ಬಳ್ಳಾರಿ

ಸಿಡಿಲು ಬಡಿದು ವ್ಯಕ್ತಿ ಸಾವು

ಸಿಡಿಲು ಬಡಿದು ವ್ಯಕ್ತಿ ಸಾವು

ಲೋಕದರ್ಶನ ವರದಿ 


ಕುಕನೂರು: ತಾಲ್ಲೂಕಿನ ಕುದುರಿಮೋತಿ ಗ್ರಾಮದ ಲಾಡಿನ್ ಸಾಬ್ ಮಾಬುಸಾಬ್ ಮಕಾಂದಾರ್ (28) ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಶನಿವಾರ ಸಂಜೆ ಸಾವನ್ನಪ್ಪಿದ್ದಾನೆ.  

ತಕ್ಷಣ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ಸಾವನ್ನಪ್ಪಿದ ಲಾಡಿನ್ ಸಾಬ್ ಸಂಬಂಧಿಕರಿಗೆ ಸಮಾಧಾನ ಪಡಿಸಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ  ? 5 ಲಕ್ಷ ಚೆಕ್ ವಿತರಣೆ ಮಾಡಿದರು.   

ಲಾಡಿನ್  ಸಾಬ್ ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.  

ತಹಸೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್, ಹೇಮಂತರಾಜ್,  ಪಿಎಸ್ ಐ ವೆಂಕಟೇಶ್ ಇದ್ದರು.   

ಕುಕನೂರು ತಾಲ್ಲೂಕಿನ ಕುದರಿಮೋತಿ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದ ಸಿಡಿಲು ಬಡಿದ ವ್ಯಕ್ತಿಯ ಸಂಬಂಧಿಕರಿಗೆ ಸಚಿವ ಹಾಲಪ್ಪ ಆಚಾರ್ ಅವರು ? 5 ಲಕ್ಷ  ಚೆಕ್ ವಿತರಣೆ ಮಾಡಿದರು. 


ಸುದ್ದಿ ಓದಿ