ರೇಣುಕಾಚಾರ್ಯರ ಜಯಂತಿ ಆಚರಣೆ
ಲೋಕದರ್ಶನ ವರದಿ
ಬಳ್ಳಾರಿ 17: ನಗರದಲ್ಲಿ ರೇಣುಕಾಚಾರ್ಯರ ಜಯಂತಿಯನ್ನು ವೀರಶೈವ ಬಾಂಧವರು ಸೇರಿ ಅದ್ದೂರಿಯಾಗಿ ಆಚರಿಸಲಾಯಿತು.
ಸಾರೋಟ್ನಲ್ಲಿ ಲಿಂಗೋದ್ಭವ ರೇಣುಕಾಚಾರ್ಯರ ಉತ್ಸವಮೂರ್ತಿಯನ್ನು ಸಕಲ ಮಂಗಳ ವಾದ್ಯಗಳಾದ, ಸಮಾಳ, ನಂದಿಕೊಲು, ಡೊಳ್ಳು ಕುಣಿತ, ಭಜನೆ, ನೃತ್ಯ ಮತ್ತು ಸುಮಂಗಳೀಯರ ಕಳಸ ಕುಂಭಗಳೊಂದಿಗೆ ಕೋರ್ಟ್ ರಸ್ತೆಯ ಕಮ್ಮ ಭವನದಿಂದ ಗಡಿಗಿ ಚನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆಯ, ಬ್ರೂಸ್ಪೇಟೆ ಸರ್ಕಲ್ ಮೂಲಕ ಮರಿಸ್ವಾಮಿಗಳ ಮಠಕ್ಕೆ ಮೆರವಣಿಗೆಯ ಮೂಲಕ ಹೋಗಲಾಯಿತು.
ಸಾನಿಧ್ಯವನ್ನು ಹರಗಿನಡೋಣಿ ಮಠದ ಶ್ರೀಗಳು, ಕಮ್ಮರಚೇಡು ಕಲ್ಯಾಣಮಠದ ಶ್ರೀಗಳು ಮತ್ತು ಗಿರಿಮಲ್ಲ ಶ್ರೀಗಳು ವಹಿಸಿದ್ದರು. ಈ ಮೆರವಣಿಗೆಯ ಚಾಲನೆಯನ್ನು ಪ್ರತಿಷ್ಟಿತ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುರುಸಿದ್ದಯ್ಯಸ್ವಾಮಿ ನೆರವೇರಿಸಿದರು. ಉಪಾಧ್ಯಕ್ಷ ಅಲ್ಲಂ ಚೆನ್ನಪ್ಪ, ಸಂಘದ ಕಾರ್ಯದರ್ಶಿ ಬಿ ವಿ ಬಸವರಾಜ್, ಉಡೇದ ಬಸವರಾಜ, ಕೋಶಾಧಿಕಾರಿಗಳಾದ ಗೋನಾಳ್ ರಾಜಶೇಖರ್ಗೌಡ, ಚೋರ್ನೂರು ಕೊಟ್ರ್ಪ, ದರೂರು ಶಾಂತನಗೌಡ, ಎಣ್ಣೆಅಂಗಡಿ ಎರಿ್ರಸ್ವಾಮಿ, ಕೆ ಎಂ. ನಟರಾಜ, ಆರ್ ಮೃತ್ಯುಂಜಯಸ್ವಾಮಿ, ಮಾಜಿ ಪಾಲಿಕೆ ಸದಸ್ಯರಾದ ಮಲ್ಲನಗೌಡ, ಹೆಚ್.ಎಂ. ಕಿರಣ್ಕುಮಾರ್, ಉಮಾಶಂಕರ್, ಹೆಚ್ ಕೆ ಗೌರಿಶಂಕರ್ಸ್ವಾಮಿ, ಸಿದ್ಧರಾಮಕಲ್ಮಠ, ಪುರುಷೊತ್ತಮಗೌಡ ಶ್ರೀಗಳ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದರು.
ಮೆರವಣಿಗೆಯು ಮರಿಸ್ವಾಮಿಮಠಕ್ಕೆ ಸೇರಿದ ನಂತರ ಅಲ್ಲಿ ಮಹಾಮಂಗಳಾರತಿ ಮತ್ತು ನೆರೆದ ಭಕ್ತರಿಗೆ ಮರಿಸ್ವಾಮಿಮಠದ ಭಕ್ತರವತಿಯಿಂದ ಪ್ರಸಾದ ವಿತರಣೆಯನ್ನು ನಡೆಸಲಾಯಿತು. ಈ ಕಾರ್ಯ ಕ್ರಮದಲ್ಲಿ ಮೃತ್ಯುಂಜಯಸ್ವಾಮಿ, ರಾಜಣ್ಣ,ಕೋಳೂರು ಚಂದ್ರಶೇಖರಗೌಡ, ಜಾಲಿಹಾಳ್ ಶ್ರೀಧರ್ಗೌಡ, ಅಮರೇಶ್ ಹಚ್ಚೊಳ್ಳಿ, ಸಿದ್ದಮೂರ್ತಿಸ್ವಾಮಿ ಬೆಳಗಲ್ಲು, ಜೆ.ಎಂ ಮಂಜುನಾಥ, ದಮ್ಮೂರ ರವಿ, ಕೊಟ್ರೇಶ್, ಶಿವಾನಂದ, ಶ್ರೀಧರಗಡ್ಡೆಯ ಈಶ್ವರಯ್ಯಸ್ವಾಮಿ ಭಜನಾ ಮಂಡಳಿಯ ಸದಸ್ಯರು, ಮತ್ತು ಬಳ್ಳಾರಿ ನಗರದ ವೀರಶೈವ ಮುಖಂಡರು ಭಾಗವಹಿಸಿದ್ದರು. ಈ ಎಲ್ಲಾ ಕಾರ್ಯಕ್ರಮಗಳನ್ನು ಜೆ.ಎಂ ಬಸವರಾಜಸ್ವಾಮಿ, ವೀರಶೈವ ಮುಖಂಡರು ಇವರ ನೇತೃತ್ವದಲ್ಲಿ ನೆರವೇರಿಸಲಾಯಿತು.