ಚಿಕ್ಕೋಡಿ: ಇಲ್ಲಿನ ಪುರಸಭೆಯ ಸನ್ 2021-22 ನೆಯ ಸಾಲಿನ ಬಜೆಟ್ವನ್ನು ಅಧ್ಯಕ್ಷ ಪ್ರವೀಣ ಕಾಂಬಳೆ ಮಂಡಿಸಿದರು.
ಚಿಕ್ಕೋಡಿ 31: ಇಲ್ಲಿನ ಪುರಸಭೆಯ ಸನ್ 2021-22 ನೆಯ ಸಾಲಿನ 5.20 ಲಕ್ಷ ರೂ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಹೇಳಿದರು.
ಬುಧವಾರ ಇಲ್ಲಿನ ಪುರಸಭೆ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, ಕೊರೊನಾ ಮಧ್ಯದಲ್ಲಿಯೂ ಉತ್ತಮ ಬಜೆಟ್ ಮಂಡಿಸಿರುವುದು ತೃಪ್ತಿ ತಂದಿದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಹಿತಕ ಘಟನೆ ನಡೆಯಂದತೆ ಪ್ರಮುಖ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಬಜೆಟ್ದಲ್ಲಿ ಅನುದಾನ ಮೀಸಲಿಡಲಾಗಿದೆ ಎಂದರು.
ಮಹಾಮಾರಿ ಕೊರೊನಾ ತಡೆಯುವ ನಿಟ್ಟಿನಲ್ಲಿ ನಗರದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಶೇಷ ಕ್ರಮ ತೆಗೆದುಕೊಳ್ಳಲಾಗಿದೆ. ಕೊರೊನಾದಿಂದ ನಗರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಬರುವ ದಿನಮಾನಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡಲು ಚಿಂತನೆ ನಡೆಸಲಾಗಿದೆ. ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಸರ್ಕಾರದಿಂದ ವಿಶೇಷ ಅನುದಾನ ತರಲು ಮನವಿ ಮಾಡಲಾಗಿದೆ ಎಂದರು.
ಪುರಸಭೆಗೆ ಬರುವ ಅನುದಾನ ಸಮರ್ಪಕ ಬಳಕೆ ಮಾಡಿಕೊಳ್ಳಲಾಗಿದೆ. 23 ವಾರ್ಡದಲ್ಲಿ ಸಮರ್ಪಕ ರಸ್ತೆ, ಕುಡಿಯುವ ನೀರು, ಸ್ವಚ್ಛತೆ ಒದಗಿಸಲಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸ್ಥಳೀಯ ಆಡಳಿತ ಬಿಜೆಪಿಗೆ ಇರುವುದರಿಂದ ಚಿಕ್ಕೋಡಿ ನಗರಕ್ಕೆ ಅನುದಾನ ಹರಿದು ಬರಲಿದೆ. ಇದರಿಂದ ಹೈಟಿಕ್ ನಗರವಾಗಿ ಚಿಕ್ಕೋಡಿ ಅಭಿವೃದ್ಧಿ ಕಾಣಲಿದೆ ಎಂದರು.
ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಟಿಪ್ಪು ಗಣೇಶವಾಡಿ, ಸದಸ್ಯರಾದ ನಾಗರಾಜ ಮೇದಾರ, ವೀಣಾ ಕವಟಗಿಮಠ, ಶಾಮ ರೇವಡೆ, ಸಾಭಿರ ಜಮಾದಾರ, ಗುಲಾಬ ಬಾಗವಾನ, ಸಂತೋಷ ಟವಳೆ, ಶಾಂಭವಿ ಅಶ್ವಥಪೂರ, ಮುಖಂಡರಾದ ಬಾಬು ಮಿರ್ಜೆ, ಸಿದ್ದಪ್ಪ ಡಂಗೇರ, ಇಂಜನೀಯರ ಎಂ.ಎ.ಮಹಾಜನ, ಪರಿಸರ ಅಭಿಯಂತರ ಪ್ರೀಯಂಕಾ ವಿನಾಯಕ, ಅಶ್ವಿಣಿ ಕಾಳೆ ಮುಂತಾದವರು ಇದ್ದರು.
ಮುಖ್ಯಾಧಿಕಾರಿ ಡಾ, ಸುಂದರ ರೋಗಿ ಸ್ವಾಗತಿಸಿದರು.