ಮೋಡ ಕವಿದ ವಾತಾವರಣ ಜನಜೀವನ ಅಸ್ತವ್ಯಸ್ತ
ಲೋಕದರ್ಶನ ವರದಿ
ಸಿರುಗುಪ್ಪ 16: ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ ಟ್ರಫ್ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಾದ್ಯಂತ ಮೋಡಕವಿದ ವಾತಾವರಣ ಜಿಟಿಜಿಟಿ ಮಳೆ ಯಾಗುತ್ತಿದ್ದು ಜನ ಜೀವನ ಅಸ್ತ ವ್ಯ ಸ್ತ ವಾ ಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷಿಕ ಎ. ಅಬ್ದುಲ್ ನಬಿ ತಿಳಿಸಿದರು.
ಬೆಳಿಗ್ಗೆ 10ರವರೆಗೂ ಮಂಜು ಮುಸುಕಿದ ವಾತಾವರಣ 11ರ ನಂತರ ಮೋಡ ಕವಿದ ವಾತಾವರಣ ಸೃಷ್ಟಿ ಯಾಗಿರುವುದರ ಜೊತೆಗೆ ಜಿಟಿಜಿಟಿ ಮಳೆ ಯಾಗುತ್ತಿದ್ದು ಕೃಷಿ ಚಟು ವಟಿಕೆಗಳಿಗೆ ಅಡಚಣೆ ಇನ್ನೂ ಕೆಲಸ ಕಾರ್ಯಗಳಿಗೆ ತೆರಳಿದ್ದ ನೌಕರರಿಗೆ ಶಾಲಾ ಕಾಲೇಜು ಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿದ್ದ ಭತ್ತ ಮತ್ತು ಒಣ ಮೆಣಸಿನಕಾಯಿ ಕಟಾವು ಮಾಡಿ ರಸ್ತೆ ಬದಿಯಲ್ಲಿ ಜಮೀನಿನಲ್ಲಿ ಮತ್ತಿತರ ಆವರಣಗಳಲ್ಲಿ ಒಣಗಿಸಲು ಹಾಕಿರುವ ರಾಶಿಗಳು ಜಿಟಿಜಿಟಿ ಮಳೆಗೆ ತೊಯ್ದಿವೆ ರೈತರು ಚಿಂತಿ ಕ್ರಾಂತರಾಗಿದ್ದಾರೆ ಮಳೆಯಲ್ಲಿ ತೊಯ್ದು ಭತ್ತ ಖರೀದಿದಾರರು ಕೇಳುವವರಿಲ್ಲ ಎಂಬಂತಾಗಿದೆ ಎಂದು ಅಬ್ದುಲ್ ನಬಿ ತಿಳಿಸಿದರು.