇಗೋಳ್ ಶರಣಪ್ಪ(ಉಪಾಧ್ಯಕ್ಷರು), ಕೆ.ರಂಗಪ್ಪ, ಬಿ.ಆನಂದ್ ಸಂ. ಕಾರ್ಯದರ್ಶಿ), ಮೆಹಬೂಬ್, ಉತ್ತಂಗಿ ಸಂತೋಷ್(ಖಜಾಂಚಿ), ಕೆ.ಕೃಷ್ಣಪ್ಪ ಫ್ಯಾಕ್ಟ್ರಿ(ಪತ್ರಿಕಾ ಕಾರ್ಯದರ್ಶಿ), ದೇವಸಮುದ್ರ ಜೆ.ಶರಣಗೌಡ, ರಾಮಸಾಗರ ಗುರು, ನಂ.10ಮುದ್ದಾಪುರ ಜಿ.ವಿ.ಜಗನ್ನಾಥ, ಮೆಟ್ರಿ ಸಿ.ಡಿ.ಸುರೇಶ್, ದೇವಲಾಪುರ ಮಾದೇಗೌಡ(ಅಧ್ಯಕ್ಷರು), ವಿವಿಧ ವಾರ್ಡ್ಗಳಿಗೆ ವಿಜಯಕುಮಾರ್, ರಾಜಶೇಖರ್, ಬಿ.ರಾಕೇಶ್, ಜೆ.ಆಶೋಕ್, ಜಾಕೀರ್, ವಿರುಪಣ್ಣ, ಶಿವಯ್ಯ, ಜಾವೇದ್, ಬಂಡಾರಿ ಜಗದೀಶ್, ಹರೀಶ್, ಓಬಳೇಶ್, ರವಿಶೇಖರ್(ಅಧ್ಯಕ್ಷರು)ಅವಿರೋಧ ಆಯ್ಕೆಗೊಂಡರು.