ದೇಶದ ಸಂಸ್ಕೃತಿ, ಕಲೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು: ಮಲ್ಲಿಕಾರ್ಜುನ ಮದರಿ
ಮುದ್ದೇಬಿಹಾಳ, 11: ಹಬ್ಬ ಹರಿದಿನಗಳು ನಮ್ಮ ದೇಶದ ಸಂಸ್ಕೃತಿಯ ಅಸ್ಮಿತೆ ನಾವು ಆಚರಿಸುವ ಹಬ್ಬಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಮನುಷ್ಯನ ಜೀವನ ಮಾನವೀಯ ಮೌಲ್ಯಗಳನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ವೈವಿಧ್ಯತೆ ಸಮಗ್ರತೆ ಮತ್ತು ಏಕತೆ ಸಹೋದರತೆಯ ಬಾಂಧವ್ಯ ಬೆಸೆಯುವ ಸಂಕೇತವಾಗಿವೆ ಕಾರಣ ನಾವು ಸಂಭ್ರಮ ಸಡಗರದಿಂದ ಹಬ್ಬಗಳನ್ನು ಆಚರಿಸುವ ಮೂಲಕ ದೇಶದ ಸಂಸ್ಕೃತಿ, ಕಲೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಅಹಿಲ್ಯದೇವಿ ಹೊಳ್ಕರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ತಾಲೂಕಾ ಕುರುಬ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯ ಗಜಾನನ ಯುವಕ ಸಂಘದವರು ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾನುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದ ಹುಡ್ಕೋ ಬಡಾವಣೆಯೂ ಅತ್ಯಂತ ಪ್ರತಿಷ್ಠಿತ ಬಡಾವಣೆಯಾಗಿದೆ ಯಾವೂದೇ ಜಾತಿ ಮತ ಪಂಥ ಎನ್ನದೇ ಜಾತ್ಯಾತೀತವಾಗಿ, ಪಕ್ಷಾತೀತಯವಾಗಿ ಈ ಬಡಾವಣೆಯ ಯುವಕರು ಒಗ್ಗಟ್ಟಾಗಿ ಇಲ್ಲಿ ಗಣೇಶನ ಪ್ರತಿಷ್ಠಾಸುವ ಮೂಲಕ ಈ ಬಡಾವಣೆ ಮಾತ್ರವಲ್ಲದೆ ಇತರೆ ಬಡಾವಣೆಗಳಿಗೆ ಮಾದರಿಯಾಗುವಂತಹ ಐದು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಸಮಾರಂಭಗಳನ್ನು ಮಹಿಳೆಯರಿಗಾಗಿ ವಿವಿಧ ಸ್ಪರ್ಧೇಗಳನ್ನು ನಡೆಸುವ ಮೂಲಕ ಅದ್ದೂರಿ ಗಣೇಶೋತ್ಸವವನ್ನು ಆಚರಿಸುತ್ತಿರುವುದರಿಂದ ಈ ಭಾಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಳೆ ತುಂಬಿದ್ದಾರೆ ಎಂದರೆ ತಪ್ಪಾಗಲಾರದು.
ಇಂದು ನಾವು ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದಾಗಿ ಧಾರ್ಮಿಕ ಪದ್ದತಿ, ಸಂಸ್ಕಾರ ಮರೆಯುತ್ತಿದ್ದೇವೆ ಇದರಿಂದ ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾತ್ರವಲ್ಲದೇ ವಯಸ್ಸಾದ ತಂದೆತಾಯಿಗಳ ರಕ್ಷಣೆಗೆ ನಿಲ್ಲುವವರು ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣ ವಾಗುವ ಕಾಲಘಟದಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣದ ಜೊತೆಗೆ ದೇಶದ ಸಂಸ್ಕೃತಿ, ನಡೆ ನುಡಿ, ನೈತಿಕ ಮೌಲ್ವಿಕ ಮತ್ತು ವೈಚಾರಿಕತೆಯ ಸಂಗತಿಗಳ ಬಗ್ಗೆ ಅರಿವೂ ಮೂಡಿಸುವುದು ಅತ್ಯಗತ್ಯವಾಗಿದೆ. ಸಧ್ಯ ಗಜನಾನ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಯುವಕ ಮಿತ್ರರು ಇನ್ನಷ್ಟು ಗಣೇಶೋತ್ಸವ ಹಬ್ಬ ಮಾತ್ರವಲ್ಲ ಇತರೇ ಎಲ್ಲ ಹಬ್ಬಗಳನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವಂತಾಗಿ ಅವರಿಗೆ ತನು ಮನ ಧನದಿಂದ ಎಲ್ಲ ರೀತಿಯ ಸಹಾಯ ಸಹಕಾರ ನೀಡುವ ಮೂಲಕ ಸದಾ ಪ್ರೋತ್ಸಾಹ ಬೆಂಬಲವಾಗಿರುತ್ತೇವೆ. ಎಂದರು.
ಈ ಸಂದರ್ಭದಲ್ಲಿ ಪ್ರತಿಷ್ಠಿತ ಉದ್ಯೋಗ ರತ್ನ ಪ್ರಶಸ್ತಿ ಪುರಸ್ಕೃತ ಗಣ್ಯ ಉದ್ಯಮಿ ಶರಣು ಸಜ್ಜನ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ನೇತಾಜಿ ನಲವಡೆ, ಸುನೀಲ ನಾಗಮೋತಿ, ಚೇತನ ಅಂಗಡಿ, ಪವನ ಸುಕಾಲಿ, ಪುನಿತ ಹಿಪ್ಪರಗಿ, ಸಂತೋಷ ಮ್ಯಾಗೆರಿ, ಪ್ರಕಾಶ ಪಾಟೀಲ, ಸಚೀನ ನಿಂಗೋಳ್ಳಿ, ನವೀನ ಅಂಗಡಿ, ಮುತ್ತು ರಾಯಗೊಂಡ, ಮುತ್ತು ಲಕ್ಷಟ್ಟಿ, ಸಿದ್ರಾಮ ಕೂಡಗಿ ಸೇರಿದಂತೆ ಹಲವರು ಇದ್ದರು.