ಗೋಕಾಕ್

ವಿಚಾರಣಾಧೀನ ಖೈದಿಗಳ ಮನಪರಿವರ್ತನ ಕಾರ್ಯಕ್ರಮ

ವಿಚಾರಣಾಧೀನ ಖೈದಿಗಳ ಮನಪರಿವರ್ತನ ಕಾರ್ಯಕ್ರಮ

ಲೋಕದರ್ಶನ ವರದಿ 


ಗೋಕಾಕ 17: ಮನುಷ್ಯನ ಜೀವನ ಅಮೂಲ್ಯವಾಗಿದ್ದು, ಜನನ ಮತ್ತು ಮರಣದ ನಡುವೆ ಒಳ್ಳೆಯ ಜೀವನ ನಡೆಸಿ, ಪರೋಪಕಾರ ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. 

     ಅವರು, ಕರವೇ ಗಜಸೇನೆ ಜಿಲ್ಲಾ ಘಟಕದಿಂದ ದಿ.ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ನಗರದ ಉಪಕಾರಾಗೃಹದಲ್ಲಿಯ ವಿಚಾರಣಾಧೀನ ಖೈದಿಗಳ ಮನಪರಿವರ್ತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

    ನಟಸಾರ್ವಭೌಮ ದಿ.ಡಾ.ಪುನೀತ ರಾಜಕುಮಾರ ತಮ್ಮ ದುಡಿಮೆಗೆ ಬಂದ ಹಣವನ್ನು ಅರ್ಧದಷ್ಟು ಧಾನ ಧರ್ಮಗಳನ್ನು ಮಾಡುವ ಮೂಲಕ ರಾಜ್ಯದ ಜನಮನದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ನಾವುಗಳು ಸಹ ಇನ್ನೊಬ್ಬರಿಗೆ ನೆರವಾಗುವ ಮೂಲಕ ಜನರ ಮನದಲ್ಲಿ ಸ್ಥಾನ ಪಡೆಯಲು ಶ್ರಮಿಸಬೇಕು ಎಂದರು. 

   ಇದೇ ಸಂದರ್ಭದಲ್ಲಿ ಡಾ.ಪುನೀತ ರಾಜಕುಮಾರ ಜನ್ಮ ದಿನದ ಅಂಗವಾಗಿ ಕರವೇ ಗಜಸೇನೆಯವರು ವಿಚಾರಣಾಧೀನ ಖೈದಿಗಳಿಗೆ ಉಪಾಹಾರ ಹಾಗೂ ಸಿಹಿ ವಿತರಿಸಿದರು. ಯುವನಾಯಕ ಸರ್ವೋತ್ತಮ ಜಾರಕಿಹೊಳಿ ಅವರನ್ನು ಗಜಸೇನೆಯ ಕಾರ್ಯಕರ್ತರು ಆತ್ಮೀಯವಾಗಿ ಸತ್ಕರಿಸಿದರು. 

     ಈ ಸಂದರ್ಭದಲ್ಲಿ ಬಂಧಿಖಾನೆ ಇಲಾಖೆಯ ಕಾರಾಗೃಹ ಅಧೀಕ್ಷಕಿ ಲಕ್ಷ್ಮಿ ಹಿರೇಮಠ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕರವೇ ಗಜಸೇನೆ ಜಿಲ್ಲಾ ಅಧ್ಯಕ್ಷ ಪವನ ಮಹಾಲಿಂಗಪೂರ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಲಕ್ಷ್ಮೀ ಪಾಟೀಲ, ಉಪಾಧೀಕ್ಷಕ ಎ ಕೆ ಅನ್ಸಾರಿ ಇದ್ದರು. 

     ಕಾರಾಗೃಹ ವಿಕ್ಷಕ ಶಕೀಲ್ ಜಕಾತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ