ತಾಳಿಕೋಟಿ

ಎಲ್ಲ ಧರ್ಮಗಳ ಮೂಲ ಮಂತ್ರ ಶಾಂತಿ ಆಗಿದೆ: ತಹಶೀಲ್ದಾರ ಗೋಟೂರ

ಎಲ್ಲ ಧರ್ಮಗಳ ಮೂಲ ಮಂತ್ರ ಶಾಂತಿ ಆಗಿದೆ: ತಹಶೀಲ್ದಾರ ಗೋಟೂರ

ಪ್ರವಾದಿ ಮಹಮ್ಮದರ ಜನ್ಮದಿನಾಚರಣೆ ಅಂಗವಾಗಿ ಈದ್‌-ಮಿಲಾದ ಸೌಹಾರ್ಧ ಸಮಾರಂಭ 

ತಾಳಿಕೋಟಿ: ಜಗತ್ತನಲ್ಲಿರುವ ಯಾವ ಧರ್ಮವು ಹಿಂಸೆ ಅಶಾಂತಿ ಹಾಗೂ ಕ್ಷೊಭೆಯನ್ನು ಭೋಧಿಸಿಲ್ಲ ಎಲ್ಲ ಧರ್ಮಗಳು ಹಾಗೂ ಅದರ ಪ್ರತಿಪಾದಕರು ಶಾಂತಿ ಹಾಗೂ ಸಹಬಾಳ್ವೆಯ ಶಿಕ್ಷಣವನ್ನೇ ಕೊಟ್ಟಿದ್ದಾರೆ. ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಮೂಲ ಮಂತ್ರ ಶಾಂತಿಯೇ ಆಗಿದೆ ಎಂದು ತಹಶೀಲ್ದಾರ ಶ್ರೀಧರ ಗೋಟೂರ ಹೇಳಿದರು. 

ರವಿವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಇಸ್ಲಾಮಿಕ್ ಒಕ್ಕೂಟ ವೇದಿಕೆಯವರು ಪ್ರವಾದಿ ಮಹಮ್ಮದ್(ಸ)ರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಈದ್‌-ಮಿಲಾದ ಸೌಹಾರ್ಧ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಇಂದು ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಧರ್ಮ ಕಾರಣವಾಗಿರದೇ ನಮ್ಮ ಕೆಟ್ಟ ಮನಸ್ಸುಗಳು ಕಾರಣವಾಗಿವೆ ನಾವಿಂದು ಸಂಕುಚಿತಬಾವನೆ ತ್ವರೆದು ವಿಶ್ವ ಮಾನವ ಕಲ್ಪನೆಯನ್ನು ಹೊಂದಬೇಕಾಗಿದೆ ಎಂದರು. 

ಹಿರಿಯ ಪತ್ರಕರ್ತ ಜಿ. ಟಿ. ಘೋರೆ​‍್ಡ, ಮಾತನಾಡಿ ಪ್ರವಾದಿ ಮಹಮ್ಮದರು 6ನೇಯ ಶತಮಾನದಲ್ಲಿ ಕೊಟ್ಟ ಮಾನವ ಸಮಾನತೆಯ ಸಂದೇಶವನ್ನೇ ಬಸವಣ್ಣನವರು 12ನೇಯ ಶತಮಾನದಲ್ಲಿ ಕೊಟ್ಟಿದ್ದಾರೆ. ಅವರ ಈ ಸಂದೇಶವನ್ನು ಪಾಲಿಸುವಲ್ಲಿಯೇ ಸಮಾಜದಲ್ಲಿ ಶಾಂತಿ ಬರಲು ಸಾಧ್ಯವಿದೆ ಎಂದರು. 

ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ ಮಾತನಾಡಿ ಜಗತ್ತಿನ ಎಲ್ಲ ಧರ್ಮಗಳು ಮಾನವೀಯತೆ ಸಂದೇಶ ನೀಡಿವೆ. ಪ್ರವಾದಿ ಮಹಮ್ಮದ್(ಸ)ರು ವಿಶ್ವ ಶಾಂತಿಗೆ ಮಾನವ ಕುಲದ ಏಕತೆಗೆ ಅಪಾರ ಕೊಡುಗೆ ನೀಡಿದ್ದಾರೆ ಏಕದೇವ ಉಪಾಸನೆಯ ತಳಹದಿಯಲ್ಲಿ ಮನುಷ್ಯರನ್ನು ಒಂದುಗೂಡಿಸುವ ಕೆಲಸ ಅವರು ಮಾಡಿದ್ದಾರೆ ನಮ್ಮ ದೇಶ ಸೂಫಿಸಂತರ, ಶರಣರ, ಋಷಿಮುನಿಗಳ ದೇಶವಾಗಿದೆ ಇದರ ಬಹುತ್ವವನ್ನು ರಕ್ಷಿಸುವ ಅಗತ್ಯ ಇದೆ ಎಂದು ತಿಳಿಸಿದರು.  

ಮುಖಂಡ ಖಾಜಾ ಹುಸೇನ ಡೋಣಿ ಮಾತನಾಡಿ ಭಾರತೀಯರಾದ ನಾವೇಲ್ಲರೂ ಒಂದೆ ಆಗಿದ್ದೇವೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬೇರಿ​‍್ಡಸುವ ಕೆಲಸ ಮಾಡುತ್ತಿದ್ದಾರೆ ಯಾವ ಧರ್ಮವು ದ್ವೇಶದ ಶಿಕ್ಷಣ ನೀಡಿಲ್ಲ. ನಾವು ಪರಸ್ಪರ ಧರ್ಮಗಳನ್ನು ತಿಳಿದು ಬಾಳಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಇದೆ ಎಂದು ಹೇಳಿದರು. 

ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಯಲ್ಲಮ್ಮ ಪಡೇಸೂರ ಅಧ್ಯಕ್ಷತೆ ವಹಿಸಿದ್ದರು ಮುಖಂಡ ಖಾಜಾಹುಸೇನ ಡೋಣಿ ಗೌರವ ಅಧ್ಯಕ್ಷರಾಗಿ ಆಗಮಿಸಿದ್ದರು.  ಧಾರ್ಮಿಕ ಮುಖಂಡ ಸೈಯದ್ ಶಕೀಲಅಹ್ಮದ್ ಖಾಜಿ ಹಾಗೂ ಹಜರತ್ ಮೌಲಾನಾ. ರಹ್ಮತುಲ್ಲಾಹಾಶ್ಮಿ ಸಾನಿಧ್ಯ ವಹಿಸಿದ್ದರು.  

ಜಿಲ್ಲಾ ವಕ್ಫ ಸಮಿತಿ ಲೆಕ್ಕ ಪರಿಶೋಧಕ ಮೊಹಸೀನ ಜಮಖಂಡಿ, ಹಿರಿಯ ಪತ್ರಕರ್ತ ಜಿ. ಟಿ. ಘೋರೆ​‍್ಡ, ವೈದ್ಯಾಧಿಕಾರಿ ಡಾ. ಐ. ಬಿ. ತಲ್ಲೋಳ್ಳಿ, ಕೃಷಿ ಅಧಿಕಾರಿ ಮಹೇಶ ಜೋಷಿ, ಮುಸ್ಲೀಂ ಬ್ಯಾಂಕ ಅಧ್ಯಕ್ಷ ಇಬ್ರಾಹಿಂ ಮನ್ಸೂರ, ಪುರಸಭೆ ಮಾಜಿ ಉಪಾಧ್ಯಕ್ಷ ಗೈಬೂಶಾ ಮಕಾನದಾರ, ಸಿಕಂದರ ಡೋಣಿ, ಕರವೇ ಜಿಲ್ಲಾ ಉಪಾಧ್ಯಕ್ಷ ಜೈ ಭೀಮ ಮುತ್ತಗಿ, ಪುರಸಭೆ ಸದಸ್ಯೆ ಸೈದಾಬಿ ಚಿತ್ತರಗಿ, ಪ್ಯಾರೇಶಾ ಮಕಾನದಾರ,  ಮುಸ್ತಾಫಾ ಮುಲ್ಲಾ, ಬಸೀರ ಮುಲ್ಲಾ ಶಿಕ್ಷಕ ವಿ. ಎನ್‌. ಯಾದಗಿರಿ, ಅಬ್ದುಲ್‌ಗನಿ ಮಕಾನದಾರ, ಸುರೇಶಕುಮಾರ ಇಂಗಳಗಿ, ಪೀರಮಹ್ಮದ್ ಖಾಜಿ, ಮುಜಾಹೀದ್ ನಮಾಜಕಟ್ಟಿ, ಮಹಿಬೂಬ ಕೆಂಭಾವಿ, ನದೀಮ ಕಡು, ಶಫೀಕ ಇನಾಮದಾರ,  ಇದ್ದರು. 


ಸುದ್ದಿ ಓದಿ