ಶಿಗ್ಗಾವ್

ಶ್ರದ್ಧಾಭಕ್ತಿಯಿಂದ ರಂಜಾನ್ ಆಚರಣೆ: ಸಾಮೂಹಿಕ ಪ್ರಾರ್ಥನೆ

ಶ್ರದ್ಧಾಭಕ್ತಿಯಿಂದ ರಂಜಾನ್ ಆಚರಣೆ: ಸಾಮೂಹಿಕ ಪ್ರಾರ್ಥನೆ

ಲೋಕದರ್ಶನ ವರದಿ 

ಶಿಗ್ಗಾವಿ 04: ಈದುಲ್‌-ಫೀತರ್ ರಂಜಾನ್ ಹಬ್ಬದ ಪ್ರಯುಕ್ತ ಅಂಜುಮನ್ ಇಸ್ಲಾಂ ಸಂಸ್ಥೆಯ ಇದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಂ ಬಾಂಧವರು ಸಡಗರ-ಸಂಭ್ರಮದಿಂದ ಶ್ರದ್ಧಾಭಕ್ತಿಯಿಂದ ರಂಜಾನ್ ಹಬ್ಬವನ್ನ ಆಚರಿಸಿದರು. 

ಪಟ್ಟಣದ ಪ್ರಮುಖ ಮಸೀಗಳಿಂದ ಮುಸ್ಲಿಂ ಬಾಂಧವರು ಶುಭ್ರವಾದ ಹೊಸ ಬಟ್ಟೆಗಳನ್ನು ಧರಿಸಿ ಜಮಾವಣೆಗೊಂಡು ನಂತರ ಅಲ್ಲಾನ ನಾಮಸ್ಮರಣೆ ಮಾಡುತ್ತಾ ಶಿಗ್ಗಾವಿ ಪಟ್ಟಣದ ಮುಗುಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ 10-30 ಗಂಟೆಗೆ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಪ್ರವಚನ ಸಂದೇಶದಲ್ಲಿ ಶಾಂತಿ, ಸೌಹಾರ್ಧತೆಯ ಮತ್ತು ಧರ್ಮದ ಅಸೀಕ್ ಸಂದೇಶ ತಿಳಿಸಿದರು. 

ನಂತರ ಒಬ್ಬರನೊಬ್ಬರು ಆಲಿಂಗಿಸಿ ಕೊಂಡು ಹಬ್ಬದ ಶುಭಾಶಯ ಮತ್ತು ಸಂತೋಷವನ್ನು ವಿನಿಮಯ ಮಾಡಿಕೊಂಡರು. 


ಸುದ್ದಿ ಓದಿ