ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧಾರ
ಲೋಕದರ್ಶನ ವರದಿ
ಕಂಪ್ಲಿ 06: ಸ್ಥಳೀಯ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆ ಜರುಗಿತು.
ಈ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ ಆ.15ರಂದು ಷಾ.ಮಿಯಾಚಂದ್ ಸರ್ಕಾರಿ ಪಿಯೂ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುವುದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧರಿಸಿಲಾಗಿದೆ ತಹಸೀಲ್ದಾರ್ರಿಂದ ಧ್ವಜಾರೋಹಣ ನೆರವೇರಲಿದ್ದು, ಪಟ್ಟಣದ ಪೊಲೀಸ್ ಮತ್ತು ಗೃಹರಕ್ಷಕ ದಳದವರಿಂದ ಧ್ವಜವಂದನೆಯನ್ನು ತಹಸೀಲ್ದಾರ್ ಸ್ವೀಕರಿಸಲಿದ್ದಾರೆ. ಕರೊನಾ ವಾರಿಯರ್ಸ್ಗಳಿಗೆ, ಕರೊನಾ ಸೋಂಕನ್ನು ಗೆದ್ದ ಹಿರಿಯ ನಾಗರೀಕರಿಗೆ ಮತ್ತು ಸಾಹಿತಿಗಳನ್ನು ಗೌರವಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ಸಿಪಿಐ ಸುರೇಶ್ ಎಚ್.ತಳವಾರ್, ಪಿಎಸ್ಐ ವಿರುಪಾಕ್ಷಪ್ಪ, ಬಿಇಒ ಪಿ.ಸುನಂದಾ, ಸಿಡಿಪಿಒ ಸಿಂಧೂ ಎಲಿಗಾರ್, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಡಾ.ಎ.ಸಿ.ದಾನಪ್ಪ, ಭಟ್ಟ ಪ್ರಸಾದ್, ಕರೇಕಲ್ ಮನೋಹರ, ಬಿ.ರಮೇಶ್, ಆಹಾರ ಶಿರಸ್ತೆದಾರ ಎಚ್.ನಾಗರಾಜ, ಅಧಿಕಾರಿಗಳಾದ ಚಂದ್ರಕಾಂತ್, ಎಚ್.ದೇವರಾಜ್, ಶ್ರೀಧರ್, ಟಿ.ರವಿಕಿರಣ್, ದೇವರಾಜ್, ಕೆ.ಹೊನ್ನೂರವಲಿಸಾಬ್, ಬಿ.ಚಂದ್ರಶೇಖರ್, ಜಿ.ಪ್ರಕಾಶ್, ಕೆ.ಎಂ.ಸರಳ, ಕೆ.ಬಸಪ್ಪ, ಪ್ರಾಣೇಶ್ ಜೋರಾವರ್, ಬಿ.ಚಂದ್ರಶೇಖರ್ ಸೇರಿ ನಾನಾ ಇಲಾಖೆಗಳ ಅಧಿಕಾರಿಗಳಿದ್ದರು.