ಕುಷ್ಟಗಿ

ವಿಜೃಂಭಣೆಯಿಂದ ವಚನ ಸಂಗೀತ ಕಾರ್ಯಕ್ರಮ ಸಂಪನ್ನ

ವಿಜೃಂಭಣೆಯಿಂದ ವಚನ ಸಂಗೀತ ಕಾರ್ಯಕ್ರಮ ಸಂಪನ್ನ

ಲೋಕದರ್ಶನ ವರದಿ  

ಕುಷ್ಟಗಿ 09: ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಬೆಂಗಳೂರು, ತಾಲೂಕ ಹೂಗಾರ ಸಮಾಜ, (ಹೂಗಾರ, ಜೀರ, ಪೂಜಾರ, ಗುರುವ ಸಮಾಜದ ಒಕ್ಕೂಟ) ವತಿಯಿಂದ ಏರಿ​‍್ಡಸಿದ್ದ ಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ-2022ಹಾಗೂ 101 ಕುಂಭ ಮೇಳ ಸಮಾರಂಭ ಎಸ್‌.ಎಸ್‌.ಎಲ್‌.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರಾಜಶ್ರೀ ಹಿರೇಮಠ ಹಾಗೂ ಸಂಗಡಿಗರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು.  

ಸಂಗೀತ ಶಿಕ್ಷಕ ಪಾಲಾಷಯ್ಯ ಹಿರೇಮಠ ಪ್ರಾಥಿಸಿದರು. ರಾಜಶ್ರೀ ಹಿರೇಮಠ ವಚನ ಸಂಗೀತ ಕಾರ್ಯಕ್ರಮ ವನ್ನು ನಡೆಸಿದರು.  ಕಲಾವಿದ ಬಸವರಾಜ ಹೂಗಾರ ಕೀಬೋರ್ಡ್‌  ನೂಡಿಸಿದರು. ಸಂಗೀತ ಶಿಕ್ಷಕ  ರವಿಕುಮಾರ ಮೇಣದ ತಬಲಾ ಸಾಥ ನೀಡಿದರು. ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಯಲಬುರ್ಗಾ ತಾಲೂಕಿನ ಸಿರಗುಂಪಿ ಗ್ರಾಮದ ಕರಿಬಸವೇಶ್ವರ ದೇವಸ್ಥಾನದ ಮಾತೋಶ್ರೀ ನೀಲಮ್ಮ ತಾಯಿ ಹೂಗಾರ, ಮೇಣದಾಳ ಗ್ರಾಮದ ದೇವಿ ಉಪಾಸಕ ಪೂಜ್ಯ ಭೀಮಜ್ಜ ಹೂಗಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು.  ಹೂಗಾರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಹೂಗಾರ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.  


ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಕೆ.ಪಿ.ಸಿ.ಸಿ ಉಪಾಧ್ಯಕ್ಷ ಹಸನಸಾಬ ದೋಟಿಹಾಳ, ರಾಷ್ಟ್ರೀಯ ಹಣ್ಣು ಬೆಳೆಗಾರರ ಸಂಘದ ಉಪಾಧ್ಯಕ್ಷ ದೇವೇಂದ್ರ​‍್ಪ ಬಳೂಟಗಿ, ಜಿಲ್ಲಾಧ್ಯಕ್ಷ ಹೂಗಾರ ಸಮಾಜ ಗವಿಸಿದ್ದಪ್ಪ ಹೂಗಾರ, ತಾಲೂಕ ಭಾಜಪ ಅಧ್ಯಕ್ಷ ಬಸವರಾಜ ಹಳ್ಳೂರ, ಗುತ್ತಿಗೆದಾರರು ಹಾಲಪ್ಪ ಹೂಗಾರ ಸೇರಿದಂತೆ ಕಂದಕೂರ, ಶಿರಗುಂಪಿ, ಬೀಳಗಿ, ರಾಮತ್ನಾಳ, ಮೇಗೂರ, ಬಳೂಟಗಿ, ಜಾಲಿಹಾಳ, ಕೇಸೂರ ಸೇರಿದಂತೆ ತಾಲೂಕಿನ ನೂರಾರು ಹೂಗಾರ ಸಮಾಜದ ಗುರು ಹಿರಿಯರು  ಹಾಗೂ ಮಹಿಳೆಯರು ಭಾಗವಹಿಸಿದ್ದರು. 


ಸುದ್ದಿ ಓದಿ