ಚಿಕ್ಕೋಡಿ

ಮಾಹಾರಾಷ್ಟ್ರ ಸರಕಾರದ್ದು ತಿರುಕನ ಕನಸು

ಮಾಹಾರಾಷ್ಟ್ರ ಸರಕಾರದ್ದು ತಿರುಕನ ಕನಸು

ಚಿಕ್ಕೋಡಿ 19: ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಮಾಹಾರಾಷ್ಟ್ರ ಸರಕಾರ ಬೆಳಗಾವಿಯಲ್ಲಿ ಒಂದು ಕಚೇರಿ ತೆರೆಯುವ ಪ್ರಸ್ತಾಪ ಮಾಡುತ್ತಿರುವುದು ತಿರುಕನ ಕನಸಾಗಿದೆ ಎಂದು ಬಂಡಾಯ ಸಾಹಿತಿ ಪ್ರೊ. ಸುಬ್ರಾವ ಎಂಟೆತ್ತಿನವರ ಮಹಾರಾಷ್ಟ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಕೊರೊನಾ ಎಂಬ ಮಹಾಮಾರಿ ಪುಣಾ, ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರ ರಾಜವನ್ನೇ ತಲ್ಲಣಗೊಳಿಸಿರುವ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸರಕಾರ ಭಾಷಿಕ ವಿಚಾರವನ್ನು ಎತ್ತಿಕೊಂಡು ಕನ್ನಡಿಗರ ತಾಳ್ಮೆ ಕೆಡಿಸುವ ತಂತ್ರಗಾರಿಕೆಯನ್ನು ಪದೆಪದೆ ಮಾಡುತ್ತಿದ್ದು ಜನರ ದಿಕ್ಕುತಪ್ಪಿಸುವ ಕೆಲಸ ಮಹಾರಾಷ್ಟ್ರ ಸರಕಾರ ಮಾಡುತ್ತಿರುವುದು ಸರಿಯಲ್ಲ ಎಂದರು.

ಭಾಷಾ ವಿಚಾರ ಕೈ ಬಿಟ್ಟು ಕೊರೊನಾದಿಂದ ದಿನನಿತ್ಯ ಸಾವು ನೋವು ಹೆಚ್ಚಾಗುತ್ತಿದೆ. ಬಡವರ ಬದುಕು ದುರ್ಬರವಾಗಿದೆ. ಜನವೆಲ್ಲಾ ಕೊರೊನಾಕ್ಕೆ ಹೆದರಿ ಗುಳೆ ಹೊರಟಿದ್ದಾರೆ. ದಿನಿತ್ಯದ ಬೇಕಾಗುವ ವಸ್ತುಗಳ ಬೆಲೆ ಗಗನ್ನಕೇರಿದೆ. ಜನ ಇದರ ವಿರುದ್ಧ ಬಂಡಾಯವೆದ್ದು ಹೋರಾಟ ಮಾಡುತ್ತಿದ್ದಾರೆ. ಆದರೆ ಜನರ ಗಮನ ಬೇರೆಡೆ ಸೆಳೆಯಲು ಭಾವಾನಾತ್ಮಕ ವಿಷಯವಾದ ಭಾಷಾ ವಿವಾದವನ್ನು ಮತ್ತೇ ಮತ್ತೇ ಪ್ರಸ್ತಾಪಿಸಿ ಜನರ ದಿಕ್ಕು ತಪ್ಪಿಸುತ್ತಿದೆ. ಇದರ ಮುಂದುವರಿದ ಭಾಗವೇ ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಮಾಹಾರಾಷ್ಟ್ರ ಸರಕಾರ ಬೆಳಗಾವಿಯಲ್ಲಿ ಒಂದು ಕಚೇರಿ ತೆರೆಯುವ ಪ್ರಸ್ತಾಪ ಮಾಡುತ್ತಿದೆ. ಇಂದು ಒಂದು ತಿರುಕನ ಕನಸಾಗಿದೆ. ನೀವು ಇಲ್ಲಿ ಕಚೇರಿ ತೆರೆಯುವುದಾದರೇ ಕೊಲ್ಲಾಪೂರ, ಸಾಂಗ್ಲಿ, ಕೊಲ್ಲಾಪೂರ, ಪೂನಾ, ಮುಂಬೈ,ಇಚಲಕರಂಜಿಯಲ್ಲಿ ಕನ್ನಡ ಭಾಷಿಕರು ಹೆಚ್ಚಾಗಿದ್ದಾರೆ. ಅವರಿಗಾಗಿ ನಮ್ಮ ಕಚೇರಿಯನ್ನು ತೆರೆಯಲು ಅನುಮತಿ ನೀಡಿ ಆ ಮೇಲೆ ನಿಮ್ಮ ಇಂತಹ ಉದ್ಧಟತನದ ಮಾತುಗಳನ್ನು ನೋಡೋಣ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬೆಳಗಾವಿಯ ಮರಾಠಿ ಜನಾಂಗದ ಅನೇಕ ಮಿತ್ರರು ಕನ್ನಡ ವಿಷಯದಲ್ಲಿ ಎಂಎ ಪದವಿ ಪಡೆದು ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಅವರೆಲ್ಲ ನಮ್ಮ ಕರ್ನಾಟಕದ ಬೆಳಗಾವಿಯವರೇ ಆಗಿದ್ದು, ನಮ್ಮ ಬಂಧೂಗಳಾಗಿದ್ದಾರೆ. ಜೊತೆಗೆ ಮರಾಠಾ ಅಭಿವೃದ್ಧಿ ಪ್ರಾಕಾರವನ್ನು ನಮ್ಮ ಸರಕಾರ ರಚಿಸಿದೆ. ನೀವು ಈ ಕೆಲಸ ಮಾಡಿ ಇಂತಹ ಉದ್ದಟತನದ ಮಾತುಗಳಿಗೆ ಬ್ರೇಕ್ ಹಾಕಬೇಕು ಎಂದು ಎಚ್ಚರಿಕೆ ನೀಡಿದರು. 

ಸುದ್ದಿ ಓದಿ