ಬೈಲಹೊಂಗಲ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಮನವಿ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಮನವಿ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಮೇಲಿನ ದಬ್ಬಾಳಿಕೆ ಖಂಡಿಸಿ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಬೈಲಹೊಂಗಲ 03: ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಮೇಲಿನ ದಬ್ಬಾಳಿಕೆ ಖಂಡಿಸಿ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಕಾಡಾ ಅಧ್ಯಕ್ಷ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರ ನೇತೃತ್ವದಲ್ಲಿ ಸಭೆ ನಡೆಯಿತು. 

ವ್ಯಾಪಾರ ಸಮಿತಿ ಉಪಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, ಮಹಾಮಾರಿ ಕೋವಿಡ್‌-19 ಹಾವಳಿಯಿಂದ ವ್ಯಾಪಾರಸ್ಥರ ಬದುಕು ಕಂಗಾಲಾಗಿದ್ದು, ಇಂತಹ ಸಮಯದಲ್ಲಿ ಅಧಿಕಾರಿಗಳು ವಿನಾಕಾರಣ ವ್ಯಾಪಾರಸ್ಥರಿಗೆ ತೊಂದರೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಸರಕಾರ ಘೋಷಿಸಿದ ಸೌಲಭ್ಯಗಳು ಸರಿಯಾಗಿ ವ್ಯಾಪಾರಸ್ಥರಿಗೆ ತಲುಪುತ್ತಿಲ್ಲ. ಶೀಘ್ರ ವ್ಯಾಪಾರ ಸಮಿತಿ ರಚನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.   

ಪುರಸಭೆ ಸದಸ್ಯ ಶಿವಾನಂದ ಕೋಲಕಾರ ಮಾತನಾಡಿ, ಕೆಲ ವ್ಯಾಪಾರಸ್ಥರಿಂದ ಎಲ್ಲರಿಗೂ ತೊಂದರೆಯಾಗುತ್ತಿದ್ದು, ಸರಿಯಾದ ರೀತಿಯಲ್ಲಿ ವ್ಯಾಪಾರ ಮಾಡಬೇಕು. ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ಮಾಡದಂತೆ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಪುರಸಭೆಯ ಮಿಟಿಂಗನಲ್ಲಿ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದರು. 

ಬೆಳಗಾವಿ ಕಾಡಾ ಅಧ್ಯಕ್ಷ, ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳ ಕುರಿತು ವ್ಯಾಪಾರ ಸಮಿತಿ ಮುಖಂಡ ರಫೀಕ ಬಡೇಘರ ಅವರು ಗಮನಕ್ಕೆ ತಂದಿದ್ದು, ಈಗಾಗಲೇ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ಮಾಡದಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ಎಲ್ಲ ವ್ಯಾಪಾರಸ್ಥರಿಗೆ ಪರಿಹಾರ ಧನ ವಿತರಿಸುವಲ್ಲಿ ಕ್ರಮವಹಿಸಿದೆ. ಈಗಂತೂ ಸರಿಯಾದ ಸೌಲಭ್ಯ ಸಿಗತ್ತಿಲ್ಲ. ಈ ಕುರಿತು ಅಧಿಕಾರಿಗಳ ಸಭೆ ಕರೆದು ಎಲ್ಲ ಸಮಸ್ಯೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ವ್ಯಾಪಾರಸ್ಥರಿಗೆ ಏನೇ ಸಮಸ್ಯೆ ಬಂದರೂ ನೆರವಾಗಿ ಸಂಪರ್ಕಿಸುವಂತೆ ತಿಳಿಸಿದರು. ಪ್ರತಿಯೊಬ್ಬರು ಕೋವಿಡ್‌-19 ಮಾರ್ಗಸೂಚಿ ಪಾಲಿಸುವಂತೆ ವಿನಂತಿಸಿದರು. ಸಿಪಿಐ ಯು.ಎಚ್‌.ಸಾತೇನಹಳ್ಳಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಿಸುತ್ತಿದ್ದು, ವ್ಯಾಪಾರಸ್ಥರು ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವ್ಯಾಪಾರಸ್ಥರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗ್ಗೆ ಹರಿಸುವುದಾಗಿ ತಿಳಿಸಿದರು. 

ಈರಪ್ಪಾ ಬೈಲವಾಡ, ದೇವೇಂದ್ರ ಚೌವಡಪ್ಪನವರ, ಬಿಬಿಜಾನ ಉಡಕೇರಿ, ಜನ್ನತಭಿ ಧಾರವಾಡ, ಇಸ್ಮಾಯಿಲ್ ಬಡೇಘರ, ಬುಡ್ಡೆಸಾಬ ಮದಲಮಟ್ಟಿ, ಮಾರುತಿ ಕೊಂಡುರ, ಹನೀಫ ಕರಡಿ, ಮಹ್ಮದಲಿ ಬಾಗೇವಾಡಿ, ಮೊದೀನೀಬಿ ಮುಲ್ಲಾ, ಅನಸವ್ವಾ ಚಿಕ್ಕೊಪ್ಪ, ಸೋಮವ್ವ ಪರವನ್ನವರ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು. 

ಸುದ್ದಿ ಓದಿ