ಶಿಗ್ಗಾವ್

ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ

ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ

ಶಿಗ್ಗಾವಿ 25: 60 ವರ್ಷ ಮೇಲ್ಪಟ್ಟವರೆಲ್ಲರೂ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಮಾಡಿಕೊಂಡು ತಮ್ಮ ಮುಂದಿನ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಳ್ಳೋಣ ಎಂದು ತಾಲೂಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಪಿ.ಹೆಚ್. ಹೇಳಿದರು.

ಪಟ್ಟಣದ ತಾಲೂಕ ಮಟ್ಟದ ಆಸ್ಪತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾ ಶಿಗ್ಗಾವಿ ಮಂಡಲದ ವತಿಯಿಂದ ಏರ್ಪಡಿಸಿದ ಕೊರೊನಾ ಲಸಿಕೆಯ ಜಾಗೃತಿ ಅಭಿಯಾನ ಕುರಿತು ಮಾತನಾಡಿದ ಅವರು ಕೊರೋನಾ ಲಸಿಕೆ ಹಾಕುವುದರಿಂದ ಯಾವುದೇ ತರಹದ ಅಡ್ಡ ಪರಿಣಾಮಗಳು ಬೀರುವುದಿಲ್ಲ, ಭಯ ಪಡದೇ, ಅಂಜದೇ, ಧೈರ್ಯವಾಗಿ 60 ವರ್ಷ ಮೇಲ್ಪಟ್ಟವರು ಮತ್ತು ದೀರ್ಘಕಾಲದ ಚಿಕಿತ್ಸೆ ಮಾತ್ರೆಗಳನ್ನು ಪಡೆಯುವವರು ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳುವುದು ಒಳಿತು ಎಂದರು.

ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ ಮಾತನಾಡಿ ಯುವಕರು ಹೆಚ್ಚು ಹೆಚ್ಚು ತಮಗೆ ಪರಿಚಯಸ್ತರು, ನೆರೆಹೊರೆಯವರು, ಕುಟುಂಬದ ಸದಸ್ಯರು ಯಾರು 60 ವರ್ಷ ಮೇಲ್ಪಟ್ಟವರು ಇರುತ್ತಾರೆ ಅಂತವರನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಕೊರೋನಾ ಲಸಿಕೆಯನ್ನು ಪಡೆಯಿರಿ ಎಂದು ಜಾಗೃತಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ರೇಣುಕನಗೌಡ ಪಾಟೀಲ, ಕಾಶೀನಾಥ ಕಳ್ಳಿಮನಿ, ಪ್ರತೀಕ ಕೊಳೇಕರ, ವಿನಯ ಮುಂಡಗೋಡ, ರಾಜೇಶ ದೊಡ್ಡಮನಿ, ಚೇತನ ಕಲಾಲ, ಸಚಿನ ಮಡಿವಾಳರ, ರಾಘವೇಂದ್ರ ಅಟದಕರ, ಹನುಮಂತ ಗುಳೇದ, ಮಂಜುನಾಥ ಬಂಕಾಪೂರ, ಮಂಜುನಾಥ ಪವಾರ, ಬಸವರಾಜ ಹರಪ್ಪಣ್ಣವರ,ನಿರ್ಮಲಾ ಯಡೆಪ್ಪನವರ, ಭಾರತಿ ರಾಂಪೂರಮಠ, ರತ್ನಾ ಬನ್ನಿಕೊಪ್ಪ ಸೇರಿದಂತೆ ನೂರಾರು ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ