ಲೇಖನಗಳು

ಗುರುಪೂರ್ಣಿಮೆ

ಗುರುಪೂರ್ಣಿಮೆ

ಭಾರತೀಯರು ಆಚರಿಸುವ ಎಲ್ಲಾ ಹಬ್ಬ-ಹರಿದಿನಗಳಲ್ಲಿ ಗುರುಪೂರ್ಣಿಮೆಗೆ ತನ್ನದೇ ಆದ ಮಹತ್ವವಿದೆ. ಆಷಾಢ ಮಾಸದ ಹುಣ್ಣಿಮೆಯ ದಿನ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಅಂದು ಗುರುವಂದನೆ, ಗುರುದಕ್ಷಿಣೆ, ಗುರುಪೂಜೆ ಮುಂತಾದ ಕಾರ್ಯಕ್ರಮಗಳು ನಡೆಯುವುದು ಸರ್ವಸಾಮಾನ್ಯ.

ಗುರಿವಿನ ಮಹಿಮೆ ಅಪಾರವಾಗಿದೆ.

ಗುರುಬ್ರಹ್ಮಾಗುರುವಿಷ್ಣು ಗುರುದೇವೊ ಮಹೇಶ್ವರ:

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮ:

[ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇದೇವನಾದ ಮಹೇಶ್ವರ

ಗುರುವೇ ಸಾಕ್ಷಾತ್ ಪರಬ್ರಹ್ಮ.ಅಂತಹ ಶ್ರೀ ಗುರುವಿಗೆ ನಮಸ್ಕಾರ]

ಗುರುವನ್ನು ತ್ರಿಮೂರ್ತಿಗಳಿಗೆ  ಹೋಲಿಸಲಾಗಿದೆ.

'ಗುರುವಿನ ಗುಲಾಮನಾಗುವ ತನಕದೊರೆಯದಣ್ಣ ಮುಕುತಿ' ಎಂಬ ನಾಣ್ಣುಡಿಯುಗುರುವಿನ ಮಹತ್ವವನ್ನು ತಿಳಿಸುತ್ತದೆ.

ತಾಯಿಯೇ ಮೊದಲಗುರು, ನಂತರತಂದೆ, ಶಿಕ್ಷಕ, ಪ್ರಾಧ್ಯಾಪಕರು, ಮಿತ್ರರು, ಸಂಬಂಧಿಕರುಬರುತ್ತಾರೆ. ಮಾರ್ಗದರ್ಶನನೀಡುವವರುಗುರುಆಗಿದ್ದಾರೆ.ಜೀವನದಲ್ಲಿಯಾವುದೇ ಮಾರ್ಗದರ್ಶನನೀಡುವವರನ್ನುಗುರುಎಂದುಹೇಳುತ್ತಾರೆ.ಗುರುಎಂದರೆಯಾರು? ನಮಗೆ ಯಾವುದೋಒಂದು ಹೊಸ ವಿದ್ಯೆಯನ್ನುಕಲಿಸುವವನು,ದಾರಿತೋರಿಸುವವನು, ಬುದ್ಧಿ ಹೇಳುವವನು,ಹೀಗೆ ಜಾತಿಗೆಒಬ್ಬ, ಕುಲಕ್ಕೆ ಒಬ್ಬ, ಧರ್ಮಕ್ಕೆಒಬ್ಬ, ದೇಶಕ್ಕೆಒಬ್ಬ, ಗುರುಇರುವುದುಸಾಮಾನ್ಯವಾಗಿದೆ.

 ಪ್ರಾಚೀನಕಾಲದಲ್ಲಿಋಷಿ-ಮುನಿಗಳು ಆಶ್ರಮಗಳಲ್ಲಿ ಇದ್ದುಕೊಂಡು ಗುರುಕುಲಗಳನ್ನು ನಡೆಸುತ್ತಿದ್ದರು. ಅಲ್ಲಿ ಅನೇಕ ವರ್ಷಗಳ ಕಾಲ ಗುರುಗಳ ಸೇವೆ ಮಾಡುತ್ತಾಎಲ್ಲಾರೀತಿಯ ವಿದ್ಯೆಯನ್ನುಕಲಿಯಬೇಕಾಗಿತ್ತು. ಆದರೆ ಈಗ ಗುರುಕುಲ ಪದ್ಧತಿ ಮಾಯವಾಗಿ ಶಾಲಾ-ಕಾಲೇಜುಗಳಾಗಿ ಪರಿವರ್ತನೆಯಾಗಿದೆ. ಮೊದಲುಇರುವ ಪಾವಿತ್ರ್ಯತೆ ಕಳೆೆದು ಹೋಗಿದೆ. ಪಾಠ ಹೇಳಿ ಕೊಡುವುದು ಎಷ್ಟೋ ಜನರ ಪಾಲಿಗೆಜೀವನೋಪಾಯವಾಗಿದೆ.ಇವತ್ತಿನ ಸಮಯದಲ್ಲಿಅಂತಹ ಗುರುಗಳು ಸಿಗುವುದು ತುಂಬಾಕಷ್ಟವಾಗಿದೆ.

ನಮ್ಮಲ್ಲಿರುವಧಾಮರ್ಿಕ ಮಠಗಳ ಸ್ವಾಮಿಗಳನ್ನು ನಾವು ಗುರುಗಳೆಂದು ಭಾವಿಸುತ್ತೇವೆ. ಮಾನವ ಸಾಂಸಾರಿಕ ಬದುಕಿನಜಂಜಾಟದಿಂದದೂರವಾಗಿ ನೆಮ್ಮದಿ, ಸಮಾಧಾನ, ಶಾಂತಿಯನ್ನು ಪಡೆಯಲುಆಧ್ಯಾತ್ಮಿಕಗುರುಗಳ ಹುಡುಕಾಟದಲ್ಲಿಇರುತ್ತಾನೆ. 

ಆಧುನಿ ಕಯುಗದಲ್ಲಿ ಮಠಾಧೀಶರು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ವಿದ್ಯಾದಾನ, ದಾಸೋಹ, ಮುಂತಾದ ಪುಣ್ಯ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಆದರೆ ಅನೇಕ ಮಠಾಧಿಪತಿಗಳು, ಸಾಧು-ಸನ್ಯಾಸಿಗಳು ಜಾತಿ,ಮತಭೇದ, ರಾಜಕಾರಣದಿಂದ ತಮ್ಮ ಮಹಾನತೆ ಮತ್ತು ಪಾವಿತ್ರ್ಯವನ್ನು ಕಳೆದುಕೊಂಡಿದ್ದಾರೆ. ಮಾಟ-ಮಂತ್ರದಿಂದ ದಿಕ್ಕು ತಪ್ಪಿಸುವಢೋಂಗಿಬಾಬಾಗಳುಅನೇಕರಿದ್ದಾರೆ.

ನಿಜವಾದ ಸದ್ಗುರು ಯಾರು? ಈ  ಕಲಿಕಾಲದ ಅಂತ್ಯದಲ್ಲಿ ಸದ್ಗುರುವಿನ  ಮಹಿಮೆಯನ್ನು ನಾವು ತಿಳಿದುಕೊಳ್ಳುವುದು ಅತಿಆವಶ್ಯಕವಾಗಿದೆ. ಸದ್ಗುರು ಎಂದರೆ ಸತ್ಯಮಾರ್ಗ ಮತ್ತು ಸದ್ಗತಿಯನ್ನುನೀಡುವವನು. ಆ ಪರಮಾತ್ಮನೇ ಸತ್ಯಂ-ಶಿವಂ-ಸುಂದರಂ ಆಗಿದ್ದಾನೆ. ಅವನು ನಿರಾಕಾರ, ಅವ್ಯಕ್ತ,ಅಭೋಕ್ತ, ಆಶರೀರಿ, ಅಜನ್ಮ, ಸರ್ವಶಕ್ತಿವಂತನಾಗಿದ್ದಾನೆ. ಸುಖಕರ-ದು:ಖಹರ, ಸರ್ವಶ್ರೇಷ್ಠ,  ಮುಕ್ತಿ-ಜೀವನ್ಮುಕ್ತಿದಾತನಾಗಿದ್ದಾನೆ. ಅಮರನಾಥ ಶಿವ ಪರಮಾತ್ಮನು ಸರ್ವ ಆತ್ಮರ ಸದ್ಗುರುವಾಗಿದ್ದಾನೆ. ಸಾಧು-ಸಂತರಉದ್ಧಾರಕನಾಗಿದ್ದಾನೆ. ಈ ಕಲಿಯುಗದಅಂತಿಮ ಸಮಯದಲ್ಲಿ ಸತ್ಯಜ್ಷಾನವನ್ನು ನೀಡಿ, ಸತ್ಯಮಾರ್ಗವನ್ನುತೋರಿಸಿ, ಸಂಪೂರ್ಣ  ಪವಿತ್ರತೆ, ಸುಖ, ಶಾಂತಿನೀಡುತ್ತಿದ್ದಾನೆ.ಗುರುವಾದವನುದೊಡ್ಡವನು,ಗುರುತರಜವಾಬ್ದಾರಿಯುಳ್ಳವನು, ಜ್ಞಾನವುಳ್ಳವನು,ಅಜ್ಞಾನಕಳೆಯುವವನುಎಂದು ಹೇಳಲಾಗುತ್ತದೆ.

ಗುಕಾರಸ್ತ್ವಂಧಕಾರಸ್ತುರುಕಾರಸ್ತೇಜ ಉಚ್ಚತೇ

ಅಂಧಕಾರ ನಿರೋಧತ್ವಾತ್ಗುರುರಿತ್ಯಭಿ ಧೀಯತೇ.

ಗುಕಾರಕತ್ತಲೆಯ ಪ್ರತೀಕ, ರುಕಾರ ಬೆಳಕಿನ ಪ್ರತೀಕ, ಗೊತ್ತಿಲ್ಲದಿರುವುದು, ತಿಳಿಯದಿರುವುದೇ ಅಜ್ಞಾನ. ಇದೇಕತ್ತಲುಅಥವಾಅಂಧಕಾರ.ಅರಿವು, ಜ್ಞಾನ, ವಿದ್ಯೆಯೇ ಬೆಳಕು.

ನಮ್ಮೊಳಗಿನ ಅಜ್ಞಾನದಕತ್ತಲೆಯನ್ನುಜ್ಞಾನದ ಬೆಳಕಿನಿಂದ ಹೊಡೆದೋಡಿಸುವವನೇಗುರು.

ಆದ್ದರಿಂದಲೇ ಭಗವದ್ಗೀತೆಯಲ್ಲಿ ಈ ರೀತಿ ಹೇಳಲಾಗಿದೆ -

ಯದಾಯದಾಹಿ ಧರ್ಮಸ್ಯಗ್ಲಾನಿರ್ಭವತಿ ಭಾರತ

ಅಭ್ಯುತ್ಥಾನಮಧರ್ಮಸ್ಯತದಾತ್ಮಾನಂ ಸೃಜಾಮ್ಯಹಮ್  (ಅ-4 ಶ್ಲೋ-7)

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್

ಧರ್ಮಸಂಸ್ಥಾಪನಾಥರ್ಾಯ ಸಂಭವಾಮಿಯುಗೇಯುಗೇ (ಅ-4 ಶ್ಲೋ-8)

- ವಿಶ್ವಾಸ. ಸೋಹೋನಿ.

ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,

ಮೊ.7349632530 

 

ಸುದ್ದಿ ಓದಿ